
ಕಲಬುರಗಿ:ಮಾ.11: ಆಳಂದ ತಾಲೂಕಿನ ಬೆಣ್ಣೆ ಶಿರೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2025-26ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಎಂಟನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ವಿಜೃಂಭಣೆಯಿಂದ ಜರುಗಿತು.
ಕಾರ್ಯಕ್ರಮಕ್ಕೆ ದಿವ್ಯ ಸಾನಿಧ್ಯವನ್ನು ಪ್ರಕಾಶ ಮಹಾರಾಜರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಅಫಜಲಪೂರ ತಾಲೂಕ ಪ್ರೌಢಶಾಲಾ ಮುಖ್ಯ ಗುರುಗಳ ಸಂಘದ ಅಧ್ಯಕ್ಷರಾದ ರಾಜಶೇಖರ್ ತಲಾರಿ ಮಾತನಾಡುತ್ತಾ ಮಕ್ಕಳಿಗೆ ಪ್ರಾಥಮಿಕ ಹಂತದ ಶಿಕ್ಷಣ ಗುಣಮಟ್ಟದಿಂದ ಕೂಡಿದರೆ ಅವರ ಜೀವನದಲ್ಲಿ ಖಂಡಿತವಾಗಿಯೂ ಯಶಸ್ವಿ ಯಾಗುತ್ತದೆ ಹಾಗೂ ಮಕ್ಕಳ ಕೈಗೆ ಮೊಬೈಲ್ ಕೊಡಬೇಡಿ ಅವರನ್ನು ಮೊಬೈಲ್ ನಿಂದ ದೂರವಿಡಿ ಎಂದು ಪಾಲಕರಿಗೆ ಮನವಿ ಮಾಡಿಕೊಂಡರು.
ಹಣಮಂತ ಸನಾದಿ, ಭೂತಾಳಿ ಹಿರೇಪೂಜಾರಿ, ಶರಬಯ್ಯ ಸ್ವಾಮಿ, ಮಚೇಂದ್ರ ಪಾಟೀಲ್ ಹಾಗೂ ರಾಘವೇಂದ್ರ ಸ್ವಾಮಿ ಭಾಗವಹಿಸಿದರು. ಊರಿನ ಪ್ರಮುಖರಾದ ರಾಹುಲ್ ಪೆÇಲೀಸ್ ಪಾಟೀಲ್, ಧರ್ಮರಾವ್ ಮಾಶಾಳ್ಕರ್, ಲಕ್ಷ್ಮಣ ಸುಗೂರ್, ರವಿ ಹದಲೂರ್, ಸುರೇಶ್ ಬಂಡಗಾರ್ , ದಯಾನಂದ ತಲಾರಿ, ಸೇರಿದಂತೆ ಅನೇಕರು ಹಾಗೂ ಪಾಲಕರು ಉಪಸ್ಥಿತರಿದ್ದರು. ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ಸಂತೋಷ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕರಾದ ಕಲ್ಯಾಣಪ್ಪ ಅಡಕಿ ಕಾರ್ಯಕ್ರಮದ ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಶಾಂತ ತೇಲಿ ಸ್ವಾಗತಿಸಿದರು. ಅಂಬಿಕಾ ಹಾಗೂ ಸಂಗಡಿಗರು ಪ್ರಾರ್ಥನಾ ಗೀತೆ ಹಾಡಿದರು. ಸಂತೋಷ್ ಕುಮಾರ್ ಮೇಲ್ಕೆರಿ ಮತ್ತು ಸಂತೋಷ್ ಕುಮಾರ್ ಬಿರಾದಾರ್ ಕಾರ್ಯಕ್ರಮವನ್ನು ನಿರೂಪಿಸಿದರು. ಶಾಲೆಯ ಅತಿಥಿ ಶಿಕ್ಷಕರಾದ ರಾಜಶೇಖರ ಮಾಶಾಳಕರ, ಲಕ್ಷ್ಮಿಪುತ್ರ ವಾಗ್ಮೊಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಮಾರಂಭದ ಕೊನೆಯಲ್ಲಿ ಕಲ್ಲಪ್ಪ ಭುಜರಿ ವಂದನಾರ್ಪಣೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಎಂಟನೇ ತರಗತಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ನೀಡಿ, ಅವರ ಮುಂದಿನ ವಿದ್ಯಾಭ್ಯಾಸಕ್ಕೆ ಎಲ್ಲರೂ ಶುಭ ಹಾರೈಸಿದರು.




















