
ಕಲಬುರಗಿ: ಡಿ.24: ಆಧುನಿಕ ತಂತ್ರಜ್ಞಾನದ ಬೆಳವಣಿಗೆಯಿಂದ ಮುದ್ರಣ ಕ್ಷೇತ್ರದಲ್ಲಿ ಬಹುದೊಡ್ಡ ಕ್ರಾಂತಿ ಸಾಧ್ಯವಾಗಿದೆ. ಇದರಿಂದ ಪುಸ್ತಕಗಳ ಆವೃತ್ತಿ, ಮರು ಮುದ್ರಣ, ಗ್ರಂಥಗಳ ಪುಟ ವಿನ್ಯಾಸ ಮತ್ತು ಆಕರ್ಷಕ ವ್ಯಂಗ್ಯ ಚಿತ್ರಗಳ ಬಳಕೆ ಸಾಧ್ಯವಾಗಿದೆ. ಆದರೆ, ಕನ್ನಡ ಭಾμÉ ಮತ್ತು ಸಾಹಿತ್ಯ ಉಳಿಯಬೇಕಾದರೆ ಕನ್ನಡ ಪುಸ್ತಕಗಳನ್ನು ಹೆಚ್ಚು ಹೆಚ್ಚಾಗಿ ಓದುವ ಹವ್ಯಾಸ ಬೆಳೆಯಬೇಕು ಜೊತೆಗೆ ಕನ್ನಡ ಓದಲು ಪೆÇ್ರೀತ್ಸಾಹಿಸಬೇಕಿದೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪೆÇ್ರ. ಶಶಿಕಾಂತ ಎಸ್. ಉಡಿಕೇರಿ ಅಭಿಪ್ರಾಯಪಟ್ಟರು.
ಗುಲಬರ್ಗಾ ವಿಶ್ವವಿದ್ಯಾಲಯದ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಮಂಗಳವಾರ ಕನ್ನಡ ಸಂಸ್ಕøತಿ ಇಲಾಖೆಯ ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ ಹಿರಿಯ ಸಾಹಿತಿಗಳಾದ ಚನ್ನವೀರ ಕಣವಿ ಹಾಗೂ ಪೆÇ್ರ. ಚಂದ್ರಶೇಖರ ಪಾಟೀಲ ಸಂಗ್ರ ಸಂಪುಟಗಳ ಲೋಕಾರ್ಪಣೆ ಹಾಗೂ ಉಚಿತ ಪುಸ್ತಕಗಳ ವಿತರಣಾ ಸಮಾರಂಭ ಮತ್ತು ಮನೆಗೊಂದು ಗ್ರಂಥಾಲಯ ಕಲಬುರಗಿ ಜಿಲ್ಲಾ ಜಾಗೃತ ಸಮಿತಿ ಸದಸ್ಯರಿಗೆ ಅರ್ಹತಾ ಪ್ರಮಾಣ ಪತ್ರ ವಿತರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ನಾಡಿನ ಸಾಕ್ಷಿಪ್ರಜ್ಞೆಯ ಹಿರಿಯ ಸಾಹಿತಿಗಳಾದ ಚನ್ನವೀರ ಕಣವಿ ಮತ್ತು ಚಂಪಾ ಕನ್ನಡ ನಾಡು ಕಂಡ ಮೇರು ಕವಿಗಳಾಗಿದ್ದಾರೆ. ಅವರ ವೈಚಾರಿಕ ಸಾಹಿತ್ಯ, ಕಾವ್ಯ ಮತ್ತು ಕವಿತೆಗಳು ಸಮಗ್ರ ಸಂಪುಟಗಳಲ್ಲಿ ಲೋಕಾರ್ಪಣೆ ಆಗಿದ್ದು, ಓದುವ ಪರಿಪಾಟವನ್ನು ವಿದ್ಯಾರ್ಥಿಗಳಲ್ಲಿ ಬೆಳೆಯಬೇಕಿದೆ. ಪುಸ್ತಕ ಮುದ್ರಣ ವೇಗ ಬೆಳೆದಂತೆ ಮರು ಮುದ್ರಣ ಸಾಧ್ಯವಾಗುತ್ತಿದ್ದೆ. ಆಕರ್ಷಕ ಪುಟ ವಿನ್ಯಾಸ, ಛಾಯಾಚಿತ್ರ ಮತ್ತು ವ್ಯಂಗ್ಯ ಚಿತ್ರಗಳ ಬಳಕೆ ಆಗುತ್ತಿದೆ. ಪ್ರಸ್ತುತ ಲೇಖಕರ ಸಾಹಿತ್ಯ ಮತ್ತು ಸಮಕಾಲೀನ ಬರಹಗಾರರ ಕೃತಿಗಳ ಓದುಗರ ಸಂಖ್ಯೆ ಹೆಚ್ಚಾಗಬೇಕಿದೆ. ವಿದ್ಯಾರ್ಥಿಗಳಲ್ಲಿ ಮೊಬೈಲ್ ಬಳಕೆ ಹವ್ಯಾಸ ಕಡಿಮೆಯಾಗಿ ಸಾಹಿತ್ಯ ಅಭಿರುಚಿ ಮತ್ತು ಓದುವ ಆಸಕ್ತಿ ಬೆಳೆಸಿದಾಗ ಕನ್ನಡ ಭಾμÉ ಮತ್ತು ಸಾಹಿತ್ಯ ಬೆಳೆಯಲು ಸಾಧ್ಯ ಎಂದ ಅವರು 1995ರಲ್ಲಿ ಧಾರವಾಡದಲ್ಲಿ ಚಂಪಾ ಅವರು ಕನ್ನಡ ಸಂಘ ಉದ್ಘಾಟನೆಗೆ ಆಗಮಿಸಿ ಕನ್ನಡ ಸಾಹಿತ್ಯ ಪರಂಪರೆ ಕುರಿತು ಮಾತುಗಳನ್ನು ಸ್ಮರಿಸಿಕೊಂಡರು.
ಯುವಕರಲ್ಲಿ ಮೊಬೈಲ್ ಬಳಕೆ ಕಡಿಮೆಯಾಗಬೇಕು. ಕನ್ನಡ ಭಾμÉ, ವೈಚಾರಿಕ ಬರಹ, ಸಾಹಿತಿಗಳ ಬದುಕು ಮತ್ತು ಬರವಣಿಗೆಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಮೇರು ಕವಿಗಳಾದ ಕಣವಿ ಮತ್ತು ಚಂಪಾ ಅವರ ಕವಿತೆ, ಕಾವ್ಯ, ವಿಮರ್ಶೆ ಮತ್ತು ಕಾದಂಬರಿಗಳನ್ನು ಉತ್ಸುಕರಾಗಿ ಓದಬೇಕು. ಪುಸ್ತಕ ಕೊಂಡು ಓದುವ ಸಂಸ್ಕೃತಿ ರೂಢಿಸಿಕೊಳ್ಳಬೇಕು. ಅಂದಾಗ ಮಾತ್ರ ಕನ್ನಡ ಭಾμÉ ಮತ್ತು ಸಾಹಿತ್ಯ ಬೆಳೆಯಲು ಸಾಧ್ಯವಾಗುತ್ತದೆ. ಗುಲಬರ್ಗಾ ವಿಶ್ವವಿದ್ಯಾಲಯ ಆವರಣದಲ್ಲಿ ಪುಸ್ತಕ ಪ್ರಾಧಿಕಾರದ ಮಳಿಗೆ ಸ್ಥಾಪನೆಗೆ ಅಗತ್ಯ ಸ್ಥಳವನ್ನು ನೀಡಲು ವಿಶ್ವವಿದ್ಯಾಲಯ ಸಿದ್ಧವಿದೆ. ಅದಕ್ಕೆ ಬೇಕಾದ ಎಲ್ಲಾ ರೀತಿಯ ಸೌಲಭ್ಯಗಳನ್ನು ಪ್ರಾಧಿಕಾರದ ಅಧ್ಯಕ್ಷರು ನೀಡಬೇಕು ಎಂದು ವಿನಂತಿಸಿದ ಕುಲಪತಿಗಳು ಇದರಿಂದ ಕನ್ನಡ ಸಾಹಿತ್ಯ, ಕೃತಿ, ಕಾವ್ಯ, ಕಾದಂಬರಿ ಮತ್ತು ವೈಚಾರಿಕ ಬರಹಳನ್ನು ಓದುವ ಹವ್ಯಾಸವನ್ನು ಬೆಳೆಸುವುದರ ಜೊತೆಗೆ ಪೆÇ್ರೀತ್ಸಾಹ ನೀಡಿದಂತಾಗುತ್ತದೆ ಎಂದು ಸಲಹೆ ನೀಡಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ಕಲಾ ನಿಕಾಯದ ಡೀನ್ ಹಾಗೂ ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪೆÇ್ರ. ಎಚ್.ಟಿ. ಪೆÇೀತೆ ಮುಖ್ಯ ಅತಿಥಿಯಾಗಿ ಮಾತನಾಡಿ ಡಾ. ಬಿ ಆರ್ ಅಂಬೇಡ್ಕರ್ ಮಾತಿನಂತೆ ಎಲ್ಲರು ನಮ್ಮ ಕೈ ಬಿಟ್ಟರು ಆದರೆ, ಪುಸ್ತಕಗಳು ನನ್ನ ಕೈ ಬಿಡಲಿಲ್ಲ. ಜಗತ್ತಿನಲ್ಲಿ ಅತಿ ಹೆಚ್ಚು ಪುಸ್ತಕ ಓದಿದವರು ಯಾರೆಂದು ನಡೆದ ಸಮೀಕ್ಷೆಯಲ್ಲಿ ಅತಿ ಹೆಚ್ಚಿನ ಪುಸ್ತಕಗಳನ್ನು ಓದಿದದವರು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಎಂಬುದನ್ನು ಜಾಗತಿಕ ತಜ್ಞರು ಒಪ್ಪಿದ್ದಾರೆ. ಡಾ.ಬಿ. ಆರ್. ಅಂಬೇಡ್ಕರ್ ಗ್ರಂಥಾಲಯದಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಸಂಗ್ರಹಿಸಿದ್ದರು. ಅವರ ಸಾಧನೆ ಪ್ರತಿಯೊಬ್ಬ ವ್ಯಕ್ತಿಗೂ ಸ್ಫೂರ್ತಿಯಾಗಬೇಕು. ವಿದ್ಯಾರ್ಥಿಗಳೂ ತಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಮಾಡದೆ ಅಧ್ಯಯನದಲ್ಲಿ ನಿರತರಾಗಬೇಕು ಎಂದ ಅವರು ನಾಡಿನ ಸಾಹಿತ್ಯ ಲೋಕಕ್ಕೆ ಈ ಭಾಗದ ವಚನ, ತತ್ವಪದ, ದಾಸ ಸಾಹಿತ್ಯ, ಸೂಫಿ ಸಾಹಿತ್ಯ, ವಡ್ಡರಾಧನೆ ಮತ್ತು ಕವಿರಾಜಮಾರ್ಗದಂತ ಕೃತಿಗಳನ್ನು ನೀಡಿದ ಶ್ರೇಯಸ್ಸು ಈ ನೆಲಕ್ಕೆ ಸಲ್ಲುತ್ತದೆ. ಪ್ರತಿಯೊಬ್ಬ ವ್ಯಕ್ತಿಗೂ ಸಿಗುವ ಅವಕಾಶಗಳು ಸಾಮಾಜಿಕ ನ್ಯಾಯ ಮತ್ತು ಸಮಾನತೆಯಿಂದ ಕೂಡಿರಬೇಕು ಎಂದು ಹೇಳಿದರು.
ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಕನ್ನಡ ಕಟ್ಟಿದ ಮತ್ತು ಕನ್ನಡ ಸಾಹಿತ್ಯವನ್ನು ನದಿಯ ಹೊನಲಂತೆ ಹರಿಸಿದ ಕಣವಿ ಮತ್ತು ಚಂಪಾ ಅವರ ಸಾಹಿತ್ಯ ಪ್ರಜ್ಞೆ ಮತ್ತು ಸಾಂಸ್ಕೃತಿಕ ಪ್ರಜ್ಞೆಯನ್ನು ಈ ಕೃತಿಗಳ ಮೂಲಕ ಇಂದು ವಿಸ್ತಾರಗೊಂಡಿದೆ. ಹೃದಯ ಬೆಸೆಯುವ ಮತ್ತು ಸಹೃದಯ ಸಂಬಂಧಗಳು ಭಾμÉ ಮತ್ತು ಸಾಹಿತ್ಯದಿಂದ ಬೆಳೆಯುತ್ತವೆ. ಬದುಕನ್ನು ಬದುಕುವಂತೆ ಕಲಿಸುವುದು ಕಲೆ ಅದ್ದರಿಂದ ಕಲೆ, ಸಾಹಿತ್ಯ, ಸಂಗೀತ ಮತ್ತು ಬಂಡಾಯ ಸಾಹಿತ್ಯ ಪ್ರತಿಯೊಬ್ಬರಿಗೂ ಜ್ಞಾನವನ್ನು ನೀಡುತ್ತವೆ. ಹುಯಿಲಗೋಳ ನಾರಾಯಣರ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು, ಕಣವಿಯವರ ಹಸಿರಾಯಿತು ಕರ್ನಾಟಕ ಉಸಿರಾಯಿತು ಕನ್ನಡ ಎಂಬ ಗೀತೆಗಳು ಕನ್ನಡ ಭಾμÉಯನ್ನು ಉತ್ತುಂಗಕ್ಕೇರಿಸಿವೆ. ಜೀವನದಲ್ಲಿ ಬದುಕುವುದು ಒಂದು ಕಲೆ. ಜೀವನದಲ್ಲಿ ಎಂತಹ ಸಮಸ್ಯೆಗಳು ಬಂದಾಗ ದೃತಿಗೆಡದೆ ನಮ್ಮಲ್ಲಿರುವ ಜ್ಞಾನದಿಂದ ಎಂತಹ ಸಮಸ್ಯೆಯನ್ನು ಸುಲಭವಾಗಿ ಬಗೆಹರಿಸಿಕೊಳ್ಳಬಹುದು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಹಿರಿಯ ಸಾಹಿತಿಗಳು ಹಾಗೂ ಪೆÇ್ರ. ಚಂದ್ರಕಾಂತ ಪಾಟೀಲ್ ಸಮಗ್ರ ಸಾಹಿತ್ಯ ಸಂಪುಟಗಳನ್ನು ಸಂಪಾದಿಸಿರುವ ಪೆÇ್ರ. ಎಸ್. ಜಿ ಸಿದ್ದರಾಮಯ್ಯ ಅವರು ಮಾತನಾಡಿ ಕನ್ನಡ ದಿಗ್ಗಜರ ಬರಹಗಳನ್ನು ಸಂಪುಟ ಕೆಲಸದಲ್ಲಿ ಭಾಗವಹಿಸಿರುವುದು ನನ್ನ ಸೌಭಾಗ್ಯ. ಚಂಪಾ ಅವರು ಕೇವಲ ಸಾಹಿತ್ಯದಲ್ಲμÉ್ಟೀ ಬೆಳೆಯಲಿಲ್ಲ. ಇಂಗ್ಲೀμï ಪ್ರಾಧ್ಯಾಪಕರಾಗಿ ಕನ್ನಡ ನಾಡು, ನುಡಿ, ಭಾμÉ ಸಿದ್ಧಾಂತಗಳಂತೆ ಬದುಕಿದರು. ಸಂಕ್ರಮಣ ಪ್ರಕಾಶನ ಆರಂಭಿಸಿ ಸುಮಾರು ನಾಲ್ಕು ದಶಕಗಳ ಕಾಲ ಸಾಹಿತ್ಯ ಸುಧೆಯನ್ನು ಎಲ್ಲಡೆ ಪಸರಿಸುವಂತೆ ಮಾಡಿದರು. ದೇಶ ವಿದೇಶಗಳ ಬರಹಗಾರರು ಮತ್ತು ಓದುಗರ ಬರಹಗಳು ಸಾಹಿತ್ಯಕ ಮೌಲ್ಯಗಳನ್ನು ಬಿತ್ತರಿಸಿದರು. ಸಂಸ್ಕೃತಿ ಮತ್ತು ಸಾಹಿತ್ಯವನ್ನು ಗಟ್ಟಿಯಾಗಿ ನೆಲೆಸುವಂತೆ ಮಾಡಿದರು ಎಂದ ಅವರ ಸಮಕಾಲೀನ ಚಿಂತನೆ ಮತ್ತು ಸಾಹಿತ್ಯದ ಮೌಲಿಕ ಸಂಪುಟಗಳು ಇಂದು ಹೊರಬಂದಿವೆ. ಓದುವ ಮೂಲಕ ಸಾಹಿತ್ಯವನ್ನು ಬೆಳೆಸಬೇಕು ಎಂದರು.
