
ಚಿಂಚೋಳಿ :ಏ.6:ತಾಲೂಕಿನ ಮಿರಿಯಾಣ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿರುವುದಾಗಿ
ಸಮಸ್ಯೆ ಕರ್ನಾಟಕ ಪ್ರಾಂತ ರೈತ ಸಂಘ ಮತ್ತು ಗ್ರಾಮಸ್ಥರು ಆರೋಪಿಸಿದ್ದು ಸರ್ಕಾರದ ಜಲ ಜೀವನ್ ಮಿಷನ್ ಯೋಜನೆಯಡಿ ಕೈಗೊಂಡ ಕಾಮಗಾರಿಗಳು ಸರಿಯಾಗಿ ನಡೆಯದ ಕಾರಣ ಗ್ರಾಮದಲ್ಲಿ ನೀರಿನ ಪೂರೈಕೆ ಸಮರ್ಪಕವಾಗಿ ಆಗುತ್ತಿಲ್ಲ ಎಂದು ಕರ್ನಾಟಕ ಪ್ರಾಂತ ರೈತ ಸಂಘ ದಿಂದ ರಸ್ತೆತಡೆದು ಹೋರಾಟ ಮಾಡಲಾಯಿತು ಪ್ರತಿಭಟನೆ ಉದ್ದೇಶಿಸಿ ಕರ್ನಾಟಕ
ಪ್ರಾಂತ ರೈತ ಸಂಘ ಮುಖಂಡರಾದ ಶರಣಬಸ್ಸಪ್ಪ ಮಮಶೆಟ್ಟಿ ಅವರು ಮಾತನಾಡಿ ಮಿರಿಯಾಣ ಗ್ರಾಮದ ಹಲವು ಮನೆಗಳಿಗೆ ಪೈಪ್‍ಲೈನ್ ಸಂಪರ್ಕ ಇದ್ದರೂ ನೀರಿನ ಸರಬರಾಜು ಸರಿಯಾಗಿ ಆಗದೇ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ ಗ್ರಾಮಸ್ಥರು ಹಲವು ಬಾರಿ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಸಮಸ್ಯೆ ಪರಿಹಾರವಾಗಿಲ್ಲ ಎಂದು ಪ್ರತಿಭಟನೆ ಸ್ಥಳಕ್ಕೆ ತಾಲೂಕ ಪಂಚಾಯತ ಕಾರ್ಯನಿರ್ವಕ ಅಧಿಕಾರಿಗಳಾದ ಸಂತೋಷ್ ಚೌವ್ಹಾಣ, ಅವರು ಧಾವಿಸಿ
ಮಿರಿಯಾಣ ಗ್ರಾಮದ ನೀರಿನ ಸಮಸ್ಯೆ ತಕ್ಷಣ ಬಗ್ಗೆ ಹರಿಸುವಂತೆ ಗ್ರಾಮ ಪಂಚಾಯತ ಅಧಿಕಾರಿಗಳಿಗೆ ಸೂಚನೆ ನೀಡಿದರು ಇದರಿಂದ ಪ್ರತಿಭಟನೆಕಾರರು ರಸ್ತೆ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದರು ಪ್ರತಿಭಟನೆಯಲ್ಲಿ ಜಾಫರ್ ಖಾನ್ ಮಿರಿಯಾಣ ಹಾಗೂ ಅನೇಕ ಮಿರಿಯಾಣ ಗ್ರಾಮದ ಮಹಿಳೆಯರು ಹಿರಿಯರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು




















