
ಭಾಲ್ಕಿ, ಡಿ. 21: ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ಸಹರಾ ರೂರಲ್ ಡೆವಲೆಪಮೆಂಟ್ ಆಯಿಂಡ್ ಏಜುಕೇಶನ್ ಸೊಸೈಟಿ (ರಿ) ಅಧ್ಯಕ್ಷರಾದ ಶ್ರೀಮತಿ ಕವಿತಾ ಮಚ್ಚಕುರೆ ಅವರಿಗೆ ಸಮಾಜ ಸೇವಾ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಬೆಂಗಳೂರಿನ ವಿಧಿ ಪ್ರಜ್ಞಾ ಕರ್ನಾಟಕ ಕಾನೂನು ಸ್ವಯಂ ಸೇವಾ ಸಂಸ್ಥೆ ಮತ್ತು ಲಯನ್ಸ್ ಇಂಟರ್ ನ್ಯಾಷನಲ್ ಕ್ಲಬ್ ಬೆಂಗಳೂರು ವತಿಯಿಂದ ಆಯೋಜಿಸಲಾದ “ಸಮಾಜಿಕ ಜ್ಯೋತಿ” ಶೀರ್ಷಿಕೆ ಅಡಿಯಲ್ಲಿ ಪ್ರಶಸ್ರಿ ಪ್ರದಾನ ಸಮಾರಂಭದಲ್ಲಿ ಈ ಸನ್ಮಾನ ನೀಡಲಾಯಿತು.
ಕಾನೂನು ಸ್ವಯಂ ಸೇವಾ ಸಂಸ್ಥೆ ಬೆಂಗಳೂರು ಕರ್ನಾಟಕದ ವಿವಿಧ ಭಾಗಗಳಲ್ಲಿ ಸ್ವಾರ್ಥ ಬಿಟ್ಟು ಸಮಾಜಕ್ಕಾಗಿ ದುಡಿಯುತ್ತಿರುವವರಿಗೆ, ಸಮಾಜ ಸೇವಕನ್ನೆದೆ, ಸಮಾಜ ನಾಯಕರೆಂದು ಸಾಮಾಜಿಕ ವಾಗಿ ಗಣನೀಯ ಸೇವೆ ಸಲ್ಲಿಸಿದ ಸಹರಾ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಕವಿತಾ ರವರಿಗೆ ಪ್ರತಿಷ್ಠಿತ ” ಸಮಾಜ ಸೇವಾ ರತ್ನ ಪ್ರಶಸ್ತಿ”ಯನ್ನು ನೀಡಿ ಗೌರವಿಸಲಾಯಿತು.
ಈ ಸಮಾರಂಭಕ್ಕೆ ನಿವೃತ್ತ ಪ್ರಧಾನ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶರಾದ ವೆಂಕಟೇಶ ವಾರ್ಸೆ ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ಮಾಜಿ ಅಧ್ಯಕ್ಷರಾದ ಪೆÇ್ರೀ. ಡಾ. ಎನ್. ಸತೀಶ ಗೌಡ, ಹಾಗೂ ದೇವಾಂಗ ಸಂಘ ಕಾನೂನು ಕಾಲೇಜ್ ಬೆಂಗಳೂರು ಡಾ. ಶಿಲ್ಪಾ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
ಕಾರ್ಯಕ್ರಮಕ್ಕೆ ಲಯನ್ಸ್ ಇಂಟರ್‍ನ್ಯಾಷನಲ್ ಕ್ಲಬ್ ಡಾ. ಪದ್ಮಾಕ್ಷಿ ಲೋಕೆಶ ಮತ್ತು ಡಾ. ಪುರುಷೋತ್ತಮ್ ಅವರು ಆಯೋಜಿಸಿದರು.
























