ಕರ್ನಾಟಕ ಕಿ ಶೇರನಿಯಾಂ ಕಾವ್ಯ ಸಂಕಲನ ಲೋಕಾರ್ಪಣೆ

ಕಲಬುರಗಿ,ಡಿ.೨: ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ನಿವೃತ್ತಿ ವ್ಯವಹಾರಗಳ ಸಚಿವಾಲಯದ ಹಿಂದಿ ಸಲಹಾಕಾರ ಸಮಿತಿಯ ಎರಡನೇ ಸಭೆ ಮಾನ್ಯ ರಾಜ್ಯ ಸಚಿವರು (ಸಿಬ್ಬಂದಿ) ಡಾ. ಜಿತೇಂದ್ರ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನವದೆಹಲಿಯ ಸಿವಿಲ್ ಸೇವಾ ಅಧಿಕಾರಿ ಸಂಸ್ಥೆ, ಕಸ್ತೂರ್ಬಾ ಗಾಂಧಿ ಮಾರ್ಗದಲ್ಲಿ ನಡೆದು ಯಶಸ್ವಿಯಾಗಿ ಸಂಪನ್ನವಾಯಿತು.
ಸಭೆಯಲ್ಲಿ ರಾಜ್ ಭಾಷಾ ಹಿಂದಿ ಸಲಹಾಕಾರ ಸಮಿತಿಯ ಸದಸ್ಯೆ, ಕಲಬುರಗಿಯ ಪ್ರಸಿದ್ಧ ಹಿಂದಿ ಕನ್ನಡ ಲೇಖಕಿ ಹಾಗೂ ಅನುವಾದಕಿ ಡಾ. ಅಂಬುಜಾ ಎನ್. ಮಳಖೇಡಕರ ಅವರ ಕೃತಿಕರ್ನಾಟಕ ಕಿ ಶೇರನಿಯಾಂ ಎಂಬ ಹಿಂದಿ ಕಾವ್ಯ ಸಂಕಲನವನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಕೌಶಲ್ ಪತ್ರಿಕೆಯ ೫ನೇ ಆವೃತ್ತಿ ಬಿಡುಗಡೆಗೊಳಿಸಲಾಯಿತು ಡಾ. ಅಂಬುಜಾ ಅವರು ಪ್ರಧಾನಮಂತ್ರಿ ಮೋದಿ ಅವರ ಜನ್ಮದಿನದ ಅಂಗವಾಗಿ ಬರೆದ “ಯುಗ ಪುರುಷ ” ಹಿಂದಿ ಕವಿತೆ ಇದರಲ್ಲಿ ಪ್ರಕಟಿಸಲಾಗಿದೆ
ಸಭೆಯಲ್ಲಿ ರಚನಾ ಶಾಹ, ಮನೀಷಾ ಸಕ್ಸೇನಾ, ಲೋಕಸಭಾ ಸದಸ್ಯ ಸತೀಶ ಕುಮಾರ, ಪದ್ಮಶ್ರೀ ಪ್ರೊ. ವಿಶ್ವಮೂರ್ತಿ ಶಾಸ್ತ್ರಿ, ಕ್ಷಿಪ್ರಾ ಶುಕ್ಲಾ, ಜಗಮೋಹನ ಸಿಂಹ ನೇಗಿ, ಡಾ. ಅಂಬುಜಾ ಮಳಖೇಡಕರ, ಸುಮನ ಮಳಖೇಡಕರ, ರಾಜಸಭಾ ಸದಸ್ಯರು ಹಾಗೂ ಇನ್ನಿತರ ಗಣ್ಯ ಸದಸ್ಯರು ಉಪಸ್ಥಿತರಿದ್ದರು.