ಸೃಷ್ಠಿಗೆ ಕರುನಾಡ ನಾಟ್ಯ ಕಲಾಮಣಿ ರಾಷ್ಟಿçÃಯ ಪ್ರಶಸ್ತಿ ಪ್ರಧಾನ

ತಾಳಿಕೋಟೆ:ಡಿ.೩೦: ಪಟ್ಟಣದ ನಿವಾಸಿ ಆಗಿರುವ ಭರತನಾಟ್ಯ ಹಾಗೂ ಜಾನಪದ ನೃತ್ಯ ಕಲಾವಿದೆ ಕುಮಾರಿ. ಸೃಷ್ಠಿ ಹಿರೇಮಠ ಇವಳಿಗೆ ೨೦೨೫-೨೦೨೬ ನೇ ಸಾಲಿನ ”ಕರುನಾಡ ನಾಟ್ಯ ಕಲಾಮಣಿ ರಾಷ್ಟಿçÃಯ ಪ್ರಶಸ್ತಿ ಪ್ರಧಾನ ಮಾಡಲಾಗಿದೆ.
ಹುಬ್ಬಳ್ಳಿಯ ವಿಶ್ವದರ್ಶನ ದಿನಪತ್ರಿಕೆ ವತಿಯಿಂದ ದಾವಣಗೇರಿಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕುವೇಂಪು ಕನ್ನಡ ಭವನದಲ್ಲಿ ಜರುಗಿದ ೬ನೇ ರಾಜ್ಯ ಭಾವೈಕ್ಯತೆಯ ಸಮ್ಮೇಳನದಲ್ಲಿ ತಾಳಿಕೋಟೆಯ ವಿರಕ್ತೇಶ್ವರ ಭರತ ನಾಟ್ಯ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಕುಮಾರಿ ಸೃಷ್ಠಿ ಹಿರೇಮಠಗೆ ವಿಶ್ವ ದರ್ಶನ ಕನ್ನಡ ದಿನಪತ್ರಿಕೆ ಹಾಗೂ ಕರ್ನಾಟಕ ಪ್ರಜಾ ದರ್ಶನ ಪತ್ರಿಕೆಯ ಸಂಪಾದಕ ಡಾ.ಎಸ್.ಎಸ್. ಪಾಟಿಲ ಅವರು “ಕರುನಾಡ ನಾಟ್ಯ ಕಲಾಮಣಿ ರಾಷ್ಟಿçÃಯ ಪ್ರಶಸ್ತಿ” ನೀಡಿ ಗೌರವಿಸಿದರು.
ಸೃಷ್ಟಿ ಹಿರೆಮಠ ಕಳೆದ ೪ ವರ್ಷದಿಂದ ತಾಳಿಕೋಟೆಯ ಶ್ರೀ ವಿರಕ್ತೇಶ್ವರ ಭರತನಾಟ್ಯ ತರಬೇತಿ ಸಂಸ್ಥೆಯಲ್ಲಿ ಭರತನಾಟ್ಯ ಶಿಕ್ಷಣ ಪಡೆಯುತ್ತಿದ್ದು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭರತನಾಟ್ಯ ಹಾಗೂ ಜಾನಪದ ನೃತ್ಯ ಪ್ರದರ್ಶನ ನೀಡಿದ್ದಾಳೆ ಈಗಾಗಲೇ ಸೃಷ್ಠಿ ಹಿರೇಮಠಗೆ ರಾಜ್ಯ, ಜಿಲ್ಲಾ ಪ್ರಶಸ್ತಿಗಳು ಲಭಿಸಿವೆ.
ವಿದ್ಯಾರ್ಥಿನಿ ಕು.ಸೃಷ್ಠಿ ಹಿರೇಮಠಗೆ ”ಕರುನಾಡ ನಾಟ್ಯ ಕಲಾಮಣಿ ರಾಷ್ಟಿçÃಯ ಪ್ರಶಸ್ತಿ ಲಭಿಸಿದಕ್ಕೆ ಶ್ರೀ ವಿರಕ್ತೇಶ್ವರ ಭರತನಾಟ್ಯ ತರಬೇತಿ ಸಂಸ್ಥೆಯ ಅಧ್ಯಕ್ಷರಾದ ವಿನೋದಕುಮಾರ ಚಿಕ್ಕಮಠ ಹಾಗೂ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.