Home ಜಿಲ್ಲೆ ಕಲಬುರಗಿ ಕರಾಟೆಚಾಂಪಿಯನ್ ಶಿಪ್ : ವಿವಿಎನ್ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ

ಕರಾಟೆಚಾಂಪಿಯನ್ ಶಿಪ್ : ವಿವಿಎನ್ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ

ಕಲಬುರಗಿ:ಫೆ.26:ನಗರದ ಚಂದ್ರಶೇಖರ ಪಾಟೀಲಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಕರಾಟೆ ಚಾಂಪಿಯನ್ಸ್ಪರ್ಧೆಯಲ್ಲಿ ವಿವೇಕಾನಂದ ವಿದ್ಯಾನಿಕೇತನ ಶಾಲೆಯ ವಿದ್ಯಾರ್ಥಿಗಳು ಅತೀ ಹೆಚ್ಚು ಸ್ಥಾನವನ್ನು ಪಡೆಯುವುದರ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಕಲ್ಯಾಣ ಕರ್ನಾಟಕಸ್ಪೋಟ್ಸ್ರ್ಕರಾಟೆಅಸೋಷಿಯನ್ ಶಿಪ್ ಸ್ಪರ್ಧೆಯನ್ನು ಆಯೋಜಿಸಿತ್ತು. ಜಿಲ್ಲಾ ಮಟ್ಟದ ಕಟಾ ಸ್ಪರ್ಧೆಯಲ್ಲಿ ಅರ್ಪಿತಾ ಅಯ್ಯಣ್ಣ ಹಾಗೂ ಕುಮಿತೆ 10 ವರ್ಷ ವಯಸ್ಸಿನ ಸ್ಪರ್ಧೆಯಲ್ಲಿಅಭಯಕುಮಾರ ಪ್ರಥಮಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
10 ವರ್ಷ ವಯಸ್ಸಿನ ಕಟಾ ಸ್ಪರ್ಧೆಯಲ್ಲಿನಿರಂಜನ ಹೊಸೂರಕರ್ ತೃತೀಯ ಸ್ಥಾನವನ್ನು ಹಾಗೂ ಕುಮಿತೆ12 ವರ್ಷ ವಯಸ್ಸಿನ ಸ್ಪರ್ಧೆಯಲ್ಲಿ ಅಲೋಕ ತೃತೀಯ ಸ್ಥಾನವನ್ನು ಪಡೆದು ಗೆಲುವು ತಮ್ಮದಾಗಿಸಿಕೊಂಡಿದ್ದಾರೆ.
ವಿದ್ಯಾರ್ಥಿಯ ಈ ಸಾಧನೆಗೆ ವಿವೇಕಾನಂದ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಸುವರ್ಣ ಭಗವತಿ, ಪ್ರಾಂಶುಪಾಲ ಸಿದ್ದಪ್ಪ ಭಗವತಿ,ಯೋಗ ಶಿಕ್ಷಕಿ ಶ್ರೀಲತಾ, ದೈಹಿಕ ಶಿಕ್ಷಕರಾದ ಬಸವರಾಜ ಮಜ್ಜಗೆ, ಮಹೇಶಕುಮಾರ ಭಜಂತ್ರಿ, ಶಿಕ್ಷಕರುಹಾಗೂ ಪೆÇೀಷಕರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.