ಚಿತ್ರದುರ್ಗ,ಏ.೨೧-ಜಮೀನಿನಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿದ್ದ ಆರೋಪಿಯನ್ನು ಬಂಧಿಸುವಲ್ಲಿ ನಾಯಕನಹಟ್ಟಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಚಳ್ಳಕೆರೆ ತಾಲೂಕಿನ ಗುಂತ ಕೊಲಮ್ಮನಹಳ್ಳಿ ಗ್ರಾಮದ ಪಾಲಯ್ಯ ಜಿ (೫೮) ಬಂಧಿತ ಆರೋಪಿಯಾಗಿದ್ದಾನೆ.
ಬಂಧಿತ ಆರೋಪಿಯು ಜಮೀನಿನಲ್ಲಿ ಬೆಳೆದಿದ್ದ ೧೮ ಲಕ್ಷ ರೂ. ಮೌಲ್ಯದ ೭೯೧ ೧೮೭ ಕೆಜಿ ಸೊಪ್ಪನ್ನು ವಶಕ್ಕೆ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಜಮೀನಿನಲ್ಲಿ ಅಕ್ರಮವಾಗಿ ಗಾಂಜಾ ಗಿಡ ಬೆಳೆದಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಭಂಡಾರು ಹಾಗು ಚಳ್ಳಕೆರೆ ಉಪ ಡಿವೈಎಸ್ಪಿ ಸತ್ಯನಾರಾಯಣ ರಾವ್ ಮಾರ್ಗದರ್ಶನದಲ್ಲಿ, ತಳಕು ಪೊಲೀಸ್ ವೃತ್ತ ನಿರೀಕ್ಷಕ ಹನುಮಂತಪ್ಪ ಎಂ ಶಿರೇಹಳ್ಳಿ, ನಾಯಕನಹಟ್ಟಿ ಪೊಲೀಸ್ ಪಿಎಸ್‌ಐ ಜಿ ಪಾಂಡುರಂಗಪ್ಪ ನೇತೃತ್ವದೊಂದಿಗೆ ಪೊಲೀಸರ ತಂಡ ದಾಳಿ ನಡೆಸಿದೆ.
ದಾಳಿಯಲ್ಲಿ ಅಬಕಾರಿ ಅಧೀಕ್ಷಕ ಕಿರಣ್ ಸೇರಿದಂತೆ ಅವರ ಸಿಬ್ಬಂದಿ ಸಹ ಪಾಲ್ಗೊಂಡಿದ್ದರು.




















