
ಬಸವಕಲ್ಯಾಣ:ಫೆ.4: ತಾಲೂಕಿನ ಸುಕ್ಷೇತ್ರ ಹಾರಕೂಡ ಸಂಸ್ಥಾನ ಹಿರೇಮಠದ ಆವರಣದಲ್ಲಿ ಬಸವ ಕಲ್ಯಾಣದ ರಥ ಮೈದಾನದಲ್ಲಿ ಹಾರಕೂಡ ಶ್ರಿಮಠದ ವತಿಯಿಂದ ಜರುಗಲಿರುವ ನಾಲ್ಕನೇ ಕಾಯಕ ಉತ್ಸವ ಪ್ರಚಾರ ರಥಕ್ಕೆ ಹಾರಕೂಡದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು ಚಾಲನೆ ನೀಡಿದರು.
ಮಲ್ಲಿನಾಥ ಹಿರೇಮಠ ಹಾರಕೂಡ, ವೀರಣ್ಣ ಶೀಲವಂತ, ಸೂರ್ಯಕಾಂತ ಮಠ, ರಮೇಶ ರಾಜೋಳೆ, ಚನ್ನಬಸಪ್ಪ ಕನಕಪುರ, ರಾಜಕುಮಾರ ಜಾಯೆ, ನಾಗಣ್ಣ ಪಾಟೀಲ, ರಮೇಶ ನಾಗರಾಳೆ ಮುಂತಾದವರು ಉಪಸ್ಥಿತರಿದ್ದರು.
ದಿನಾಂಕ 7 ಮತ್ತು 8 ಫೆಬ್ರವರಿ 2026ರಂದು ಬಸವಕಲ್ಯಾಣದ ರಥ ಮೈದಾನದಲ್ಲಿ ನಾಲ್ಕನೇ ಕಾಯಕ ಉತ್ಸವ ಜರುಗಲಿದೆ.

























