
ಕೋಲಾರ.ಸೆ.೫- ಕನ್ನಡ ಸಾಹಿತ್ಯ ಪರಿಷತ್ನ್ನು ಈ ಹಿಂದೆ ಯಾರೂ ಸಹ ಸ್ವಾರ್ಥಕ್ಕಾಗಿ ಬಳಿಸಿ ಕೊಂಡಿರಲಿಲ್ಲ. ಅದರೆ ಕಳೆದ ೧೦ ವರ್ಷಗಳಲ್ಲಿ ಪರಿಷತ್ನ್ನು ದುರಂತದ ಸ್ಥಿತಿಗೆ ದೂಡಲಾಗಿದೆ. ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣಾ ಅಕಾಂಕ್ಷಿ ಹಿರಿಯ ಪತ್ರಕರ್ತ ಜಾಣಗೇರೆ ವೆಂಕಟ ರಾಮಯ್ಯ ಬೇಸರ ವ್ಯಕ್ತಪಡೆಸಿದರು.
ನಗರದ ಪತ್ರಕರ್ತರ ಭವನದಲ್ಲಿನ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ನಿವೃತ್ತ ಅಧಿಕಾರಿಗಳನ್ನು ಕಸಾಪಗೆ ನೇಮಕ ಮಾಡಿದ ಹಿನ್ನಲೆಯಲ್ಲಿ ಅವರುಗಳು ಕಸಾಪವನ್ನು ತಮ್ಮ ಸ್ವಾರ್ಥಕ್ಕಾಗಿ ಬಳಿಸಿ ಕೊಂಡು ಸಾರ್ವಧಿಕಾರ ನಡೆಸಿದರು. ಕಸಾಪಗೆ ಭೇಟಿ ನೀಡಿದ ಹೋರಾಟಗಾರರು ಏನೊಂದು ಕೇಳಲಾಗದಂತೆ ಅವರಿಗೆ ನೋಟಿಸ್, ಮಾನನಷ್ಟ ಮೊಕದ್ದಮೆ ದಾಖಲಿಸುವುದು ವಿನಾ ಕಾರಣ ಕ್ಯಾತೆ ತೆಗೆದು ಬೆದರಿಸುವ ಕೆಲಸದಿಂದ ಅವರ ಬಾಯಿಗಳನ್ನು ಕಟ್ಟಿ ಹಾಕಿದರು.
ಇವರುಗಳಿಗೆ ನೀಡಿದ ಸಚಿವ ಸ್ಥಾನ ಮಾನದಿಂದ ಕನ್ನಡ ಪರ ಚಟುವಟಿಕೆಗಳು ಸ್ಥಗಿತಗೊಂಡಿತ್ತು ಇವg ಅಧಿಕಾರದ ಮದದಲ್ಲಿ ದುರಾಡಳಿತಕ್ಕೆ ಕಡಿವಾಣ ಹಾಕುವವರೇ ಇಲ್ಲದಂತಾಗಿತ್ತು ಸುಮಾರು ೭-೮ ಕೋಟಿ ರೂ ಅನುದಾನ ಲೂಟಿಯಾಗಿದೆ ಎಂದು ಅನೇಕ ಪ್ರಕರಣಗಳನ್ನು ಉದಾಹರಿಸಿದ ಅವರು ಲೂಟಿ ಮಾಡಿರುವಂತ ಅನುದಾನದ ಹಣವನ್ನು ವಸೂಲಿ ಮಾಡ ಬೇಕು ದುರ್ಬಳಕೆ ವಿರುದ್ದ ಕಠಿಣಾ ಕ್ರಮ ಕೈಗೊಂಡಾಗ ಮಾತ್ರ ಮುಂದಿನ ಭವಿಷತ್ದಲ್ಲಿ ಕ.ಸಾ.ಪ ಅಧ್ಯಕ್ಷರಾಗುವವರಿಗೆ ದುರಾಡಳಿತ ನಡೆಸಲು ಸಾಧ್ಯವಾಗದಂತೆ ಎಚ್ಚರಿಕೆ ಗಂಟೆಯ ಪಾಠವಾಗಲಿದೆ ಎಂದರು
ಕನ್ನಡ ಸಾಹಿತ್ಯ ಪರಿಷತ್ತಿಗ ಸಚಿವ ಸ್ಥಾನಮಾನ ನೀಡುವ ಅಗತ್ಯವಿಲ್ಲ. ಪರಿಷತ್ತು ತನ್ನ ಸ್ವಾಯತ್ತತೆ ಮತ್ತು ಸ್ವತಂತ್ರ ಅಸ್ತಿತ್ವವನ್ನು ಉಳಿಸಿಕೊಂಡು ಕನ್ನಡ ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಯ ಅಭಿವೃದ್ಧಿಗ ಕಾರ್ಯನಿರ್ವಹಿಸಬೇಕು ಒತ್ತಾಯಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗ ಸಚಿವ ಸ್ಥಾನಮಾನ ನೀಡುವ ವಿಚಾರವನ್ನು ಮರುಪರಿಶೀಲಿಸುವಂತೆ ಮುಖ್ಯಮಂತ್ರಿಗಳಿಗ ಈಗಾಗಲೇ ಹಲವು ಬಾರಿ ಮನವಿ ಮಾಡಲಾಗಿದೆ. ಇಂತಹ ಸ್ಥಾನಮಾನದಿಂದ ಪರಿಷತ್ತಿನ ಕಾರ್ಯವೈಖರಿಗ ಅನುಕೂಲವಾಗುವುದಕ್ಕಿಂತ ಅಧಿಕಾರದ ದುರುಪಯೋಗಕ್ಕ ಅವಕಾಶ ಕಲ್ಲಿಸುವ ಸಾಧ್ಯತೆ ಇದೆ. ಆದ್ದರಿಂದ ಪರಿಷತ್ತಿನ ಸ್ವಾಯತ್ತತೆಯನ್ನು ಯಾವುದೇ ಕಾರಣಕ್ಕೂ ದುರ್ಬಲಗೊಳಿಸಬಾರದು ಎಂದು ಅವರು ಹೇಳಿದರು.
