
ಕಲಬುರಗಿ: ನಗರದ ಕೆಬಿಎನ ವಿಶ್ವ ವಿದ್ಯಾಲಯದ ಮೆಡಿಕಲ ನಿಕಾಯದ ಪ್ಯಾಥಾಲಜಿ ಮತ್ತು ಫಿಜಿಯೋಲೋಜಿ ವಿಭಾಗದ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡ ‘ ಇನ್ಸೈಡ್ ದಿ ಮ್ಯಾರೋ : ಬ್ರಿಡ್ಜ್ಯಿಂಗ ಹೆಮಟೊಪೊಯಿಸಿಸ್ ಮತ್ತು ಹೆಮಟೊಪಾಥಾಲಜಿ’ ವಿಷಯ ಕುರಿತು ಸಿ ಎಮ್ ಈ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿವಿಯ ಸಮ ಉಪಕುಲಪತಿ ಪ್ರೊ ಅಶಫಾಕ ಅಹ್ಮದ ಮಾತನಾಡಿ ಸಿ ಎಮ್ ಈ ಗಳನ್ನು ಅರ್ಥ ಪೂರ್ಣವಾಗಿ ಆಯೋಜಿಸಿ ಸಮಾಜಕ್ಕೆ ಉಪಯೋಗ ಮಾಡಬೇಕು. ವರದಿ ತಯಾರಿಸುವುದುಷ್ಟೇ ಅಲ್ಲ ಅದರ ಮೇಲೆ ಕಾಲಾಂತರ ಅಧ್ಯಯನವಾಗಬೇಕು. ಕೆಬಿಎನ ವಿವಿ ಎಲ್ಲ ಸಿ ಎಮ್ ವಿವಿರಾಗಳನ್ನು ಬುಕ್ ಮಾದರಿಯಲ್ಲಿ ಪ್ರಕಟಿಸುವ ಯೋಜನೆಯಲ್ಲಿ ಇದೆ ಎಂದರು.
ಮೆಡಿಕಲ ಡೀನ್ ಡಾ ಗುರುಪ್ರಸಾದ ಆಯೋಜಕರಿಗೆ ಅಭಿನಂದನೆಗಳನ್ನು ತಿಳಿಸಿದರು.
ಸಿನಿಯರ್ ಕನ್ಸಲ್ಟ್ಯಂಟ್ ಪೆತೊಲೊಜಿಸ್ಟ್, ಕಲಬುರ್ಗಿ ಪೆತೋಲೋಜಿ ಅಸೊಸಿಯೇಷನ ಅಧ್ಯಕ್ಷ ಡಾ ಎ ವಿ ದೇಶಮುಖ `ಈ ಸಿ ಎಮ್ ಈ ಎಲ್ಲ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿದೆ. ನವ ಕೌಶಲ್ಯ ಕಲಿಕೆಗೆ ಸಹಾಯ ವಾಗಲಿದೆ ಎಂದು ಆಯೋಜಕರಿಗೆ ಅಭಿನಂದಿಸಿದರು.ಐ ಕ್ಯೂ ಎ ಸಿ ನಿರ್ದೇಶಕ ಡಾ ಅಬ್ದುಲ ಬಷೀರ ಸಿ ಎಮ್ ಈ ಗಳ ಆಯೋಜನೆ ನಿರಂತರ ಪ್ರಕ್ರಿಯೆ ಎಂದರು.
ಸುಮಾರು ೨೫೦ ಅಭ್ಯರ್ಥಿಗಳು ನೋಂದಣಿ ಮಾಡಿದ್ದರು. ರಸಪ್ರಶ್ನೆ ಸ್ಪರ್ಧೆ ಜರುಗಿತು. ವಿವಿಧ ಗೋಷ್ಠಿಗಳು ಜರುಗಿದವು.ಈ ಕಾರ್ಯಕ್ರಮದಲ್ಲಿ , ಡಾ ರಾಘವೇಂದ್ರ ಶೇಖರ್, ಪ್ರೊಫೆಸರ್ ಮಲ್ಲಾ ರೆಡ್ಡಿ ವಿಶ್ವ ವಿದ್ಯಾಪೀಠ, ಡಾ ಪ್ರತಿಮಾ, ಕೆಬಿಎನ ಆಸ್ಪತ್ರೆ ಸೂಪೇರಿಟೆಂಡೆAಟ ಡಾ ಸಿದ್ಧಲಿಂಗ ಚೆಂಗಟಿ, ಡಾ ಸಿದ್ಧೇಶ ಶೀರ್ವಾರ, ಡಾ ಇಮ್ತಿಯಾಜ ಅಲಿ, ಡಾ ಅಭಿದಾ, ಡಾ ಮೊಹಮ್ಮದ ಅಹ್ಮದ, ಡಾ ಸುಧಾರಾಣಿ, ಡಾ ಸಾಹೇರ್, ಡಾ ಮಂದಾಕಿನಿ, ಡಾ ಜಿನತ, ಡಾ ಹೀನಾ, ಡಾ ಗೀತಾಂಜಲಿ, ಡಾ ಅಫ್ರಾ, ಡಾ ತಂಹಿಯತ ಅರಾ, ಡಾ ಸುಮಯ್ಯ ಫಿರ್ದೋಸ, ಡಾ ಸಫುರಾ, ಡಾ ತುಬಾ, ಡಾ ಸಿದ್ರಾಹ್, ಡಾ ಕುಡಚಿ ಹಾಗೂ ವಿಭಾಗಗಳ ಎಲ್ಲ ವಿದ್ಯಾರ್ಥಿಗಳು ಹಾಜರಿದ್ದರು. .
ಕಿರಾತದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ವಿಭಾಗ ಮುಖ್ಯಸ್ಥ ಡಾ ಮೊಹಮ್ಮದ ಇಬ್ರಾಹಿಂ ಸಿದ್ದಿಕ್ವಿ, ಡಾ ಅಭಿದಾ ಫರಹೀನ ವಂದಿಸಿದರು.































