ಚಡಚಣ ಏತ ನೀರಾವರಿ ಯೋಜನೆ ಅವ್ಯವಸ್ಥೆ ನೋಡಿ ದಂಗಾದ ಕೆಬಿಜೆಎನ್‍ಎಲ್ ಎಂಡಿ !

ಚಡಚಣ,ಜೂ.12-ಸುಮಾರು 8 ವರ್ಷಗಳ ಹಿಂದೆ 480 ಕೋಟಿ ವೆಚ್ಚದಲ್ಲಿ ಪ್ರಾರಂಭವಾದ ಚಡಚಣ ಏತ ನೀರಾವರಿ ಯೋಜನೆಯ ಕಾಮಗಾರಿಯನ್ನು ಕೆಬಿಜೆಎನ್‍ಎಲ್ ಎಂಡಿ ಕೆ.ಪಿ ಮೋಹನ ರಾಜ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಕಳಪೆ ಕಾಮಗಾರಿಯ ಕುರಿತು ಅನೇಕ ಕಡೆಗಳಲ್ಲಿ ರೈತರು ಎಂಡಿಯವರನ್ನು ಸುತ್ತುವರಿದು ಕಾಮಗಾರಿ ಮಾಡದೆ ಯೋಜನೆ ಪೂರ್ಣಗೊಂಡಿದೆ ಎಂದು ತೋರಿಸಿ ಅಧಿಕಾರಿಗಳು ಹಣ ಲಪಟಾಯಿಸಿದ್ದಾರೆ ಎಂದು ಆರೋಪಿಸಿದರು ಅಷ್ಟೆ ಅಲ್ಲದೆ ರೈತರು ಸಾಬೀತು ಕೂಡಾ ಮಾಡಿದರು.
ಕೆಬಿಜೆಎನ್‍ಎಲ್ ಅಧಿಕಾರಿಗಳು (ಝಳಕಿ, ಆಲಮೇಲ, ಇಂಡಿ, ರಾಂಪೂರ ಇಇ, ಎಇಇಗಳು) ಕೆಲಸ ಮುಗಿಸಿದ ಕೆಲವು ಕಡೆಗಳಲ್ಲಿ ಮಾತ್ರ ಕರೆದುಕೊಂಡು ಹೋದರು (ಜಾಣಕುರುಡರಂತೆ) ಎಂ.ಡಿ ಭೇಟಿ ನೀಡಿದ ಬಹುತೇಕ ಕಡೆಗಳಲ್ಲಿ ವಾಸ್ತವವಾಗಿ ಕಾಮಗಾರಿ ಮುಗಿಯದೆ ಇರುವದು ಗಮನಕ್ಕೆ ಬಂದಿತು. ಆದರೇ ಅಧಿಕಾರಿಗಳ ದಾಖಲಾತಿಯಲ್ಲಿ (ರಿಪೆÇೀರ್ಟಗಳಲ್ಲಿ) ಎಲ್ಲ ಕಾಮಗಾರಿ ಮುಗಿದು ಗುತ್ತಿಗೆದಾರರ ಬಿಲ್ಲು ಕೊಟ್ಟಿರುವ ಸಂಗತಿ ಬೆಳಕಿಗೆ ಬಂದಿತು. ಎಂ.ಡಿ ಅಧಿಕಾರಿಗಳಿಗೆ ಯೋಜನೆಯ ಕುರಿತು ಮಾಹಿತಿ ಕೇಳಿದಾಗ ಬಹುತೇಕ ಅಧಿಕಾರಿಗಳು ಉತ್ತರಕೊಡಲು ತಡಬಡಾಯಿಸಿದರು. ಅಧಿಕಾರಿಗಳು ಕಾಂಟ್ಯ್ರಾಕ್ಟರ ಮೇಲೆ ಜವಾಬ್ದಾರಿ ಹೊರೆಸುವ ಪ್ರಯತ್ನವನ್ನು ಮಾಡಿದರು.
