
ಕಲಬುರಗಿ,ಜ.3-ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಅವರು ಇದೇ ಜ.5 ರಂದು ವಿಜಯಪುರ ಜಿಲ್ಲೆಯಿಂದ ರಸ್ತೆ ಮಾರ್ಗವಾಗಿ ಕಲಬುರಗಿ ಜಿಲ್ಲೆಯ ಜೇವರ್ಗಿಗೆ ಬೆಳಿಗ್ಗೆ 9.30 ಗಂಟೆಗೆ ಆಗಮಿಸುವರು.
ಜೇವರ್ಗಿ ಪಟ್ಟಣದ ವಿವಿಧ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿ ಕಲಬುರಗಿಗೆ ಆಗಮಿಸುವ ಅವರು ಸಂಜೆ 4.30 ಗಂಟೆಗೆ ಕಲಬುರಗಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಡಿ.ಸಿ., ಜಿಲ್ಲಾ ಪಂಚಾಯತ್ ಸಿ.ಇ.ಓ ಹಾಗೂ ಇತರೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕಲಬುರಗಿಯಲ್ಲಿಯೆ ವಾಸ್ತವ್ಯ ಮಾಡುವರು.
ಜನವರಿ 6 ರಂದು ಬೆಳಿಗ್ಗೆ 8.30 ಗಂಟೆಗ ರಸ್ತೆ ಮಾರ್ಗವಾಗಿ ಬೀದರ ಜಿಲ್ಲೆಗೆ ಪ್ರಯಾಣಿಸುವರು.

























