ಕರ್ನಾಟಕ ರಾಜ್ಯೋತ್ಸವ

ಮುನವಳ್ಳಿ,ನ4: ಪಟ್ಟಣದಲ್ಲಿ ಕರ್ನಾಟಕ ರಾಜ್ಯೋತ್ಸವ ಸಮಿತಿಯವರಿಂದ ಅದ್ದೂರಿಯ ಕರ್ನಾಟಕ ರಾಜ್ಯೋತ್ಸವ ಕುಸ್ತಿ ಮೈದಾನದಲ್ಲಿ ಜರುಗಿತು.


ಶಾಸಕ ವಿಶ್ವಾಸ ವೈದ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕನ್ನಡ ನಾಡು ನುಡಿ ಬಾಷೆ ಎಲ್ಲವು ಕನ್ನಡವಾಗಿರಬೇಕು, ಮುಖ್ಯಮಂತ್ರಿಗಳು ಹೇಳಿದಹಾಗೆ ಪ್ಲಾಸ್ಟಿಕ ಮುಕ್ತ ನಾಡು ಆಗಬೇಕು, ಪಟ್ಟಣದಲ್ಲಿ ಈಗಾಗಲೆ ಅಭಿವೃದ್ದಿ ಕಾರ್ಯಗಳು ಚಾಲನೆಯಲ್ಲಿ ಇವೆ, ಇದರ ಜೊತೆಗೆ ಪ್ರಾಥಮಿಕ ಕೇಂಧ್ರವನ್ನು ಮೆಲ್ದರ್ಜೆಗೆ ಏರಿಸುವುದು ಹಾಗೂ ಕುಸ್ತಿ ಮೈದಾನವನ್ನು ಸ್ಟೇಡಿಯಮ್ ಆಗಿ ನಿರ್ಮಿಸುವದು, ಸರ್ಕಾರಿ ಶಾಲೆಗಳನ್ನು ಅಭಿವೃದ್ದಿಪಡಿಸುವದು ನನ್ನ ಅವಧಿಯಲ್ಲಿ ಹಲವಾರು ಕಾರ್ಯಗಳ ಯೋಜನೆಗಳಿವೆ. ಅದನ್ನು ಮಾಡುವದಾಗಿ ಭರವಸೆ ನೀಡಿದರು.


ಪ್ರಾಸ್ತಾವಿಕವಾಗಿ ಸಮಿತಿಯ ಗೌರವಾಧ್ಯಕ್ಷ ಕಲ್ಲಪ್ಪ ನಲವಡೆ ಮಾತನಾಡಿ ವಿವಿಧ ಬೇಡಿಕೆಗಳ ಪ್ರಸ್ತಾವಿಸಿ ಮನವಿಯನ್ನು ನೀಡಿದರು.


ದಂಡಾಧಿಕಾರಿ ಎಂ.ಎನ್.ಹೆಗ್ಗಣ್ಣವರ ಮಾತನಾಡಿದರು. ಸೋಮಶೇಖರ ಮಠದ ಮುರುಘೇಂದ್ರ ಶ್ರೀಗಳು ಮಾತನಾಡಿದರು.


ಬಿ.ಜಿ ಜಾವೂರ ಉಪನ್ಯಾಸ ನೀಡಿದರು, ಸಮಿತಿ ಅಧ್ಯಕ್ಷ ಚಂದ್ರು ಮುಚ್ಚಂಡಿ, ವೀರೇಶ ಬ್ಯಾಹಟ್ಟಿ, ಚಂದ್ರು ಶ್ಯಾಮರಾಯನವರ, ಪುರಸಭೆ ಅಧ್ಯಕ್ಷ ಸಿ.ಬಿ.ಬಾಳಿ, ಎಪಿ.ಎಮ್.ಸಿ ಅಧ್ಯಕ್ಷ ಚಂದ್ರು ಜಂಬ್ರಿ, ಮೋಹನ ಕಾಮಣ್ಣವರ, ಎಂ.ಎಸ್.ಸರ್ವೀ, ಅನ್ನಪೂರ್ಣಾ ಲಂಬೂನವರ, ವಿದ್ಯಾ ಬಾಳಿ, ಹನಮಂತ ಸಿಂಗಣ್ಣವರ, ರುದ್ರಗೌಡ ಕಳಸನಗೌಡ್ರ, ಪಂಚು ಸುಣಗಾರ, ಅಸ್ಲಂ ಕಿಲ್ಲೇದಾರ, ಸಂಗಪ್ಪ ಹೂಲಿ, ಸಮಿತಿಯ ಪದಾಧಿಕಾರಿಗಳು ಇತರರು ಉಪಸ್ಥಿತರಿದ್ದರು.


ನಂತರ ಸಂಗೀತ ಕಾರ್ಯಕ್ರಮ ಜರುಗಿತು. ಮಲ್ಲಿಕಾರ್ಜುನ ಕಮತಗಿ ಹಾಗೂ ಬಾಳು ಹೊಸಮನಿ ಕಾರ್ಯಕ್ರಮ ನಿರೂಪಿಸಿದರು, ಸಿದ್ದು ಪಡಶ್ಯಾವಗಿ ವಂದಿಸಿದರು.