
ಕಲಬುರಗಿ:ಮೇ.26: ಕಲಾವಿದ ರೆಹಮಾನ್ ಪಟೇಲ್ ಅವರಿಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಶುಕ್ರವಾರ ನಡೆದ 52ನೇ ವಾರ್ಷಿಕ ಕರ್ನಾಟಕ ಲಲಿತಕಲಾ ಅಕಾಡೆಮಿ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕನ್ನಡ ಮತ್ತು ಸಂಸ್ಕøತಿ ಸಚಿವ ಶಿವರಾಜ್ ತಂಗಡಗಿ ಅವರು 25,000 ನಗದು ಬಹುಮಾನ ಹಾಗೂ ಪ್ರಶಂಸಾಪತ್ರವನ್ನು ಒಳಗೊಂಡ ಈ ಪ್ರಶಸ್ತಿಯನ್ನು ಪ್ರದಾನಿಸಿದರು. ಖ್ಯಾತ ಲೇಖಕ ನಾಡೋಜ ಬರಗೂರು ರಾಮಚಂದ್ರಪ್ಪ, ಶಾಸಕರಾದ ಉದಯ್ ಬಿ. ಗರುಡಾಚಾರ್, ಅಕಾಡೆಮಿ ಅಧ್ಯಕ್ಷ ಪಾ ಸಾ ಕುಮಾರ್, ಕುಲಸಚಿವರಾದ ನೀಲಮ್ಮ ಬಿ. ಹಾಗೂ ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಪ್ರಶಸ್ತಿಯನ್ನು “ಮಧ್ಯಮಾದಿ ರಾಗ” ಎಂಬ ಹೆಸರಿನ ಅವರ ಸುರ್ಪುರ ಚಿಕ್ಕಚಿತ್ರ ಕಲಾಕೃತಿಗೆ ನೀಡಲಾಗಿದೆ, ಇದು ಜಲಬಣ್ಣ ಬಳಸಿ ಕಾಗದದ ಮೇಲೆ ರಚಿಸಲ್ಪಟ್ಟಿದೆ.
ಅಕಾಡೆಮಿ ಸದಸ್ಯರಾದ ಬಸವರಾಜ್ ಜಾನೇ, ಕರಿಯಪ್ಪ ಹಂಚಿನಮಣಿ, ಬಸವರಾಜ್ ಕಾಳೇಗರ್, ರಾಜೇಶ್ವರಿ ಅಲಕುಂಟೆ, ಶಾಂತಳಾ ಹಾಗೂ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.