ರಾಜ್ಯದಲ್ಲಿ ನಾಲ್ಕೂವರ ಲಕ್ಷಕ್ಕೂ ಹೆಚ್ಚು ಸದಸ್ಯರನ್ನು ಹೊಂದಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಸರ್ವಸದಸ್ಯರ ಸಭಗಳನ್ನು ನಡೆಸುವಾಗ ಎಲ್ಲ ಜಿಲ್ಲಗಳ ಸದಸ್ಯರು ಸುಲಭವಾಗಿ ಭಾಗವಹಿಸಲು ಅನುಕೂಲವಾಗುವ ವಿಶಾಲವಾದ ಸಭಾಂಗಣಗಳನ್ನು ಆಯ್ಕೆ ಮಾಡಬೇಕು. ಕೇವಲ ನೂರಾರು ಜನರು ಸೇರುವ ಸಣ್ಣ ಸಭಾಂಗಣಗಳಲ್ಲಿ ಸರ್ವಸದಸ್ಯರ ಸಭ ನಡೆಸುವುದು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟ ಅವರು ಕನ್ನಡ ಸಾಹಿತ್ಯ ಪರಿಷತ್ತಿನಂತಹ ಐತಿಹಾಸಿಕ ಸಂಸ್ಥೆಯ ಚಟುವಟಿಕೆಗಳಿಗ ಅನುಕೂಲವಾಗುವ ರೀತಿಯಲ್ಲಿ ಸೂಕ್ತ ಮೂಲಸೌಕರ್ಯ ಹಾಗೂ ವ್ಯವಸ್ಥೆ ಕಲ್ಲಿಸಬೇಕು ಎಂದು ಒತ್ತಾಯಿಸಲಾಯಿತು.
ಹಲವು ದಶಕಗಳ ಕಾಲ ಸರ್ಕಾರದ ವಿವಿಧ ಹುದ್ದೆಗಳಲ್ಲಿ ಅಧಿಕಾರ ಚಲಾಯಿಸಿದವರು ನಂತರ ಪರಿಷತ್ತಿನ ಆಡಳಿತಕ್ಕ ಬಂದು ಅದರ ಕಾರ್ಯಚಟುವಟಿಕೆಗಳ ಮೇಲೆ ಪ್ರಭಾವ ಬೀರುವಂತಾಗಬಾರದು. ಪರಿಷತ್ತು ಕನ್ನಡಿಗರ ಸ್ವತಂತ್ರ ಸಾಂಸ್ಕೃತಿಕ ಸಂಸ್ಥೆಯಾಗಿದ್ದು, ಅದರ ನಿರ್ವಹಣಯಲ್ಲಿ ಪಾರದರ್ಶಕತೆ ಮತ್ತು ಕನ್ನಡಪರ ಕಾಳಜಿ ಮುಖ್ಯವಾಗಬೇಕು ಎಂದು ಒತ್ತಿ ಹೇಳಿದರು.
ನೂರಾರು ವರ್ಷಗಳ ಇತಿಹಾಸ ಹೊಂದಿರುವ ಕನ್ನಡದ ಸಂಸ್ಥೆಯ ಬಾಗಿಲು ಮುಚ್ಚುವಂತಹ ಪರಿಸ್ಥಿತಿ ನಿರ್ಮಾಣವಾಗಬಾರದು. ಕನ್ನಡಿಗರ ಹಿತದೃಷ್ಟಿಯಿಂದ ಪರಿಷತ್ತಿನ ಚಟುವಟಿಕೆಗಳು ನಿರಂತರವಾಗಿ ನಡೆಯುವಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಜಾಗೃತೆ ಮೂಢಿಸಿದರು.
