ನಗರಾದ್ಯಂತ ಹದಗೆಟ್ಟಿರುವ ಚರಂಡಿಗಳನ್ನು ಸ್ವಚ್ಛಗೊಳಿಸಬೇಕೆಂದು ಕರವೇ ಮನವಿ

ಬೀದರ: ಮೇ.23:ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ಜಿಲ್ಲಾ ಸಮಿತಿ ವತಿಯಿಂದ ತಮ್ಮ ಗಮನಕ್ಕೆ ತರಬಯಸುತ್ತಾ ವಿನಂತಿಸಿಕೊಳ್ಳುವುದೇನೆಂದರೆ, ಸುಮಾರು 4-5 ದಿವಸಗಳಿಂದ ನಿರಂತರವಾಗಿ ಸುರಿಯುತ್ತಿರುವ ರಭಸದ ಮಳೆಗೆ ಬೀದರ ನಗರಾದ್ಯಂತ ಇರುವ ಸಾರ್ವಜನಿಕ ರಸ್ತೆಗಳು ಸಂಪೂರ್ಣವಾಗಿ ಕಿತ್ತು ಹೋಗಿದ್ದು, ಅದರಲ್ಲಿ ಮಳೆ ನೀರು ನಿಂತು ವಾಹನ ಚಾಲಕರಿಗೆ ವಾಹನ ಚಲಾಯಿಸುವುದಕ್ಕೆ ಮತ್ತು ಪಾದಚಾರಿಗಳಿಗೆ ನಡೆದಾಡಲು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಸ್ವಲ್ಪ ಆಯಾ ತಪ್ಪಿದಲ್ಲಿ ಕೆಸರಿನಲ್ಲಿ ಬಿಳುವ ಸಂಭವಿದ್ದು ಬಿದ್ದಿರುವಂತಹ ಉದಾಹರಣೆಗಳಿವೆ. ರಸ್ತೆ ಮೇಲೆ ನಿಂತಿರುವ ಹೆಸರು ನೀರಿನಲ್ಲಿ ವೇಗವಾಗಿ ಸಾಗುವ ವಾಹನಗಳಿಂದ ಪಾದಚಾರಿಗಳ ಬಟ್ಟೆಗಳ ಮೇಲು ಬಿದ್ದು ಹಾಳಾಗುತ್ತಿವೆ. ಬೀದರ ನಗರದ ಅಂಬೇಡ್ಕರ್ ಕಾಲೋನಿ ಹತ್ತಿರ, ಶಾಸಕ ರಹೀಂ ಖಾನ್ ಫಾರ್ಮ ಹೌಸ್, ಬೀದರ ನಗರದಿಂದ ಸುಮಾರು 7 ಕಿ.ಮೀ ಅಂತದದಲ್ಲಿರುವ ಕಮಠಾಣಾ ಗ್ರಾಮಕ್ಕೆ ಹೋಗುವ ರಸ್ತೆ ಮಧ್ಯದಲ್ಲಿರುವ ಬೆಳ್ಳೂರು ಕಮಾನದಿಂದ ಜಮೀಸ್ತಾನಪೂರ ಕ್ರಾಸ್ ವರೆಗೆ ಇರುವ 2 ಕೀ. ಮೀ ರಸ್ತೆ ಸಂಪೂರ್ಣವಾಗಿ ಹಾಳಾ ಹಾಳಾಗಿದ್ದು ರಾತ್ರಿ ಹೊತ್ತಿನಲ್ಲಿ ಸದರಿ ರಸ್ತೆಯ ಮೇಲೆ ಸಂಚಾರ ಮಾಡಬೇಕಾದರೆ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಹೋಗುವಂತಹ ಸ್ಥಿತಿ ನಿಮಾರ್ಣವಾಗಿದೆ. ಹಾಗೂ ಗುನ್ನಳ್ಳಿ ಗ್ರಾಮಕ್ಕೆ ಹೋಗುವ ರಸ್ತೆ ಕೂಡ ಕೆಟ್ಟು ಹೋಗಿರುತ್ತದೆ. ಮತ್ತು ಚಿದ್ರಿ ರಸ್ತೆಯಲ್ಲಿರುವ ಕೇಂದ್ರ ಶಾಲೆಯ ಕಂಪೌಂಡ ಪಕ್ಕದಿಂದ ಹಳೆ ಆದರ್ಶ ಕಾಲೋನಿ ಮೂಲಕ ರೈಲ್ವೆ ಗೇಟ್ ವರೆಗೆ ಇದ್ದ ರಸ್ತೆಯನ್ನು ಪೂರ್ಣವಾಗಿ ಮಾಡದೆ ಅರ್ಧ ರಸ್ತೆಯನ್ನು ಮಾಡಿ ಇನ್ನುಳದ ಅರ್ಧ ರಸ್ತೆಯ ಹಣವನ್ನು ಗುತ್ತಿಗೆದಾರರ ಜೇಬಿಗೆ ಸೇರಿರುತ್ತದೆ. ಹಾಗೂ ಬೀದರ ನಗರಾದ್ಯಂತ ಇರುವ ಬೀದಿ ದೀಪಗಳಿಗೆ ಲೈಟಗಳು ಇಲ್ಲದ ಕಾರಣ ರಾತ್ರಿ ಹೊತ್ತಿನಲ್ಲಿ ವಾಹನ ಚಾಲಕರಿಗೆ ವಾಹನ ಚಲಾಯಿಸಲು ಮತ್ತು ಪಾದಚಾರಿಗಳಿಗೆ ನಡೆದಾಡಲು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಹಾಗೂ ಚರಂಡಿಗಳು ಕಚರಾಗಳಿಂದ ತುಂಬಿರುವ ಕಾರಣ ಮಳೆ ನೀರು ಚರಂಡಿ ಮೂಲಕ ಹರಿದು ಹೋಗುವುದಕ್ಕೆ ಆಗದ ಕಾರಣ ಸದರಿ ನೀರು ರಸ್ತೆಗೆ ಹರಿದು ರಸ್ತೆಯ ಮೇಲೆ ಕೆಸರು ಆಗುತ್ತಿದ್ದು ಇದರಿಂದ ಸಾರ್ವಜನಿಕರು ಕಷ್ಟ ಅನುಭವಿಸುವಂತಾಗಿದೆ.
ಆದಕಾರಣ, ಸಾರ್ವಜನಿಕರ ಹಿತದೃಷ್ಟಿಯಿಂದ ಹಾಳಾಗಿರುವ ರಸ್ತೆಗಳನ್ನು ಕೂಡಲೇ ದುರಸ್ತಿ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಇಂದು ಜಿಲ್ಲಾಧಿಕಾರಿಗಳಿಗೆ ಕರವೇ (ಪ್ರವೀಣ ಶೆಟ್ಟಿ ಬಣ) ವತಿಯಿಂದ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಪಿಟರ್ ಚಿಟಗುಪ್ಪಾ, ಪ್ರಲ್ಲಾದ ಚಿಟ್ಟಾವಾಡಿ, ರಮೇಶ ಮರ್ಜಾಪೂರ, ಬಸವರಾಜ್ ನಂದಗಾಂವ, ನಿಲೇಶ ರಾಠೋಡ್, ನಾಗೇಶ ರಾಯಣ್ಣೂರ, ಮೋಸಿನ್ ಪಟೇಲ,ವಿಲಾಸ ಪಾಟೀಲ, ಧನರಾಜ ಎನ್ ಚೆಟ್ಟಾವಾಡಿ, ಸಚೀನ ಕುದುರೆ, ಯೂಹಾನ ಮಿಸೇ, ಶಿವು ಚಿಟ್ಟಾವಾಡಿ, ರಾಜಗೊಂಡ ಚಿಟ್ಟಾವಾಡಿ, ಅಲೆಕ್ಸಾಂಡರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.