ಕೋಲಾರ,ನ,೩- ತಾಲೂಕಿನ ನರಸಾಪುರ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆ ವಿಭಾಗದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೭೦ನೇ ವರ್ಷದ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು,
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಪಿ ಭಾರತಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ ಕನ್ನಡಿಗರು ಭಾಷೆ, ನೆಲ, ಜಲದ ಉಳಿವಿಗಾಗಿ ಸದಾ ಶ್ರಮಿಸಬೇಕು, ತಾರತಮ್ಯ ಭೇದಭಾವದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ, ಒಗ್ಗಟ್ಟು ಎಲ್ಲರ ಐಕ್ಯಮಂತ್ರವಾಗಬೇಕು ಎಂದರು,
ಕಾರ್ಯಕ್ರಮದಲ್ಲಿ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ ಸಲ್ಲಿಸಿದರು, ಪುಟಾಣಿಗಳು ವೇಷಭೂಷಣಗಳಿಂದ ಕಂಗೊಳಿಸುತ್ತಿದ್ದರು, ಮಕ್ಕಳಿಗೆ ಸಿಹಿಯನ್ನು ಹಂಚಿ ಸಂಭ್ರಮದಿಂದ ಆಚರಿಸಿದರು, ಸಹ ಶಿಕ್ಷಕರಾದ ಹಂಸವೇಣಿ, ಲತಾ, ಕುಸುಮ, ಹೇಮಾವತಿ, ಸೌಮ್ಯ, ಮನುಜ, ಅರ್ಚನಾ, ರೇಣುಕಾ, ಹನುಮಾನ್ ಸಿಂಗ್, ವೆಂಕಟರವಣ, ಶಾಲೆಯ ಸಿಬ್ಬಂದಿ ವರ್ಗದವರು, ಮತ್ತು ಮಕ್ಕಳು ಹಾಜರಿದ್ದರು.


