ಚಡಚಣ ಏತ ನೀರಾವರಿ ವ್ಯಾಪಿಯಲ್ಲಿ 600 ಔಟಲೆಟ್‍ಗಳಿದ್ದು ಇದರಲ್ಲಿ ಕೇವಲ 150 ಔಟಲೆಟ್‍ಗಳಲ್ಲಿ ಮಾತ್ರ ಪ್ರಾಯೋಗಿಕವಾಗಿ ನೀರು ಹರಿದಿರುವದನ್ನು ಸ್ವತ ಅಧಿಕಾರಿಗಳ ಒಪ್ಪಿಕೊಂಡರು. ಆದರೆ ನೀರು ರೈತರ ಹೊಲಗಳಿಗೆ ತಲುಪುವ ವ್ಯವಸ್ಥೆ ಎಂಡಿ ಭೇಟಿ ನೀಡಿದ ಪ್ರತಿ ಸ್ಥಳಗಳಲ್ಲಿ ರೈತರು ಯೋಜನೆಯ ಅಕ್ರಮದ ಕುರಿತು ಮಾಹಿತಿಯನ್ನು ನೀಡಿದರು. ಈ ಸಂದರ್ಭದಲ್ಲಿ ನಾಗಠಾಣ ಶಾಸಕರಾದ ವಿಠ್ಠಲ ಕಟಕದೊಂಡ ಮತ್ತು ಕೆಬಿಜೆಎನ್‍ಎಲ್ ಎಲ್ಲ ಹಂತದ ಅಧಿಕಾರಿಗಳು ಹಾಜರಿದ್ದರು.
ನಂತರ ಚಡಚಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೆಂಗಳುರಿನ ಮೋಹನ ಕುಮಾರ ತಾವು ಕಳೆದ ಮೂರು ದಿನಗಳಿಂದ ಇಂಡಿ ಮತ್ತು ಚಡಚಣ ತಾಲೂಕುಗಳ ಕೆರೆ ತುಂಬುವ ಯೋಜನೆ ಮತ್ತು ಚಡಚಣ ಏತ ನೀರಾವರಿ ಯೋಜನೆ ಕುರಿತು ಅವಲೋಕನ ನಡೆಸಿದ್ದೆನೆ. ಚಡಚಣ ಏತ ನೀರಾವರಿಯ ವಿಷಯದಲ್ಲಿ ಲೋಪಗಳು ನಡೆದಿರುವದು ನನ್ನ ಗಮನಕ್ಕೆ ಬಂದಿದೆ. ಈ ದಿಸೆಯಲ್ಲಿ ಅಧಿಕಾರಿಗಳ ಸಭೆಯನ್ನು ನಡೆಸಿ ಕುಲಂಕುಶವಾಗಿ ಪರಿಶೀಲನೆ ನಡೆಸುತ್ತೆನೆ ಮತ್ತು 6 ತಿಂಗಳಲ್ಲಿ ಈ ಯೋಜನೆ ವ್ಯವಸ್ಥಿತ ರೀತಿಯಲ್ಲಿ ಕಾರ್ಯರೂಪಗೊಳ್ಳುವಂತೆ ಮಾಡುತ್ತೆನೆ. ನಾಗಠಾಣ ಶಾಸಕರು ನನಗೆ ಅನೇಕ ಬಾರಿ ಭೇಟಿಯಾಗಿ ಈ ಯೋಜನೆಯ ಕುರಿತು ಮಾಹಿತಿಯನ್ನು ನೀಡಿದ್ದಾರೆ. ಈ ಯೋಜನೆಗೆ ಸ್ಕಾಡ ಅಳವಡಿಸಬೇಕು ಎಂಬ ವಿನಂತಿಯನ್ನು ಮಾಡಿದ್ದಾರೆ. ಈ ದಿಸೆಯಲ್ಲಿ ಇಗಾಗಲೆ ಸರಕಾರದ ಮಟ್ಟದಲ್ಲಿ ಪ್ರಕ್ರಿಯ ಪ್ರಾರಂಭವಾಗಿದೆ ಎಂದು ಹೇಳಿದರು.
ಯೋಜನೆ ಹಳ್ಳು ಹಿಡಿಯುವಂತೆ ಮಾಡಿದ ಅಧಿಕಾರಿಗಳ ಮೇಲೆ ಕ್ರಮ ಕೈಕೊಳ್ಳುತ್ತಿರಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ನಾನು ಮೊದಲು ಯೋಜನೆ ಸಮಗ್ರ ಮಾಹಿತಿಯನ್ನು ಪಡೆಯುತ್ತೆನೆ ಮತ್ತು ಮುಂದೆ ಕ್ರಮ ಕೈಕೊಳ್ಳುವಾಗಿ ಹೇಳಿದರು. ಚಡಚಣ ತಾಲೂಕಿನ ಕೆರೆಗಳನ್ನು ತುಂಬುವ ಕುರಿತು ಕೇಳಿದ ಪ್ರಶೆಗೆ ಅಧಿಕಾರಿಗಳು ಶೇ.30 ರಷ್ಟು ಕೆರೆ ತುಂಬಿದ್ದೆವೆ ಎಂದು ಸುಳ್ಳು ಹೇಳಿದರು ಅದಕ್ಕೆ ಪತ್ರಕರ್ತರು ಮೊನ್ನೆ ಕೆಲವು ದಿನಗಳಿಂದಈ ಭಾಗದಲ್ಲಿ ಭಾರಿ ಮಳೆ ಬಂದ ಪರಿಣಾಮ ಕೆರೆಗಳು ಶೇ.30 ತುಂಬಿವೆ ಹೊರತಾಗಿ ಇವರು ಬಿಟ್ಟ ನೀರಿನಿಂದಲ್ಲ ಎಂದರು. ಮಧ್ಯಪ್ರವೇಶಿಸಿದ ಎಂ.ಡಿ.ಮೋಹನ ರಾಜ ಅವರು ಖಂಡಿತ ಈ ಭಾಗದ ಕೆರೆಗಳನ್ನು ಮುಂದಿನ ದಿನಗಳಲ್ಲಿ 70% ತುಂಬಿಸುವ ಆಶ್ವಾಸನೆಯನ್ನು ನೀಡುವದಾಗಿ ಹೇಳಿದರು.
