
ಬೀದರ:ಮೇ.16:ಜ್ಞಾನಸುಧಾ ಪದವಿ ಕಾಲೇಜಿನಲ್ಲಿ ಜ್ಞಾನಸುಧಾ ಶಿಕ್ಷಣ ಸಂಸ್ಥೆಯಿಂದ ವಿದ್ಯಾರ್ಥಿಗಳಿಗೆ “ಪದವಿಯ ನಂತರ ವಿವಿಧ ವೃತ್ತಿ ಅವಕಾಶಗಳನ್ನು ಹೇಗೆ ಅನ್ವೇಷಿಸುವುದು” ಕುರಿತು ಒಂದು ದಿನದ ಕಾರ್ಯಗಾರ ಯಶಸ್ವಿಯಾಗಿ ನಡೆಯಿತು. Exploring the various career opportunities after Graduation ಶೀರ್ಷಿಕಯಡಿ ನಡೆದ ಕಾರ್ಯಾಗಾರದಲ್ಲಿ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡು ಸ್ಪರ್ಧಾತ್ಮಕ ಯುಗದಲ್ಲಿ ಯಾವ ರೀತಿಯಾಗಿ ಅವಕಾಶಗಳನ್ನು ತಮ್ಮದಾಗಿಸಕೊಳ್ಳಬೇಕು ಎಂದು ವಿವಿಧ ರೀತಿಯ ಮಾರ್ಗಗಳನ್ನು ಅರಿತರು.
ಈ ಕಾರ್ಯಗಾರದ ಸಂಪನ್ಮೂಲ ವ್ಯಕ್ತಿ ನಮ್ರತಾ ಅಟಲ್ ಅವರು ವಿದ್ಯಾರ್ಥಿಗಳಿಗೆ ಪದವಿ ಮುಗಿಸಿದ ನಂತರ ವೃತ್ತಿ ಜೀವನವನ್ನು ರೂಪಿಸಿಕೊಳ್ಳಲು ಹಲವು ಅದ್ಭುತ ಅವಕಾಶಗಳಿವೆ ನಿಮ್ಮ ಆಸಕ್ತಿ, ಶಿಕ್ಷಣ ಮತ್ತು ಕೌಶಲ್ಯಗಳಿಗೆ ಅನುಗುಣವಾಗಿ ನೀವು ವಿವಿಧ ಕ್ಷೇತ್ರಗಳನ್ನು ಆಯ್ಕೆ ಮಾಡಬಹುದು ಪ್ರಸ್ತುತ ಯುಗದಲ್ಲಿ ಪದವಿಯ ನಂತರ ಲಭ್ಯವಿರುವ ಪ್ರಮುಖ ವೃತ್ತಿ ಆಯ್ಕೆಗಳ ಬಗ್ಗೆ ಮಾಹಿತಿ ನೀಡಿದರು.
ಜ್ಞಾನಸುಧಾ ಪದವಿ ಕಾಲೇಜಿನ ಪ್ರಾಂಶುಪಾಲರಾದ ಚನ್ನವೀರ ಪಾಟೀಲ್ ಕಾರ್ಯಾಗಾರದಲ್ಲಿ ಮಾತನಾಡಿ, ವಿದ್ಯಾರ್ಥಿಗಳಿಗೆ ಪದವಿ ಮುಗಿದ ನಂತರ ಭವಿಷ್ಯದಲ್ಲಿ ಹಲವಾರು ಅವಕಾಶಗಳಿದ್ದು ನಿಮ್ಮ ವೃತ್ತಿ ಆಯ್ಕೆಯನ್ನು ಅಂತಿಮಗೊಳಿಸುವ ಮುನ್ನ ನಿಮ್ಮ ಆಸಕ್ತಿ ಮತ್ತು ಕೌಶಲ್ಯಗಳನ್ನು ಪರೀಕ್ಷಿಸಿಕೊಳ್ಳಿ ಯಶಸ್ವಿ ಭವಿಷ್ಯಕ್ಕಾಗಿ ವೃತ್ತಿ ಮಾರ್ಗದರ್ಶನ ಪಡೆಯುವುದು ಒಳ್ಳೆಯದು ಎಂದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.






















