ಕನ್ನಡಿಗರಿಗೆ ಇರಿತ ಖಂಡನೆ- ಎಂಇಎಸ್ ನಿಷೇಧಕ್ಕೆ ಆಗ್ರಹ

ಕೋಲಾರ,ನ, ೩- ಬೆಳಗಾವಿಯಲ್ಲಿ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಿದ್ದ ಸಂದರ್ಭದಲ್ಲಿ ಎಂ.ಇ.ಎಸ್‌ನ ಸಂಘಟನೆಯ ಭಯೋತ್ಪದಕತೆಯ ಗುಂಪೊಂದು ಐದಾರು ಮಂದಿ ಕನ್ನಡಿಗರಿಗೆ ಮಾರಾಕಾಸ್ತ್ರಗಳಿಂದ ಇರಿದಿರುವ ದುರ್ಘಟನೆಯನ್ನು ಜಿಲ್ಲಾ ಕನ್ನಡ ರಕ್ಷಣ ವೇದಿಕೆ ಅಧ್ಯಕ್ಷ ಮೇಡಿಹಾಳ ರಾಘವೇಂದ್ರ ತೀವ್ರವಾಗಿ ಖಂಡಿಸಿದ್ದಾರೆ.


ಕರ್ನಾಟಕದ ನೆಲದಲ್ಲಿ ನೆಲೆಸಿ ಇಲ್ಲಿನ ಅನ್ನ ತಿಂದು, ನೀರು ಕುಡಿದು. ಸೂರು ಪಡೆದು, ಅಕ್ಷರ, ಉದ್ಯೋಗಗಳು ಸೇರಿದಂತೆ ಸಕಲ ಸೌಲಭ್ಯವನ್ನು ಪಡೆದು ಇಲ್ಲಿನ ಕನ್ನಡಿಗರಿಗೆ ಚಾಕುವಿನಿಂದ ಇರಿದು, ಇಲ್ಲಿನ ನಾಡು ನುಡಿ ಸಂಸ್ಕೃತಿಗೆ ದ್ರೋಹ ಬಗೆಯುತ್ತಿರುವ ರಾಜ್ಯ ದ್ರೋಹಿ ಎಂ.ಇ.ಎಸ್ ಸಂಘಟನಯ ಪುಂಡರನ್ನು ಗಡಿಪಾರು ಮಾಡ ಬೇಕು. ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.


ರಾಜ್ಯ ಸರ್ಕಾರ ಕೊಡಲೆ ಎಂ.ಇ.ಎಸ್. ಪುಂಡಾಟಗಳಿಗೆ ತಿಲಾಂಜಲಿ ನೀಡಲು ಮುಂದಾಗ ಬೇಕು ಇಲ್ಲವಾದಲ್ಲಿ ಕ.ರ.ವೇ ಹಾಗೂ ಕನ್ನಡ ಪರ ಸಂಘಟನೆಗಳಿಂದ ಉಗ್ರವಾದ ಪ್ರತಿಭಟನೆಯ ಹೋರಾಟವನ್ನು ನಡೆಸಲಾಗುವುದು ಎಚ್ಚರಿಸಿದರು.


ರಾಜ್ಯ ದ್ರೋಹಿ ಕೃತ್ಯಗಳನ್ನು ಪದೇ ಪದೇ ಎಂ.ಇ.ಎಸ್. ಸಂಘಟನೆ ಮಾಡುತ್ತಿರುವುದನ್ನು ಯಾವೂದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಇದನ್ನು ಕನ್ನಡಿಗರು ಹಗುರವಾಗಿ ಪರಿಗಣಿಸದೆ ರಾಜ್ಯ ಮಟ್ಟದಲ್ಲಿ ಪ್ರತಿಭಟಿಸುವ ಮೂಲಕ ರಾಜ್ಯದಲ್ಲಿ ಎಂ.ಇ.ಎಸ್. ಸಂಘಟನೆಯನ್ನೆ ನಿಷೇಧಿಸುವಂತೆ ಮಾಡುವವರೇಗೂ ಹೋರಾಟವನ್ನು ಮಾಡ ಬೇಕೆಂದು ಕರೆ ನೀಡಿದ್ದಾರೆ.


ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆಗಳನ್ನು ಪದೇ ಪದೇ ಕದಡುವಂತ ಎಂ.ಇ.ಎಸ್. ಸಂಘಟನೆಯ ರಾಜ್ಯ ದ್ರೋಹಿ ಭಯೋತ್ಪದನೆ ಕೃತ್ಯಗಳ ವಿರುದ್ದ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಂಡು ಪಾಠ ಕಲಿಸ ಬೇಕು. ರಾಜ್ಯೋತ್ಸವ ದಿನದಂದು ಪೊಲೀಸ್ ಇಲಾಖೆಯಿಂದ ಯಾವೂದೇ ಅನುಮತಿ ಪಡೆಯದ ಕರಾಳ ದಿನವನ್ನು ಆಚರಿಸಿದ್ದಾರೆ ಇದರ ವಿರುದ್ದ ಪೊಲೀಸ್ ಇಲಾಖೆ ಕಾನೂನು ಕ್ರಮ ಜರುಗಿಸಿ ಪುಂಡರನ್ನು ವಿರುದ್ದ ಪ್ರಕರಣ ದಾಖಲಿಸಿ ಬಂಧಿಸ ಬೇಕೆಂದು ಆಗ್ರಹ ಪಡೆಸಿದ್ದಾರೆ.


ಎಂ.ಇ.ಎಸ್. ಸಂಘಟನೆಯ ಭಯೋತ್ಪಾದಕರ ವಿರುದ್ದ ಕ್ರಮ ಕೈಗೊಂಡು ಸದೆ ಬಡಿಯದಿದ್ದರೆ ಮುಂದೆ ಇನ್ನಷ್ಟು ದುಷ್ಟಕೃತ್ಯಗಳಿಗೆ ಅವಕಾಶ ಮಾಡಿ ಕೊಟ್ಟಂತೆ ಅಗುವುದರಿಂದ ರಾಜ್ಯ ಸರ್ಕಾರವು ಈ ಪ್ರಕರಣವನ್ನು ಹಗುರವಾಗಿ ಪರಿಗಣಿಸದೆ ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದ್ದಾರೆ.