ಚಡಚಣ ನೀರಾವರಿ ಯೋಜನೆ 8 ವರ್ಷಗಳ ಹಿಂದೆ 480 ಕೋಟಿ ರೂ ವೆಚ್ಚದಲ್ಲಿ ಪ್ರಾರಂಭವಾಗಿದೆ ಆದರೇ ಈಗ ಅಂದಾಜು ವೆಚ್ಚ 2000 ಕೋಟಿ ರೂ ಬೇಕಾಗುತ್ತದೆ ಎಂದು ಸ್ವತ:À ಎಂಡಿ ಕೆ.ಪಿ ಮೋಹನ ರಾಜ
ಕೆಬಿಜೆಎನ್‍ಎಲ್ ಟೇಲ್ ಎಂಡ ಕಾಲುವೆಗಳಿಗೆ ನೀರು ಹರಿಸುವ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಕ್ರಮ ಕೈಕೊಳ್ಳುವಾಗಿ ಹೇಳಿದರು. ಈ ಸಂದರ್ಭದಲ್ಲಿ ಕೆಬಿಜೆಎನ್‍ಎಲ್ ಮುಖ್ಯ ಇಂಜನೀಯರ ಎಚ್. ರವಿಶಂಕರ, ಸುಪರಿಡೆಂಟ್ ಇಂಜನೀಯರ ಮನೋಜಕುಮಾರ ಗಡಬಳ್ಳಿ, ಆಲಮೇಲ, ಝಳಕಿ ಮತ್ತು ರಾಂಪೂರದ ಇಇ, ಎಇಇಗಳು ಹಾಜರಿದ್ದರು.
ಶಾಸಕ ವಿಠ್ಠಲ ಕಟಕದೊಂಡ ಅವರು ಮಾತನಾಡಿ, ಚಡಚಣ ಏತ ನೀರಾವರಿ ಚಡಚಣ ಭಾಗದ ರೈತರ ಹತ್ತಾರ ವರ್ಷದ ಕನಸಾಗಿದೆ. ಆದರೆ ಹತ್ತು ವರ್ಷಗಳಲ್ಲಿ ಆಗಿಹೋದ ಅಧಿಕಾರಿಗಳು ಯೋಜನೆಯನ್ನು ಸಂಪೂರ್ಣವಾಗಿ ಹಳ್ಳ ಹಿಡಿಸಿದ್ದಾರೆ. ನಾನು ಈ ಯೋಜನೆ ಜಾರಿಯಾಗಿ ರೈತರ ಹೊಲಗಳಿಗೆ ನೀರು ಹರಿಯುವವರೆಗೆ ಸುಮ್ಮನೆ ಕೂಡುವದಿಲ್ಲ. ಚಡಚಣ ಭಾಗದ ರೈತರಿಗೆ ಯಾವುದೆ ನೀರಾವರಿ ಯೋಜನೆಗಳು ಮುಟ್ಟಿಲ್ಲ, ಈ ಯೋಜನೆಯನ್ನು ಅಧಿಕಾರಿಗಳು ಹಳ್ಳ ಹಿಡಿಸುತ್ತಿದ್ದಾರೆ. ನಾನು ಇದಕ್ಕೆ ಆಸ್ಪದ ನೀಡುವದಿಲ್ಲ. ಆದ್ದರಿಂದಲೆ ಎಂಡಿ ಇವರನ್ನು ಪ್ರತ್ಯಕ್ಷ ಸಮೀಕ್ಷೆಗೆ ಇಲ್ಲಿ ಕರೆದುಕೊಂಡು ಬಂದಿದ್ದೆನೆ ಎಂದು ತಿಳಸಿದರು.