ಕಲಬುರಗಿ:ಸೆ.12:ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಭಾಷಾ ಕೌಶಲ ಬಹುಮುಖ್ಯ, ಅದು ಮಾತೃ ಭಾಷೆಯಾಗಿದ್ದರೆ ಇನ್ನೂ ಉತ್ತಮ, ಎಂದು ಡಾ.ಸುರೇಶ್ ಜಾಧವ ಹೇಳಿದರು.
ಗುಣಮಟ್ಟದ ಶಿಕ್ಷಣಕ್ಕೆ ಹೆಸರಾದ, ವಿವೇಕಾನಂದ ವಿದ್ಯಾ ನಿಕೇತನ ಶಾಲೆಯಲ್ಲಿ “ವಿದ್ಯಾರ್ಥಿಗಳ ಕನ್ನಡ ಸಂಘ”ಸ್ಥಾಪನಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಿವೃತ್ತ ಪ್ರಾಧ್ಯಾಪಕ ಡಾ.ಸುರೇಶ್ಜಾಧವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ, ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕನ್ನಡಕ್ಕೆ, ಕನ್ನಡ ಸಾಹಿತ್ಯಕ್ಕೆ ಪ್ರಾಶಸ್ತ್ಯ ನೀಡಿ ಕನ್ನಡ ಸಂಘಸ್ಥಾಪಿಸಿರುವುದು ಶ್ಲಾಘನೀಯ ಕಾರ್ಯ ಎಂದರು.
ಕನ್ನಡಸಾಹಿತ್ಯಕ್ಕೆ ವಚನಕಾರರ, ದಾಸ ಸಾಹಿತಿಗಳ, ಕೊಡುಗೆಯನ್ನು ಪರಿಚಯಿಸುತ್ತ ಮಕ್ಕಳಿಗೆ ಕೆಲವು ಪದ್ಯದ ಸಾಲುಗಳನ್ನು ಹೇಳಿ ರಂಜಿಸಿದರು. ಮಕ್ಕಳಿಗೆ ಕನ್ನಡದ ಕೆಲವು ಒಗಟುಗಳನ್ನು ಬಿಡಿಸುವ ಸವಾಲೊಡ್ಡಿದರು. ಮಕ್ಕಳು ಖುಷಿಯಿಂದ ಉತ್ತರ ನೀಡಿದರು.
ಶಿವರಾಜ ಹಾಗೂ ಸಂಗಡಿಗರು ಅಭಿನಯಿಸಿದ “ಕನ್ನಡ ಉಳಿಸಿ, ಕನ್ನಡ ಬೆಳೆಸಿ” ಎಂಬ ಕಿರು ನಾಟಕ ಪ್ರದರ್ಶಿಸಿ ಎಲ್ಲರ ಮೆಚ್ಚುಗೆ ಪಡೆದರು. ಸಂಸ್ಥೆಯ ಅಧ್ಯಕ್ಷ ಸುವರ್ಣಾ ಭಗವತಿ ಸಂಘದ 145ಸದಸ್ಯರಿಗೆ ಕನ್ನಡ ಸಾಹಿತ್ಯದ ಪುಸ್ತಕಗಳನ್ನು ನೀಡಿ ಪೆÇ್ರೀತ್ಸಾಹಿಸಿದರು.
ಪ್ರಿನ್ಸಿಪಾಲ ಸಿದ್ದಪ್ಪ ಭಗವತಿ ಮಾತನಾಡಿ,ಮಕ್ಕಳು ನಾಲ್ಕನೇ ತರಗತಿಯಿಂದ ಒಂಭತ್ತನೇ ತರಗತಿಯ ಅವಧಿಯಲ್ಲಿ ಸಾಹಿತ್ಯ, ದಿನಪತ್ರಿಕೆ ಓದಬೇಕು,ನಂತರ ಓದಲು ಮಕ್ಕಳಿಗೆ ಸಮಯ ಇರುವುದಿಲ್ಲ, ಪೆÇೀಷಕರೂ ಬಿಡುವುದಿಲ್ಲ, ಹಾಗಾಗಿ ಶಾಲಾ ದಿನಗಳಲ್ಲಿಯೇ ಮಕ್ಕಳು ತಮ್ಮ ಭಾಷಾ ಕೌಶಲಗಳನ್ನು ಬೆಳೆಸಿಕೊಳ್ಳಬೇಕು,ಎಂದರು.
ಕಾರ್ಯಕ್ರಮದಲ್ಲಿ ಶಿಕ್ಷಣ ಸಮನ್ವಯಾಧಿಕಾರಿಗಳಾದ ನಿಖಿಲ್ ಪಾಟಿಲ್, ಸುಷ್ಮಾ ಭಗವತಿ,ಕನ್ನಡ ವಿಭಾಗದ ಮುಖ್ಯಸ್ಥೆ ರತ್ನಾ ಶೆಳ್ಳಗಿ, ಕನ್ನಡ ಶಿಕ್ಷಕರಾದ ಆನಂದ ಔರಾದಕರ್, ರಾಜು ರಾಠೋಡ,ರೇಣುಕಾ ಪಾಟೀಲ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಲಕ್ಷ್ಮಿ ಕಲ್ಲಪ್ಪ ಸ್ವಾಗತಿಸಿದರು, ಗುರುರಾಜನಿರೂಪಿಸಿದರು,ಶ್ರದ್ಧಾ ಶಶಿಕಾಂತವಂದಿಸಿದರು.






















