ಗಡಿಭಾಗದ ಕುಂಠಿಮರಿ ಚೆಕ್ ಪೋಸ್ಟ್ ಹತ್ತಿರ ಕನ್ನಡ ರಾಜ್ಯೋತ್ಸವ

ಗುರುಮಿಠಕಲ:ನ.೩:ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಘಟಕ ಗುರುಮಠಕಲ್ ವತಿಯಿಂದ ಹಮ್ಮಿಕೊಂಡಿರುವ ಜಿಲ್ಲೆಯ ಗಡಿಭಾಗವಾದ ಕುಂಟಿಮಾರಿ ಚೆಕ್ ಪೋಸ್ಟ್ ಹತ್ತಿರ ಕನ್ನಡ ರಾಜ್ಯೋತ್ಸವದ ಅದ್ದೂರಿ ಧ್ವಜಾರೋಹಣವನ್ನು ಕರವೇ ತಾಲೂಕ ಅಧ್ಯಕ್ಷರಾದ ಶರಣಬಸಪ್ಪ ಯಲ್ಹೇರಿ ಅವರು ನೆರವೇರಿಸಿಕೊಟ್ಟರು ಹಾಗೂ ಕನ್ನಡಾಂಬೆ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಅಬಕಾರಿ ಇಲಾಖೆಯ ಅಧಿಕಾರಿಯಾದ ಶ್ರೀಶೈಲ ಎಸ್ ಒಡೆಯರ್ ಅವರು ಪೂಜೆ ನೆರವೇರಿಸಿದರು ಈ ಸಂದರ್ಭದಲ್ಲಿ ಮಾತನಾಡಿದ ಕರವೇ ತಾಲೂಕಧ್ಯಕ್ಷ ಶರಣಬಸಪ್ಪ ಯಲ್ಹೇರಿ ಅವರು ನಮ್ಮ ಗುರುಮಠಕಲ್ ತಾಲೂಕು ಗಡಿಭಾಗದಲ್ಲಿ ಇರುವುದರಿಂದ ತೆಲುಗು ಭಾಷೆ ಪ್ರಭಾವ ಇರುವುದರಿಂದ ಕನ್ನಡ ಕಟ್ಟುವಂತ ಕೆಲಸ ಸದಾ ಆಗಬೇಕು ಹಾಗಾಗಿ ಕಾರ್ಯಕರ್ತರು ಇನ್ನು ಹೆಚ್ಚಿನ ಕರವೇ ಗ್ರಾಮ ಶಾಖೆಗಳು ಮಾಡುವುದರ ಮುಖಾಂತರ ಕನ್ನಡ ನಾಡು,ನುಡಿ,ನೆಲ,ಜಲ ಸಂಸ್ಕೃತಿಯನ್ನು ಎತ್ತಿ ಹಿಡಿದು ೨೩೦೦ ವರ್ಷಗಳ ಅಧಿಕ ಇತಿಹಾಸ ಹೊಂದಿರುವ ಕನ್ನಡದ ಸಂಸ್ಕೃತಿಯನ್ನು ಪಸರಿಸುವ ಕೆಲಸ ಕರವೇ ಮಾಡಬೇಕು ಗಡಿ ಭಾಗದಲ್ಲಿ ಸರ್ಕಾರವು ಅರ್ಥಪೂರ್ಣ ಕರ್ನಾಟಕ ರಾಜ್ಯೋತ್ಸವವನ್ನು ಆಚರಣೆ ಮಾಡಬೇಕು. ಹಾಗೂ ಪ್ರತಿ ವರ್ಷವೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಮ್ಮ ಗಡಿ ಭಾಗದಲ್ಲಿ ಕನ್ನಡ ಕಟ್ಟುವ ಕೆಲಸ ಮತ್ತು ಬೆಳೆಸುವ ಕೆಲಸ ಆಗುತ್ತಿಲ್ಲ. ಆದ್ದರಿಂದ ಸರ್ಕಾರವೇ ಈ ಭಾಗದಲ್ಲಿ ಗಡಿನಾಡ ಉತ್ಸವ ಮಾಡಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಕರವೇ ಜಿಲ್ಲಾ ಉಪಾಧ್ಯಕ್ಷರಾದ ಪ್ರಕಾಶ್ ಪಾಟೀಲ್ ಜೈಗ್ರಾಮ್, ತಾಲೂಕ ಪ್ರಧಾನ ಕಾರ್ಯದರ್ಶಿ ಮೌನೇಶ್ ದೊಬ್ಬಲ್ ಮಾಧ್ವಾರ,ಜಗದೀಶ್ ನಸಲವಾಯಿ, ರಾಕೇಶ್ ಕುಂಟಿಮಾರಿ, ಶಿವು ಕಾವಲಿ ಕೊಂಕಲ್, ರಾಘವರೆಡ್ಡಿ ಪಳ್ಳ ಸಂಬರ,ದೇವಸಿAಗ್ ಮಾಧ್ವಾರ,ವಿಜಯ ತೋರಣತಿಪ್ಪ ತಾಯಪ್ಪ ಕಾಳೆಬೆಳಗುಂದಿ, ಬನ್ನಯ್ಯ ಕಲಾಲ್,ಪ್ರಭಾಕರ್ ಹೂಗಾರ್, ಮಂಜುನಾಥ ಬಟಿಕೇರಿ,ನಿಂಗಪ್ಪ ಕರಣಿಗಿ, ಹಣಮಂತ ಬೋವಿ, ನಾಗಪ್ಪ ಮಡಿವಾಳ್ ಸಂಬರ,ಅನಿಲ್ ವಂಕಸAಬರ ಇನ್ನು ಹಲವಾರು ಕರವೇ ಕಾರ್ಯಕರ್ತರು ಉಪಸ್ಥಿತರಿದ್ದರು.