
ಸಂಜೆವಾಣಿ ವಾರ್ತೆ,
ವಿಜಯಪುರ,ನ.೫:ಕರಾಟೆ ಶಿಕ್ಷಕ ಬಸವರಾಜ ಬಾಗೇವಾಡಿ ಉತ್ನಾಳ ಅವರಿಗೆ ಧಾರವಾಡದಲ್ಲಿ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಧಾರವಾಡದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಯಾದಗಿರಿ ಕನ್ನಡ ನುಡಿಮುತ್ತು ಸಾಹಿತ್ಯ ವೇದಿಕೆ ಕರ್ನಾಟಕ ಆಯೋಜಿಸಿದ ರಾಜ್ಯ ಮಟ್ಟದ ತೃತೀತ ಸಾಹಿತ್ಯ ಸಮ್ಮೇಳನ ಮತ್ತು ಸಾಧಕರ, ಕವನಗಳ ಪುಸ್ತಕ ಬಿಡುಗಡೆ ಸಮಾರಂಭ ಜರುಗಿತು.
ಈ ಸಂದರ್ಭದಲ್ಲಿ ಬಾಗೇವಾಡಿ ಅವರ ಕ್ರೀಡಾ ಕ್ಷೇತ್ರದಲ್ಲಿನ ಸಾಧನೆಯನ್ನು ಗುರುತಿಸಿ, ಈ ವರ್ಷ ಕೊಡ ಮಾಡುವ ಕರುನಾಡ ಸೌರಭ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಂಸ್ಥೆಯ ಅಧ್ಯಕ್ಷ ಜಗದೀಶ ಕಾಬನೆ ಹಾಗೂ ಅತಿಥಿಗಳು, ಪದಾಧಿಕಾರಿಗಳು ಭಾಗವಹಿದ್ದರು.






























