ಶ್ರೀಬೀರೇಶ್ವರ ದೇವಸ್ಥಾನದ ಕಾರ್ತಿಕೋತ್ಸವ

ಲಕ್ಷ್ಮೇಶ್ವರ,ಡಿ13: ಪಟ್ಟಣದ ಮ್ಯಾಗೇರಿ ಓಣಿಯ ಶ್ರೀಬಿರೇಶ್ವರ ದೇವಸ್ಥಾನದಲ್ಲಿ ಕಾರ್ತಿಕೋತ್ಸವದ ಅಂಗವಾಗಿ ಪ್ರತಿಭಾ ಪುರಸ್ಕಾರ ಡೂಳ್ಳಿನ ಪದಗಳ ಸ್ವರ್ಧೆ ರಸಮಂಜಿರಿ ಕಾರ್ಯಕ್ರಮ ಜರುಗಿದವು.

ಕಾರ್ತಿಕೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠವರು ಕಾರ್ತಿಕ ಮಾಸದಲ್ಲಿ ಪ್ರತಿಯೊಂದು ದೇವಸ್ಥಾನ ಮಠಮಾನ್ಯಗಳಲ್ಲಿ ದೀಪ ಬೆಳಗಿಸುವ ಮೂಲಕ ಆರ್ಚರಿಸಲಾಗುತ್ತಿದೆ ಇದರ ಮೂಲ ಉದ್ದೇಶ ಮನುಷ್ಯರಲ್ಲಿನ ಅಂಧಕಾರವನ್ನು ಹೋಗಲಾಡಿಸಿ ಬೆಳಕು ಪಸರಿಸುವ ಮೂಲಕ ಜಾಗೃತಿ ಉಂಟಾಗುತ್ತದೆ ಸಾವಿರಾರು ವರ್ಷಗಳಿಂದಲ್ಲೂ ಕಾರ್ತಿಕೋತ್ಸವ ಆಚರಣೆ ಇಲ್ಲಿದ್ದು ನಮ್ಮ ಧರ್ಮ ಸಂಸ್ಕೃತಿ ಪರಂಪರೆಗಳನ್ನು ಉಳಿಸಿಕೊಂಡು ನಾವೆಲ್ಲರೂ ಒಂದು ಎಂದು ಭಾವಿಸಿ ಒಗ್ಗಟ್ಟಿನಿಂದ ಜೀವನ ಸಾಗಿಸುವ ಅವಶ್ಯಕತೆ ಇದೆ. ಇಂದಿನ ಆಧುನೀಕ ಜಗತ್ತಿನಲ್ಲಿ ಯುವಕರು ವಿಮುಖರಾಗುತ್ತಿದ್ದು ಅವರನ್ನು ಮತ್ತೆ ನಮ್ಮ ಧರ್ಮ ಪರಂಪರೆ ಸಂಸ್ಕೃತಿಗಳ ಬಗ್ಗೆ ಸೆಳೆಯಲು ಇಂಥ ಧಾರ್ಮಿಕ ಕಾರ್ಯಕ್ರಮಗಳು ಅವಶ್ಯ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷೆ ಹಾಗೂ ಕೆಪಿಸಿಸಿ ಐ ಪ್ರಧಾನ ಕಾರ್ಯದರ್ಶಿ ಸುಜಾತಾ ದೊಡ್ಡಮನಿ,ಹಾಗೂ ಶಿರಹಟ್ಟಿ ಮಂಡಲ ಬಿಜೆಪಿ ಅಧ್ಯಕ್ಷ ಸುನೀಲ್ ಮಹಾಂತಶೆಟ್ಟರ ಮಾತನಾಡಿದರು.

ಕಾರ್ಯಕ್ರಮದಲ್ಲಿ ಶಿಕ್ಷಕ ಹಾಗೂ ಹವ್ಯಾಸಿ ಬರಹಗಾರ ಬಿ.ಎಂ.ಯರಗುಪ್ಪಿ ಉಪನ್ಯಾಸ ನೀಡಿದರು. ಸಾನಿಧ್ಯವನ್ನು ಹುಲ್ಲೂರಿನ ಅಮೋಘಿಮಠ ರಾಯಪ್ಪಜ್ಜ ಶ್ರೀಗಳು ವಹಿಸಿದ್ದರು. ನಾಗರಾಜ್, ನಾಗರಾಜಕೋರಿ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಆರ್.ಎಚ್.ಕುಲಕರ್ಣಿ, ಪಿ.ಆರ್.ಕುಲಕರ್ಣಿ, ನಾಗರಾಜ ಕೋರಿ, ನೀಲಪ್ಪ ಪೂಜಾರ, ನಿಂಗಪ್ಪ ಬನ್ನಿ, ಗಂಗಮ್ಮ ಗದ್ದಿ, ಯಲ್ಲಮ್ಮ ದುರ್ಗನವರ, ತಿಪ್ಪಣ್ಣ ಸಂಶಿ, ಚಾಯಪ್ಪ ಬಸಾಪೂರ, ನಾಗರಾಜ ಮಡಿವಾಳರ, ಶೇಕಣ್ಣ ಕಾಳೆ, ರಾಮಪ್ಪ ರಿತ್ತಿ, ವಿಜಯ ಹತ್ತಿಕಾಳ, ಶಿವಪ್ರಕಾರ ಲಿಂಬಯ್ಯಸ್ವಾಮಿಮಠ, ಪ್ರಸ್ತಾವಿಕವಾಗಿ ವಿ.ಜಿ.ಪಡಗೇರಿ ಮಾತನಾಡಿದರು. ಎನ್. ಎನ್. ಶಿಗ್ಲಿ, ನೀಲಪ್ಪ ಪಡಗೇರಿ ಕಾರ್ಯಕ್ರಮ ನಿರ್ವಹಿಸಿದರು.