Home ಜಿಲ್ಲೆ ಖಾಸ್ಗತಮಠವು ಕಾಶಿ ಕೇಂದ್ರದAತಾಗಲಿದೆ:ರಾಜುಗೌಡ

ಖಾಸ್ಗತಮಠವು ಕಾಶಿ ಕೇಂದ್ರದAತಾಗಲಿದೆ:ರಾಜುಗೌಡ

ತಾಳಿಕೋಟೆ: ಪಟ್ಟಣದ ಶ್ರೀ ಖಾಸ್ಗತೇಶ್ವರ ಮಠಕ್ಕೆ ದೇವರ ಹಿಪ್ಪರಗಿ ಮತಕ್ಷೇತ್ರದ ಶಾಸಕ ರಾಜುಗೌಡ ಪಾಟೀಲ(ಕುದರಿಸಾಲವಾಡಗಿ) ಅವರು ಶುಕ್ರವಾರರಂದು ಬೆಟ್ಟಿ ನೀಡಿ ಶ್ರೀ ಖಾಸ್ಗತೇಶ್ವರರ ಹಾಗೂ ವಿರಕ್ತಶ್ರೀಗಳ ಗದ್ದುಗೆಯ ದರ್ಶನ ಪಡೆದು ಮಹಾಪೂಜೆ ಸಲ್ಲಿಸಿದರಲ್ಲದೇ ಶ್ರೀಮಠದ ಬಾಲಶಿವಯೋಗಿ ಶ್ರೀ ಸಿದ್ದಲಿಂಗ ದೇವರಿಂದ ಆಶಿರ್ವಾದ ಪಡೆದುಕೊಂಡರು.
ಶ್ರೀ ಖಾಸ್ಗತೇಶ್ವರ ಮಠದ ಜಾತ್ರೋತ್ಸವವು ಪ್ರಾರಂಭಗೊAಡಿದ್ದರಿAದ ಮಠಕ್ಕೆ ಬೆಟ್ಟಿ ನೀಡಿದ ಶಾಸಕ ರಾಜುಗೌಡ ಪಾಟೀಲ ಅವರು ಗುಪ್ತ ಕಾಣಿಕೆಯನ್ನು ಶ್ರೀಮಠಕ್ಕೆ ಅರ್ಪಿಸಿದರಲ್ಲದೇ ಬಾಲಶಿವಯೋಗಿ ಶ್ರೀ ಸಿದ್ದಲಿಂಗ ದೇವರನ್ನು ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಿದರು. ಈ ಸಮಯದಲ್ಲಿ ಮಾತನಾಡಿದ ಶಾಸಕ ರಾಜುಗೌಡರು ಶ್ರೀ ಖಾಸ್ಗತ ಮಠವು ರಾಜ್ಯದ ಪ್ರಮುಖ ಮಠಗಳಲ್ಲಿ ಒಂದಾಗಿ ಬೆಳೆಯುತ್ತಾ ಸಾಗಿದೆ ಶ್ರೀಮಠವು ಮುಂಬರುವ ದಿನಗಳಲ್ಲಿ ಇನ್ನೂ ಲಕ್ಷಾಂತರ ಭಕ್ತರನ್ನು ಹೊಂದಲಿದೆ ಈಗಾಗಲೇ ಮುಂಬೈ, ಪುಣೆ, ಬೆಂಗಳೂರ, ಹೈದ್ರಾಬಾದ, ವಿವಿಧ ಪ್ರಮುಖ ನಗರ ಪಟ್ಟಣಗಳಿಂದ ಭಕ್ತರು ಆಗಮಿಸಿ ಜಾತ್ರೆಯಲ್ಲಿ ಪಾಲ್ಗೊಂಡು ಶ್ರೀಗಳ ದರ್ಶನ ಪಡೆಯುತ್ತಾ ಸಾಗಿದ್ದಾರೆ ನಾನು ಶಾಸಕನಾಗಿ ಆಯ್ಕೆಯಾಗಿರುವದು ಶ್ರೀ ಖಾಸ್ಗತರ ಹಾಗೂ ವಿರಕ್ತಶ್ರೀಗಳ ಆಶಿರ್ವಾದಿಂದಾಗಿದೆ ನಾನು ಸದಾ ಶ್ರೀಮಠದ ಭಕ್ತನಾಗಿ ಇರುತ್ತೇನೆ ಶ್ರೀಮಠದ ಪ್ರತಿ ಕಾರ್ಯದಲ್ಲಿ ಭಾಗಿಯಾಗುವದರೊಂದಿಗೆ ನನ್ನ ಭಕ್ತಿಯ ಸೇವೆಯನ್ನು ಸಲ್ಲಿಸುತ್ತೇನೆಂದರು.
ಇದೇ ಸಮಯದಲ್ಲಿ ಶ್ರೀಗಳು ಸಹ ಶಾಸಕ ರಾಜುಗೌಡರನ್ನು ಗೌರವಿಸಿದರಲ್ಲದೇ ಪ್ರಸಾದವನ್ನು ನೀಡಿ ಶ್ರೀಖಾಸ್ಗತರು ಮತ್ತು ವಿರಕ್ತಶ್ರೀಗಳು ತಮ್ಮ ಜನಪರವಾದ ಕಾರ್ಯಗಳಿಗೆ ಶಕ್ತಿ ನೀಡಲಿ ಮುಂದಿನ ದಿನಗಳಲ್ಲಿ ಒಳ್ಳೆಯ ಭವಿಷ್ಯವನ್ನು ಕಲ್ಪಿಸಲಿ ಎಂದು ಆಶಿಸಿ ಆಶಿರ್ವದಿಸಿದರು.

ಈ ಸಮಯದಲ್ಲಿ ಶ್ರೀಮಠದ ಉಸ್ತುವಾರಿ ವೇ.ಮುರುಘೇಶ ವಿರಕ್ತಮಠ, ಜೆಡಿಎಸ್ ತಾಲೂಕಾ ಅಧ್ಯಕ್ಷ ಮಡುಸಾಹುಕಾರ ಬಿರಾದಾರ, ಬಂದು, ಆಪ್ತಸಹಾಯಕ ಲಕ್ಷö್ಮಣ ರ‍್ಯಾಗೇರಿ, ಮೊದಲಾದವರು ಉಪಸ್ಥಿತರಿದ್ದರು.

ಶ್ರೀ ಖಾಸ್ಗತ ಮಠವು ಈ ಭಾಗದ ಭಕ್ತರ ಪಾಲಿನ ಆರಾದ್ಯಮಠವಾಗಿದೆ ಶ್ರೀಮಠದ ಜಾತ್ರೆ ಉತ್ಸವಗಳಿಗೆ ಪ್ರತಿವರ್ಷವು ಭಾಗಿಯಾಗುತ್ತಿದ್ದೇನೆ ಶ್ರೀಖಾಸ್ಗತರ, ವಿರಕ್ತಶ್ರೀಗಳ ಶಕ್ತಿ ಅಪಾರವಾದುದ್ದಾಗಿದೆ ಶ್ರೀಮಠಕ್ಕೆ ಭಕ್ತಿಯಿಂದ ನಡೆದುಕೊಂಡವರಿಗೆ ಯಾವಾಗಲು ಒಳ್ಳೆಯದ್ದಾಗಿದೆ.
                                    ರಾಜುಗೌಡ ಪಾಟೀಲ(ಕು.ಸಾಲವಾಡಗಿ)
                                    ಶಾಸಕರು ದೇವರ ಹಿಪ್ಪರಗಿ ಕ್ಷೆತ್ರ