ಕಲಬುರಗಿ,ನ.24: ನಗರದ ಅಳಂದ ರಸ್ತೆಯ ವಿಜಯನಗರ ಕಾಲೋನಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಹೊಸ ಕಟ್ಟಡದ ಆವರಣದಲ್ಲಿ, ಸಾಲು ಮರದ ತಿಮ್ಮಕ್ಕನವರ ಸ್ಮರಣಾರ್ಥವಾಗಿ, ಕಾಯಕಯೋಗಿ ಸೇವಾ ಸಂಸ್ಥೆಯವತಿಯಿಂದ ಸಸಿಗಳನ್ನು ನೆಡಲಾಯಿತು.
ಮುಖ್ಯ ಅತಿಥಿಗಳಾಗಿ ಡಾ.ಶರಣ್ ಕುಮಾರ ಕೆ. ಭಾಗವಹಿಸಿದರು ಶಾಲೆಯ ಮುಖ್ಯೋಪಾಧ್ಯಾಯ ರವೀಂದ್ರ ಮುದ್ದಾನ, ಶಾಲೆಯ ದೈಹಿಕ ಶಿಕ್ಷಕ ಅಮರೇಶ ಕೊರಿ, ಸಿ.ಆರ್.ಪಿ ಅರ್ಷದ್ ಹಾಗೂ ಕಾರ್ಯಕ್ರಮ ಹಮ್ಮಿಕೊಂಡ ಕಾಯಕ ಯೋಗಿ ಸೇವಾ ಸಂಸ್ಥೆಯ ಅಧ್ಯಕ್ಷ ಕೇದಾರನಾಥ ಕುಲಕರ್ಣೀ, ಉಪಾಧ್ಯಕ್ಷ ವಿಜಯಕುಮಾರ್ ಬೆಳಮಗಿ, ಸಂಸ್ಥೆಯ ಕಾರ್ಯಕರ್ತರಾದ ಜಗದೀಶ್ ನಾಗೂರೆ, ಪ್ರವೀಣ ಭೋಗೊಂಡಿ,ಶಿವಕುಮಾರ ಮಠಪತಿ, ಹರೀಶ್ ಹಂಗರಗಿ, ನಾಗರಾಜ ಸಣಮನಿ ಹಾಗೂ ಬಡಾವಣೆಯ ಗಣ್ಯರಾದ ಗಂಗಾಧರ್ ಗೌಡ, ಶಾಂತಗೌಡ ಪಾಟೀಲ್ ಲಕ್ಷ್ಮೀಶ ಹತ್ತಿ, ಉಪಸ್ಥಿತರಿದ್ದರು.





















