ಅತಿವೃಷ್ಟಿ ಹೆಸರು ಮತ್ತು ಉದ್ದು ಬೆಳೆ ಹಾನಿ ಪರಿಹಾರ ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ಕರವೇ ಮನವಿ

ಸೇಡಂ, ಆ,13: ತಾಲೂಕಿನದ್ಯಾಂತ ಅತಿವೃಷ್ಟಿ ಮಳೆಯಿಂದ ಹೆಸರು ಮತ್ತು ಉದ್ದು ಬೆಳೆಗಳು ಸಂಪೂರ್ಣ ಹಾಳಾಗಿದ್ದು ರೈತರ ಖಾತೆಗೆ ಪ್ರತಿ ಎಕರೆಗೆ ರೂ.10,000 ರೂಪಾಯಿಗಳು ಸರ್ಕಾರದಿಂದ ಪರಿಹಾರ ಘೋಷಣೆ ಮಾಡಬೇಕು ಪ್ರತಿ ಕ್ವಿಂಟಲಿಗೆ 10000 ಸಾವಿರ ಬೆಂಬಲ ಬೆಲೆ ನಿಗಾದಿ ಮಾಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕದ ಅಧ್ಯಕ್ಷರಾದ ರಾಮಚಂದ್ರ ಗುತ್ತೇದಾರ ನೇತೃತ್ವದಲ್ಲಿ ತಹಸಿಲ್ದಾರ್ ಶ್ರೇಯಾಂಕ್ ಧನುಶ್ರೀ ರವರ ಮೂಲಕ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ರವರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದ್ದರು. ಈ ವೇಳೆಯಲ್ಲಿ ತಾಲೂಕು ಕರವೇ ಕಾರ್ಯಕರ್ತರು ಇದ್ದರು