ತಾಳಿಕೋಟೆ ಚರಮೂರ್ತಿ ಮಠದಲ್ಲಿ ಕಾರ್ತೀಕೋತ್ಸವ

ತಾಳಿಕೋಟೆ:ಡಿ.೧೦: ಕಾರ್ತಿಕ ಮಾಸದ ನಿಮಿತ್ಯವಾಗಿ ಪಟ್ಟಣದ ಪುರಾತನ ಮಠವಾದ ಶ್ರೀ ಚರಮೂರ್ತಿ ಮಠದಲ್ಲಿ ಕಾರ್ತಿಕೊತ್ಸವವು ಪ್ರತಿ ವರ್ಷದಂತೆ ಮಂಗಳವಾರರAದು ಭಕ್ತಿಭಾವದೊಂದಿಗೆ ಜರುಗಿತು.
ಶ್ರೀ ಮಠದ ಈ ಹಿಂದಿನ ಪೀಠಾಧಿಪತಿಗಳಾದ ಲಿಂ.ಶ್ರೀ ಶಾಂತವೀರ ಶಿವಾಚಾರ್ಯ ಹಾಗೂ ಶ್ರೀ ಮುರುಘೇಂದ್ರ ಶಿವಯೋಗಿಗಳವರ ಕತೃ ಗದ್ದುಗೆಗೆ ಮಹಾಭೀಷೆಕ ಬಿಲ್ವಾರ್ಚನೆ ಪುಷ್ಪಾರ್ಚನೆ ಮಹಾ ಮಂಗಳಾರುತಿ ಜರುಗಿತು.
ಶ್ರೀ ಚರಮೂರ್ತಿ ಮಠದ ಪೀಠಾಧಿಪತಿಗಳಾದ ಶ್ರೀ ಷ್ರ.ಬ್ರ.ಶಿವಯೋಗಿ ಶಿವಾಚಾರ್ಯರು ದೀಪ ಬೆಳಗಿಸುವ ಮೂಲಕ ದೀಪೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ ದೀಪಾವಳಿ ನಂತರ ಕಾರ್ತಿಕ ಮಾಸವು ಪ್ರಾರಂಭವಾಗುತ್ತದೆ ಸೂರ್ಯನು ದ್ವಾದಶ ರಾಶಿಯಲ್ಲಿ ಸಂಚರಿಸುತ್ತಾನೆ. ಪ್ರತಿಯೊಂದು ರಾಶಿಯಲ್ಲಿ ಸಂಚರಿಸುವಾಗ ತನ್ನದೇ ಆದ ಪ್ರಭಾವವನ್ನು ಪ್ರತ್ಯೇಕವಾಗಿ ಬೀರುತ್ತಾನೆ ಕಾರ್ತಿಕ ಪೌರರ್ಣಮಿಯ ದಿನದಂದು ಚಂದ್ರನ ಬೆಳಕು ಎಂದಿಗಿAತಲೂ ಪ್ರಕಾಶಮಾನವಾಗಿರುತ್ತದೆ ಚಂದ್ರನು ಭೂಮಿಯ ಸಮಿಪದಲ್ಲಿರುವುದರಿಂದ ಎಂದಿಗಿAತಲೂ ಶೇ.೭ ರಷ್ಟು ಸೂರ್ಯನ ಬೆಳಕನ್ನು ಚಂದ್ರನು ಪ್ರತಿಪಲಿಸುತ್ತಾನೆಂದರು. ಕಾರ್ತಿಕ ಮಾಸದಲ್ಲಿ ಶಿವನನು ಆರಾಧಿಸುವುದರಿಂದ ಹೆಚ್ಚು ಫಲ ಪ್ರದವಾಗುತ್ತದೆ ಈ ತಿಂಗಳು ದೀಪ ದಾನ ತುಳಸಿ ಪುಜೆ, ಶಿವ ವೀಷ್ಣು ಪೂಜೆ ಮಾಡಲಾಗುತ್ತದೆ. ಅಂಧಕಾರವನ್ನು ತೊಲಗಿಸಿ ಜ್ಞಾನಸಂಪತ್ತು, ಆರೋಗ್ಯ,ಸುಖ-ಶಾಂತಿ ಮತ್ತು ಮೊಕ್ಷದ ಮಾರ್ಗ ದೊರೆಯುತ್ತದೆ ಎಂದರು. ಕಾರ್ತಿಕ ಮಾಸವು ಹಿಂದೂ ಧರ್ಮದಲ್ಲಿ ಶ್ರೇಷ್ಠ ತಿಂಗಳಾಗಿದೆ ಕಾರಣ ಮಠ-ಮಂದಿರಗಳಲ್ಲಿ ದೀಪ ಬೆಳಗಿಸುವುದರ ಮೂಲಕ ಆರಾಧಿಸಲಾಗಿರುತ್ತದೆ ಎಂದ ಶ್ರೀಗಳೂ ಶ್ರೀ ಚರಮೂರ್ತಿ ಪುರಾತನ ಮಠದಲ್ಲಿ ಈ ಹಿಂದಿನಿAದಲು ಸಾಗಿಬಂದAತಹ ಪರಿಪಾಠದಂತೆ ಈಗಲೂ ಆಚರಿಸುತ್ತಾ ಸಾಗಿ ಬರಲಾಗಿದೆ ಎಂದರು.
ಸಾಯಂಕಾಲ ಭಕ್ತರಿಂದ ಶ್ರೀ ಮಠದಲ್ಲಿ ಸಾವಿರಾರು ಭಕ್ತರು ದೀಪ ಬೆಳಗಿಸುವುದರ ಮೂಲಕ ಭಕ್ತಿ ಭಾವ ಮೆರೆದರು.
ಈ ಸಮಯದಲ್ಲಿ ಸಂಗಯ್ಯ ಚಂರತಿಮಠ,ಸುಭಾಸ ಅಲ್ಲಾಪುರ, ಪಾವಡಯ್ಯ ಚರಂತಿಮಠ,ಪರಮಯ್ಯ ಹೀರೆಮಠ, ಶ್ರೀಶೈಲ ವಿಭೂತಿ, ವೀರುಪಾಕ್ಷಗೌಡ ಪಾಟೀಲ, ಶಾಂತಗೌಡ ದೇಸಾಯಿ, ಶರಣು ಪಾಲ್ಕಿ, ರಾಜು ಅಲ್ಲಾಪುರ, ಗುರುನಾತಗೌಡ ಮಸ್ಕಾನಾಳ, ಶಂತಗೌಡ ಬಿರಾದಾರ (ಮಿಣಜಗಿ), ದೀಪು ಚರಂತಿ ಮಠ ,ಶರಣು ಬಿಳೆಭಾವಿ ಮೊದಲಾದವರು ಉಪಸ್ಥಿತರಿದ್ದರು.
ಸಮಸ್ತ ಭಕ್ತಾದಿಗಳಿಗಾಗಿ ಈ ಹಿಂದಿನಿA ಬಂದ ಸಾಂಪ್ರದಾಯದAತೆ ಪ್ರಸಾದ ವ್ಯವಸ್ಥೆಯಲ್ಲಿ ಮಾದಲಿ,ಚಪಾತಿ,ಬದನೆಕಾಯಿ ಪಲ್ಲೆ,ಅನ್ನ-ಸಾಂಬಾರ ಮಾಡಲಾಗಿತ್ತು ಭಕ್ತರು ಸೇವಿಸಿ ಪುನಿತರಾದರು.