ಕನ್ನಡ ನಾಡು ಪುಣ್ಯ ಭೂಮಿ:ಬೆಳಗುಂದಿ

ಸೈದಾಪುರ:ನ2:ಶ್ರೇಷ್ಠ ಸಾದು, ಸಂತರು, ಋಷಿಗಳು ಹಾಗೂ ಸಾಹಿತಿಗಳನ್ನು ಕಂಡ ಕನ್ನಡ ನಾಡು ಪುಣ್ಯ ಭೂವಿಯಾಗಿದೆ ಇದರ ಮಹತ್ವ ತಿಳಿದು ನಾವು ಸಾಗಬೇಕು ಎಂದು ವಿದ್ಯಾ ವರ್ಧಕ ಸಂಘದ ಅಧ್ಯಕ್ಷ ಸಣ್ಣ ಸಿದ್ರಾಮಪ್ಪಗೌಡ ಬೆಳಗುಂದಿ ಅಭಿಪ್ರಾಯಪಟ್ಟರು.
ಇಲ್ಲಿನ ವಿದ್ಯಾ ವರ್ಧಕ ಸಂಸ್ಥೆಯ ವಿವಿಧ ವಿಭಾಗಗಳ ವತಿಯಿಂದ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಧ್ಜಜಾರೋಹಣ ನೇರವೆರಿಸಿ ಮಾತನಾಡಿದರು. 1956 ನವಂಬರ 1ರಂದು ವಿಶಾಲ ಮೈಸುರು ರಾಜ್ಯವೆಂದು ಭಾಷವಾರು ಆಧಾರದ ಮೇಲೆ ನಮ್ಮ ರಾಜ್ಯ ಅಸ್ಥಿತ್ವಕ್ಕೆ ಬಂತು. ಕನ್ನಡ ಮಾತನಾಡುವ ಜನ ಹರಿದು ಹಂಚಿ ಹೋಗಿದ್ದರು. ಹಲವಾರು ಜನರ ಹೋರಾಟದ ಫಲವಾಗಿ 1973 ರಂದು ಮೈಸುರ ರಾಜ್ಯವನ್ನು ಕರ್ನಾಟಕ ರಾಜ್ಯ ಎಂದು ಮರು ನಾಮಕರಣ ಮಾಡಲಾಯಿತು. ಈ ವಿದಧ ಅಖಂಡ ಕರ್ನಾಟಕದ ಕಲ್ಪನೆಯನ್ನು ಮಕ್ಕಳಿಗೆ ಮೂಡಿಸುವ ಕೆಲಸ ನಾವು ಮಾಡಬೇಕಾಗಿದೆ ಎಂದು ಹೇಳಿದರು.
ಕೋಶಾಧ್ಯಕ್ಷ ಮುಕುಂದಕುಮಾರ ಅಲಿಝಾರ ಮಾತನಾಡಿ, ಕನ್ನಡಕ್ಕೆ ಉತ್ತಮ ಇತಿಹಾಸವಿದೆ. ಸಾಹಿತಿಗಳು ಸೇರಿದಂತೆ ವಿವಿಧ ವಿಭಾಗಗಳ ಕೊಡುಗೆ ಹೆಚ್ಚಿನದ್ದಾಗಿದೆ. ಇದನ್ನು ಉಳಿಸಿ ಬೆಳಸುವ ಕೆಲಸವಾಗಬೇಕು. ಇದಕ್ಕಾಗಿ ಕನ್ನಡ ಸಂಸ್ಕøತಿ ಹಾಗೂ ಭಾಷೆಗೆ ಸಹಕರಿಸಿ ನಡೆಯುವ ಛಲ ನಮ್ಮದಾಗಬೇಕು ಎಂದು ಕಿವಿ ಮಾತುಗಳನ್ನು ಹೇಳಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಹಿರಿಯ ಸದಸ್ಯರಾದ ಭೀಮರೆಡ್ಡಿ ಪಾಟೀಲ ಶೆಟ್ಟಹಳ್ಳಿ, ಸಹ ಕಾರ್ಯದರ್ಶಿ ಕೆ.ಬಿ.ಗೋವರ್ಧನ, ಕೋಶಾಧ್ಯಕ್ಷ ಮುಕುಂದಕುಮಾರ ಅಲಿಝಾರ, ಆಡಳಿತ ಮಂಡಳಿಯ ಸದಸ್ಯ ಸುರೇಶ ಆನಂಪಲ್ಲಿ, ಮುಖ್ಯಗುರು ಲಿಂಗಾರೆಡ್ಡಿ ನಾಯಕ, ದೈಹಿಕ ಶಿಕ್ಷಕ ವಿಶ್ವನಾಥರಡ್ಡಿ ಪಾಟೀಲ ಕಣೇಕಲ, ರಾಜಶೇಖರ ಪಾಟೀಲ, ಬಸ್ಸಯ್ಯ ಸ್ವಾಮಿ, ಮಲ್ಲಣ್ಣಗೌಡ, ಪ್ರಾಂಶುಪಾಲ ಹಂಪಣ್ಣ ಸಜ್ಜನ ಶೆಟ್ಟಿ, ಜಿ.ಎಂ.ಗುರುಪ್ರಸಾದ, ಕರಬಸಯ್ಯ ದಂಡಿಗಿಮಠ, ಗೂಳಪ್ಪ.ಎಸ್.ಮಲ್ಹಾರ, ಶಿಕಕ್ಷಕರು, ಉಪನ್ಯಾಸಕರು, ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಸೇರಿದಂತೆ ಇತರರಿದ್ದರು. ಶಿಕ್ಷಕ ಸಂಗಾರೆಡ್ಡಿ ನಿರೂಪಿಸಿ, ವಂದಿಸಿದರು.