
ಇಂಡಿ :ಜೂ.೨೯: ಪಟ್ಟಣದ ಭೂಮಾನ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಕಾರ್ಯ ವೈಖರಿ ವಿರುದ್ದ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಗ್ರೇಡ್ ೨ ತಹಸೀಲ್ದಾರ ಪ್ರಸನ್ನ ಮೊಘೆಕರ ಇವರಿಗೆ ಮನವಿ ಸಲ್ಲಿಸಿದರು.
ಕರವೇ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಪಾಸೋಡಿ ಮಾತನಾಡಿ ಯಾವದೇ ಕೆಲಸಕ್ಕೆ ಅರ್ಜಿ ನೀಡಿದರೆ ಆ ಕೆಲಸ ಒಂದು ವರ್ಷ ಆದರೂ ಆಗುವದಿಲ್ಲ. ಇಲಾಖೆಯಲ್ಲಿ ಬ್ರಷ್ಟಾಚಾರ ಮನೆ ಮಾತಾಗಿದೆ. ಪ್ರತಿಯೊಂದಕ್ಕು ಆ ಪತ್ರ ಬೇಕು, ಈ ಪತ್ರ ಬೇಕು ಎಂದು ಸತಾಯಿಸುತ್ತಾರೆ. ಕೊನೆಗೆ ಬೆಸತ್ತು ಹಣ ನೀಡಿ ಕೆಲಸ ಮಾಡಿಕೊಳ್ಳುವ ಅನಿವಾರ್ಯತೆ ಇದೆ ಎಂದರು.
ಕರವೇ ತಾಲೂಕಾ ಅಧ್ಯಕ್ಷ ವಿಜಯ ರಾಠೋಡ ಮಾತನಾಡಿ ಉತಾರೆ ಕೇಳಿ ಅರ್ಜಿ ನೀಡಿದರೆ ಅದಕ್ಕೆ ಇಲ್ಲ ಸಲ್ಲದ ಮಾಹಿತಿ ಕೇಳುತ್ತಾರೆ. ಕೊನೆಗೆ ಖಾಸಗಿ ಅಂಗಡಿಗಳಿAದ ಸಂಬAದಿತ ಕಾಗದ ಪತ್ರ ಪಡೆದು ಅವರಿಗೆ ಹಣ ನೀಡಿ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ. ಅದಲ್ಲದೆ ಕಾರಣ ವಿಲ್ಲದೆ ಅರ್ಜಿ ವಜಾ ಮಾಡುತ್ತಾರೆ. ಅಧಿಕಾರಿಗಳು ಇಲ್ಲ ನಾಳೆ ಬನ್ನಿ ಎಂಬ ಉತ್ತರ ಸದಾ ಸಿದ್ದ ವಿರುತ್ತದೆ ಎಂದರು.
ಜಿಲ್ಲಾ ಮಹಿಳಾ ಅಧ್ಯಕ್ಷೆ ಭಾಗ್ಯಶ್ರೀ ನಾಟಿಕಾರ, ತೈಶಿನ ಸಂಜವಾಡ, ಸುಗಲಾಬಾಯಿ ಬನಸೋಡೆ ಸುನೀಲ ರಾಠೋಡ, ಮಾತನಾಡಿದರು.
ಧನರಾಜ ಪವಾರ,ವಿಜಯ ರಾಠೋಡ,ಶ್ರೀಕಾಂತ ರಾಠೋಡ,ವಿಲಾಸ ಗೊಡೆ,ಪ್ರಶಾಂತ ಮಲ್ಲಾಢಿ ಮತ್ತಿತರಿದ್ದರು.