
ಕೋಲಾರ,ನ.೫- ಸ್ವರ್ಣಭೂಮಿ ಪೌಂಡೇಶನ್, ರೋಟರಿ ಕ್ಲಬ್ ಕೋಲಾರ ಇವರ ಸಂಯುಕ್ತಾಶ್ರಯದಲ್ಲಿ ನುಡಿ ಸಂಭ್ರಮ-೨೦೨೫ ನಾಡಿನ ವಿವಿಧ ಕ್ಷೇತ್ರದ ಸಾಧಕರಿಗೆ ಸ್ವರ್ಣಭೂಮಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸುವ ಕಾರ್ಯಕ್ರಮವನ್ನು ನಗರದ ಪತ್ರಕರ್ತರ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಅಂತರರಾಷ್ಟ್ರೀಯ ಕ್ರೀಡಾಪಟು ಜಿ.ದೊರೆಸ್ವಾಮಿ ಅಚಾರಿಗೆ ಕನ್ನಡ ರಾಜ್ಯೋತ್ಸ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ತಾಲೂಕಿನ ಹೊನ್ನೇನಹಳ್ಳಿ ಗ್ರಾಮದ ಗೋಪಾಲಾಚಾರಿ ಮತ್ತು ಆರ್.ಲಕ್ಷ್ಮಿದೇವಮ್ಮರ ೪ನೆಯ ಮಗನಾಗಿ ಜನಿಸಿದ ಜಿ.ದೊರೆಸ್ವಾಮಿ ಅಚಾರಿ ಬಾಲ್ಯದಲ್ಲಿ ಉತ್ತಮ ಕುಸ್ತಿಪಟುವಾಗಿ ಬೆಳೆದು (ಉತ್ತಮ) ಕೃಷಿಯಲ್ಲಿ ಹಾಗೂ ಸಂಗೀತದಲ್ಲಿ ಉತ್ತಮ ಕಬಡ್ಡಿಪಟುವಾಗಿ ನಂತರ ದಿನಗಳಲ್ಲಿ ಕ್ರಿಕೇಟ್ ಆಟದಲ್ಲಿ ಭಾಗವಹಿಸಿದ್ದು, ನಂತರ ಅಥ್ಲೆಟಿಕ್‌ನಲ್ಲಿ ಜಿಲ್ಲಾಮಟ್ಟ,ರಾಜ್ಯಮಟ್ಟ, ರಾಷ್ಟ್ರಮಟ್ಟ, ಹಾಗೂ ಅಂತರರಷ್ಟ್ರೀಯ ಮಟ್ಟದಲ್ಲಿ ಉದ್ದಜಿಗಿತ, ತ್ರಿವಿಧ ಜಿಗಿತ, ೧೦೦ ಮೀ ಓಟ, ಹಡ್‌ರ್ಲ್ಸ್‌ನಲ್ಲಿ ಬೆಳ್ಳಿಪದಕ, ಚಿನ್ನದ ಪದಕಗಳನ್ನು ಗಳಿಸಿ ಹೊನ್ನೇನಹಳ್ಳಿ ಗ್ರಾಮಕ್ಕೆ ಹಾಗೂ ದೇಶಕ್ಕೆ ಕೀರ್ತಿಯನ್ನು ತಂದಿರುತ್ತಾರೆ. ಇವರನ್ನು ಗ್ರಾಮಸ್ಥರು ಅಭಿನಂದಿಸಿದ್ದಾರೆ.






























