
ಬೀದರ:ಜೂ.೨೯: ಜಿಲ್ಲೆಯ ಪತ್ರಿಕಾ ಛಾಯಾಗ್ರಾಹಕ ಗೋಪಿಚಂದ್ ತಾಂದಳೆ ಅವರಿಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಪತ್ರಿಕಾ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಕರ್ನಾಟಕ ಛಾಯಾರತ್ನ ಪ್ರಶಸ್ತಿ ಲಭಿಸಿದಕ್ಕಾಗಿ ಕನ್ನಡ ಸೇನೆ ಸಂಘಟನೆ ವತಿಯಿಂದ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಬೀದರ ಜಿಲ್ಲೆಯ ಪತ್ರಿಕಾ ಛಾಯಾಗ್ರಾಹಕರಾದ ಗೋಪಿಚಂದ ತಾಂದಳೆ ಅವರು ೨ ದಶಕ್ಕೂ ಹೆಚ್ಚು ಪತ್ರಿಕಾರಂಗದಲ್ಲಿ ಸೇವೆ ಸಲ್ಲಿಸಿದ್ದಕ್ಕಾಗಿ ಹಾಗೂ ಅನೇಕ ಐತಿಹಾಸಿಕ ಸ್ಮಾರಕಗಳ ಫೋಟೋ ತೆಗೆದು ಅವುಗಳ ವೈಶಿಷ್ಟö??ತೆಯನ್ನು ಜನರಿಗೆ ಪರಿಚಯಿಸಿದ ಶ್ರೇಯಸ್ಸು ಅವರಿಗೆ ಸಲ್ಲಿಸುತ್ತದೆ ಅದಕ್ಕಾಗಿ ಅವರನ್ನು ಆಯ್ಕೆ ಮಾಡಿ ಕರ್ನಾಟಕ ಛಾಯಾರತ್ನ ಪ್ರಶಸ್ತಿಗೆ ಭಾಜನರಾಗಿರುವುದು ಕಲ್ಯಾಣ ಕರ್ನಾಟಕ ಭಾಗಕ್ಕೆ ಸಂದ ವಿಶೇಷ ಗೌರವವಾಗಿದೆ ಎಂದು ಕನ್ನಡ ಸೇನೆ ರಾಜ್ಯ ಉಪಾಧ್ಯಕ್ಷರಾದ ರವಿಸ್ವಾಮಿ ನಿರ್ಣಾ ಅವರು ಮಾತನಾಡಿದ್ದರು.
ಈ ಸಂದರ್ಭದಲ್ಲಿ ಕನ್ನಡ ಸೇನೆ ಜಿಲ್ಲಾಧ್ಯಕ್ಷರಾದ ಸುಭಾಷ ಕೆನಾಡೆ, ತಾಲೂಕಾ ಅಧ್ಯಕ್ಷರಾದ ರಾಜಶೇಖರ ಮಂಗಲಪೇಟ ಹಾಗೂ ಜಿಲ್ಲಾ ಕಾರ್ಯದರ್ಶಿ ರಮೇಶ ಧೋಳ ಉಪಸ್ಥಿತರಿದ್ದರು.