Home ಜಿಲ್ಲೆ ಮೈಸೂರು ಕವಿತಾ ಜಗನ್ನಾಥ್‌ಗೆ ಪ್ಲಾರೆನ್ಸ್ ನೈಟಿಂಗಲ್ ಪ್ರಶಸ್ತಿ

ಕವಿತಾ ಜಗನ್ನಾಥ್‌ಗೆ ಪ್ಲಾರೆನ್ಸ್ ನೈಟಿಂಗಲ್ ಪ್ರಶಸ್ತಿ

ಹುಣಸೂರು, ಮೇ.೧೯-ಭಾರತದಲ್ಲಿ ಅತ್ಯುತ್ತಮ ಆರೋಗ್ಯ ಸೇವೆಗೆ ನೀಡುವ ಫ್ಲಾರೆನ್ಸ್ ನೈಟಿಂಗಲ್-೨೦೨೬ ರ ಪ್ರಶಸ್ತಿಯು ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯ (NIMHANS) ಸಹಾಯಕ ನರ್ಸಿಂಗ್ ಅಧೀಕ್ಷಕರಾದ ಶ್ರೀಮತಿ ಕವಿತಾ ಜಗನ್ನಾಥರಿಗೆ ಲಭಿಸಿದ್ದು, ಅಂತರರಾಷ್ಟ್ರೀಯ ದಾದಿಯರ ದಿನದಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರತಿಷ್ಠಿತ ರಾಷ್ಟ್ರೀಯ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.

ಕವಿತ ಅವರು ಮೂಲತಃ ಹುಣಸೂರಿನವರಾಗಿದ್ದು, ಮಾಜಿ ಶಾಸಕ ಎಚ್.ಪಿ ಮಂಜುನಾಥ್ ಕವಿತಾ ರವರಿಗೆ ದೂರವಾಣಿ ಕರೆ ಮಾಡಿ ಅಭಿನಂದನೆ ತಿಳಿಸಿದ್ದಾರೆ.ಕವಿತಾ ರವರು ಸಾಂಸ್ಥಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದರ ಜೊತೆಗೆ ನವೀನ ನರ್ಸ್ ಗಳಿಗೆ ತರಬೇತಿ ಹಾಗೂ ಮಾರ್ಗದರ್ಶನ ನೀಡುವುದರಲ್ಲಿ ಗಣನಿಯ ಕೊಡುಗೆ ನೀಡಿದ್ದಾರೆ.ಅದೇ ರೀತಿ ಕೋವಿಡ್ ಸಂದರ್ಭದಲ್ಲಿ ಅವರು ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿ ಲಭಿಸಿದೆ.