
ಬೀದರ್: ಶ್ರೀ ಕೇತಕಿ ಶೈಕ್ಷಣಿಕ ಮತ್ತು ಸಾಂಸ್ಕøತಿಕ ಸಂಸ್ಥೆ ಹಾಗೂ ಹಣ್ಮುಪಾಜಿ ಗೆಳೆಯರ ಬಳಗದ ವತಿಯಿಂದ ಇಲ್ಲಿಯ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಕರ್ನಾಟಕ ರಾಜ್ಯೋತ್ಸವ ನಿಮಿತ್ತ ಸೋಮವಾರ ಆಯೋಜಿಸಿದ್ದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಅವರಿಗೆ 2025ನೇ ಸಾಲಿನ ಕನ್ನಡ ಸಾರಥಿ ಹಾಗೂ ವಿವಿಧ ಕ್ಷೇತ್ರಗಳ 70 ಸಾಧಕರಿಗೆ ಕನ್ನಡ ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದ ಡಾ. ನಾಗಲಕ್ಷ್ಮಿ ಚೌಧರಿ ಅವರು, ಎಲ್ಲರೂ ಕನ್ನಡಾಭಿಮಾನ ಬೆಳೆಸಿಕೊಳ್ಳಬೇಕು ಎಂದರು.
ಸಂಘದ ಅಧ್ಯಕ್ಷ ಹಣ್ಮುಪಾಜಿ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ, ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ, ಬೆಂಗಳೂರಿನ ಇ???ಸೈಟ್ಸ್ ಐಎಎಸ್ ತರಬೇತಿ ಸಂಸ್ಥೆಯ ಮುಖ್ಯಸ್ಥ ಜಿ.ಬಿ. ವಿನಯಕುಮಾರ, ಲಿಂಗಾಯತ ಮಹಾಮಠದ ಪ್ರಭುದೇವ ಸ್ವಾಮೀಜಿ, ಮುಖಂಡರಾದ ಅಮೃತರಾವ್ ಚಿಮಕೋಡೆ, ಬಾಬುವಾಲಿ, ಸಂಜೀವಕುಮಾರ ಅತಿವಾಳೆ, ಲಿಂಗಾರತಿ ಅಲ್ಲಮಪ್ರಭು, ರವೀಂದ್ರ ಸ್ವಾಮಿ, ಸಿದ್ರಾಮ ಸಿಂಧೆ, ಬಸವರಾಜ ಶಹಾಪುರೆ, ಅಭಿಷೇಕ ಮಠಪತಿ, ಓಂ ಕೌಠೆ, ನಾಮದೇವ ಸೋಳಂಕೆ, ರವಿ ಚವಾಣ್, ರಾಹುಲ್ ರಾಯ್, ಗಣೇಶ ಸಿ.ಎ., ಪರಮೇಶ ವಿಳಾಸಪುರೆ, ಮತ್ತಿತರರು ಇದ್ದರು.

