ಪರಿಷತ್ತಿನ ಕಾರ್ಯಕ್ರಮಗಳಿಗ ರಾಜ್ಯದ ವಿವಿಧ ಭಾಗಗಳಿಂದ ಜನರು ಆಗಮಿಸುತ್ತಾರ. ರಲು, ಬಸ್ ಸೇರಿದಂತೆ ಸಾರ್ವಜನಿಕ ಸಾರಿಗ ಮೂಲಕ ಬರುವವರಿಗ ಸುಲಭವಾಗಿ ತಲುಪಲು ಸಾಧ್ಯವಾಗುವಂತಹ ಸ್ಥಳದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ರಸ್ತ ಸಂಪರ್ಕವಿಲ್ಲದ, ವಾಹನಗಳು ಸರಿಯಾಗಿ ಸಂಚರಿಸಲು ಸಾಧ್ಯವಾಗದ ಪ್ರದೇಶಗಳಲ್ಲಿ ಪ್ರಮುಖ ಸಭಗಳನ್ನು ನಡೆಸುವುದರಿಂದ ಸದಸ್ಯರು ಹಾಗೂ ಸಾರ್ವಜನಿಕರಿಗ ತೊಂದರಯಾಗುತ್ತದೆ ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳಿಗ ಎಲ್ಲ ಜಿಲ್ಲಗಳ ಕನ್ನಡಿಗರು ಸುಲಭವಾಗಿ ಆಗಮಿಸಿ ಭಾಗವಹಿಸಲು ಅನುಕೂಲವಾಗುವಂತಹ ಸ್ಥಳ ಮತ್ತು ಮೂಲಸೌಕರ್ಯ Pಲ್ಲಿಸುವುದು ಅತ್ಯಗತ್ಯ. ಪರಿಷತ್ತಿನ ಹಿತ ಮತ್ತು ಕನ್ನಡಿಗರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ಮುಂದಿನ ದಿನಗಳಲ್ಲಿ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಕಸಾಪ ಹೋರಾಟಗಾರ ಆರ್.ಜಿ.ಹಳ್ಳಿ ನಾಗರಾಜ್ ಮಾತನಾಡಿ ರಾಜಕೀಯ ಪಕ್ಷವೊಂದು ಪರಿಷತ್ ಚುನಾವಣೆಯನ್ನು ಪ್ರವೇಶಿಸಿ ಕೆಲಸ ಮಾಡಿ ಕನ್ನಡದ ಮನಸ್ಸುಗಳನ್ನು ಒಡೆದು ಹಾಕಿತು.ಈ ರೀತಿ ದಾರಿ ತಪ್ಪಿದ ಪರಿಷತ್ ಸರಿಪಡಿಸ ಬೇಕಾಗಿದೆ. ಹಾಗಾಗಿ ಹಿರಿಯ ಹೋರಾಟಗಾರ ಜಾಣಗೇರೆ ವೆಂಕಟರಾಮಯ್ಯನಂತವರಿಗೆ ಕಸಾಪ ಆಡಳಿತ ಚುಕ್ಕಾಣಿ ಹಿಡಿಯುವಂತೆ ಮಾಡಿದಾಗ ಮಾತ್ರ ಕಸಾಪದಲ್ಲಿ ಜವಾಬ್ದಾರಿಯುತ ಆಡಳಿತ ಕಾಣಲು ಸಾಧ್ಯವಾಗಲಿದೆ, ಕ.ಸಾ.ಪ,ಗೆ ಸಾಹಿತಿಗಳು,ಚಿಂತಕರು. ಕನ್ನಡ ಪರ ಕಾಳಜಿಯುಳ್ಳ ಹೋರಾಟಗಾರರ ಅಗತ್ಯವಿದೆ ಎಂದು ಅಭಿಪ್ರಾಯ ಪಟ್ಟರು.
ಪತ್ರಿಕಾಗೋಷ್ಠಿಯಲ್ಲಿ ಕನ್ನಡ ಚಳುವಳಿಗಾರರಾದ ಅ.ಕೃ. ಸೋಮಶೇಖರ್, ಕನ್ನಡ ವೆಂಕಟಪ್ಪ, ಕಲಾವಿದ ವಿಷ್ಟು, ಕೆ.ಎಸ್.ಆರ್.ಟಿ.ಸಿ. ಬಾಲಕೃಷ್ಣ,. ಕ.ರ.ವೇ. ಚಂಬೆ ರಾಜೇಶ್, ಶ್ರೀ ಭುವನೇಶ್ವರಿ ಕನ್ನಡ ಸಂಘದ ಅಧ್ಯಕ್ಷ ತ್ಯಾಗರಾಜ್,ಸೋಮಶೇಖರ್ ಇದ್ದರು.























