ಚನ್ನಮ್ಮನ ಕಿತ್ತೂರು,ಅ.೩೦: ಪ್ರತಿವ?Àðದಂತೆ ಈ ಬಾರಿಯೂ ನ.೧ ರಂದು ಕರ್ನಾಟಕ ರಾಜ್ಯೋತ್ಸವ ಆಚರಣೆಯನ್ನು ವಿಜೃಂಭಣೆಯಿAದ ಹಾಗೂ ಅರ್ಥಪೂರ್ಣವಾಗಿ ರಾಜ್ಯೋತ್ಸವ ಆಚರಿಸಲು ಸರ್ವ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ತಹಶೀಲ್ದಾರ ಕಲ್ಲನಗೌಡ ಪಾಟೀಲ ಅಧಿಕಾರಿಗಳಿಗೆ ತಿಳಿಸಿದರು.
ತಹಶೀಲ್ದಾರ ಕಛೇರಿ ಸಭಾಂಗಣದಲ್ಲಿ ಜರುಗಿದ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನ.೧ ರಂದು ಕರ್ನಾಟಕ ರಾಜ್ಯೋತ್ಸವವನ್ನು ಕಿತ್ತೂರಿನಲ್ಲಿ ಅತೀ ವಿಜೃಂಭಣೆಯಿAದ ಆಚರಿಸಲಾಗುವುದು. ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಕಿತ್ತೂರು ಪಟ್ಟಣ ಸೇರಿದಂತೆ ರಾಷ್ಟಿçÃಯ ಹೆದ್ದಾರಿ ಚನ್ನಮ್ಮನ ವರ್ತುಳಕ್ಕೆ ವಿದ್ಯುತ್ ದೀಪಾಲಂಕಾರಕ್ಕೆ ಹಾಗೂ ಇನ್ನೂಳಿದ ಕಾರ್ಯಗಳಿಗೆ ಸಂಬAಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ರಾಜ್ಯೊತ್ಸವ ದಿನದಂದು ಪಟ್ಟಣದಲ್ಲಿ ಸಾವಿರಾರುÀ ಜನ ಸೇರುವುದರಿಂದ ಸಾರ್ವಜನಿಕರಿಗೆ ಸಮರ್ಪಕ ಕುಡಿಯುವ ನೀರು ಹಾಗೂ ತಂಪು ಪಾನಿ ವ್ಯವಸ್ಥೆ ಕಲ್ಪಿಸಲು ಸೂಚಿಸಿದರು. ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಕನ್ನಡ ನಾಡು ನುಡಿಗಾಗಿ ಶ್ರಮಿಸಿದ ಕನ್ನಡ ಹೋರಾಟಗಾರರಿಗೆ ಸನ್ಮಾನ ಮಾಡಲಾಗುವದು. ಕನ್ನಡ ಪರ ಹೋರಾಟಗಾರರು, ಸೈನಿಕರು ಹಾಗೂ ಸಾಧಕರಿಗೆ ಸನ್ಮಾನಿಸಲಾಗುವುದು. ಈ ಬಾರಿ ರಾಜ್ಯೋತ್ಸವ ಮೆರವಣಿಗೆಗೆ ಆಗಮಿಸುವ ಸಾರ್ವಜನಿಕರಿಗಾಗಿ ಯಾವುದೇ ತೊಂದರೆಯಾಗದAತೆ ನಿಯೋಜಿಸಿದ ಇಲಾಖೆಯವರು ನೋಡಿಕೊಳ್ಳಬೇಕು.
ರಾಜ್ಯೊತ್ಸವದ ಭವ್ಯ ಮೆರವಣಿಗೆ ಚನ್ನಮ್ಮನ ವರ್ತುಳದಿಂದ ಗುರುವಾರ ಪೇಟೆ ಅರಳೀಕಟ್ಟಿ ಮಾರ್ಗವಾಗಿ ಸೋಮವಾರ ಪೇಟೆ ಚನ್ನಮ್ಮನ ಕೂಟವರೆಗೂ ಜರುಗುವುದು. ಒಟ್ಟಾರೆಯಾಗಿ ಯಾವುದೇ ಅಹಿತಕರ ಘಟನೆ ಸಂಭವಿಸದAತೆ ಕನ್ನಡ ಪರ ಸಂಘಟನೆಗಳು ಹಾಗೂ ವಿವಿಧ ಸಂಘಟನೆಯವರು, ಸಾರ್ವಜನಿಕರು, ತಾಲೂಕಾಮಟ್ಟದ ಅಧಿಕಾರಿಗಳ ಜೊತೆ ಸಹಕರಿಸಿ ಕಾರ್ಯಕ್ರಮ ಯಸಶ್ವಿಗೆ ನಾವು-ನೀವೆಲ್ಲರೂ ಅಣಿಯಾಗೋಣವೆಂದರು.
ಕಾರ್ಯಕ್ರಮಕ್ಕೆ ಸಂಬAಧಿಸಿದAತೆ ವೇದಿಕೆ ಸಿದ್ಧತೆ, ಧ್ವಜಾರೋಹಣ, ಆಮಂತ್ರಣ ಪತ್ರಿಕೆ, ಪಥ ಸಂಚಲನ, ಸಾಧಕರಿಗೆ ಸನ್ಮಾನ, ಮೆರವಣಿಗೆ, ರೂಪಕ ವಾಹನಗಳಿಗೆ ಅನುಮತಿ, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಕುರಿತು ಚರ್ಚಿಸಲಾಯಿತು.
ತಾಪಂ ಇಓ ನಿಂಗಪ್ಪ ಮಸಳಿ ಮಾತನಾಡಿ ಡಿ.ಜೆ. ಸಂಸ್ಕೃತಿಯನ್ನು ಬಿಟ್ಟು ಕನ್ನಡ ನಾಡಿನ ಸಂಸ್ಕೃತಿಯ ವಾದ್ಯಮೇಳಗಳನ್ನು ಬಳಸುವ ಮೂಲಕ ರಾಜ್ಯೋತ್ಸವದಲ್ಲಿ ಕನ್ನಡ ನಾಡಿನ ಪಾರಂಪರಿಕ ಸಂಸ್ಕೃತಿಗೆ ನಾಂದಿ ಹಾಡಲು ಹೇಳಿದರು. ಕಲಾ ತಂಡಗಳ ಪ್ರದರ್ಶನವನ್ನು ಸಾಯಂಕಾಲವು ಚನ್ನಮ್ಮ ವೃತ್ತದಲ್ಲಿ ಪ್ರದರ್ಶಿಸಲು ಮನವಿ ಮಾಡಿದರು. ಈ ಕಾರ್ಯಕ್ರಮಕ್ಕೆ ಶಾಸಕ ಬಾಬಾಸಾಹೇಬ ಸೇರಿದಂತೆ ಜನಪ್ರತಿನಿಧಿಗಳು, ಮಖಂಡರು ಭಾಗವಹಿಸುವರು. ಸಭೆಯಲ್ಲಿ ತಾಲೂಕ ಮಟ್ಟದ ಎಲ್ಲ ಅಧಿಕಾರಿಗಳು, ಕರ್ನಾಟಕ ರಕ್ಷಣಾ ವೇದಿಕೆ, ಕನ್ನಡಪರ ವಿವಿಧ ಸಂಘಟನೆಗಳು ತಹಶೀಲ್ದಾರ ಕಛೇರಿ ಸಿಬ್ಬಂದಿ ಸೇರಿದಂತೆ ಇತರರಿದ್ದರು.
