ಹಿರಿಯ ಸಾಹಿತಿಗಳಾದ ಡಾ. ಬಸವರಾಜ ಸಬರದ ಚೆನ್ನವೀರ ಕಣವಿ ಮತ್ತು ಪೆÇ್ರ.ಚಂದ್ರಕಾಂತ ಪಾಟೀಲ್ ಅವರ ಸಂಪುಟಗಳನ್ನು ಪರಿಚಯಿಸಿದರು. ಪೆÇ್ರ. ಎಸ್. ಜಿ ಸಿದ್ದರಾಮಯ್ಯ ಅವರು 25 ಶಾಲಾ ಕಾಲೇಜಿನ ಮುಖ್ಯಸ್ಥರಿಗೆ 15 ಸಾವಿರ ಮೌಲ್ಯದ ಚೆನ್ನವವೀರ ಕಣವಿ, ಪೆÇ್ರ. ಚಂದ್ರಶೇಖರ್ ಪಾಟೀಲ್ ಅವರ ಕೃತಿಗಳನ್ನು ಒಳಗೊಂಡಂತೆ ಸಾಹಿತ್ಯ ಪುಸ್ತಕಗಳನ್ನು ವಿತರಿಸಿದರೆ, ಚೆನ್ನವೀರ ಕಣವಿ ಸಮಗ್ರ ಸಂಪುಟಗಳ ಸಂಪಾದಾಕರಾದ ಡಾ. ಜಿ. ಎಂ ಹೆಗಡೆಯವರು ಮನೆಗೊಂದು ಗ್ರಂಥಾಲಯ ಕಲಬುರಗಿ ಜಿಲ್ಲಾ ಜಾಗೃತಿ ಸಮಿತಿ ಸದಸ್ಯರಿಗೆ ಅರ್ಹತಾ ಪತ್ರವನ್ನು ವಿತರಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರ ವಿಶೇಷ ಅಧಿಕಾರಿ ಮತ್ತು ಆಡಳಿತ ಅಧಿಕಾರಿ ಕೆ. ಬಿ. ಕಿರಣಸಿಂಗ್ ಪ್ರಾಸ್ತ್ತಾವಿಕ ಮಾತುಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ಕುಲಸಚಿವ ಪೆÇ್ರ. ರಮೇಶ ಲಂಡನಕರ್, ಸಿಂಡಿಕೇಟ್ ಸದಸ್ಯ ಉದಯ ಬಿ. ಪಾಟೀಲ್, ಪೆÇ್ರ. ಚಂದ್ರಶೇಖರ್ ಪಾಟೀಲ್ ಸಮಗ್ರ ಸಾಹಿತ್ಯ ಸಂಪುಟಗಳ ಸಹ ಸಂಪಾದಕ ಡಾ. ಮಂಜುನಾಥ ಟಿ, ಸಮಗ್ರ ಸಾಹಿತ್ಯ ಸಂಪುಟಗಳ ಹಕ್ಕುದಾರರಾದ ಶ್ರೀಮತಿ. ನೀಲಾ ಪಾಟೀಲ್, ಚೆನ್ನವೀರ ಕಣವಿ ಸಮಗ್ರ ಸಾಹಿತ್ಯ ಸಂಪುಟಗಳ ಹಕ್ಕುದಾರರಾದ ಪ್ರಿಯದರ್ಶಿ ಕಣವಿ ಉಪಸ್ಥಿತರಿದ್ದರು.
ನಾಡಿನ ಖ್ಯಾತ ಬರಹಗಾರರು, ಸಾಹಿತಿಗಳು, ಲೇಖಕರು, ಪ್ರಕಾಶಕರು, ವಿವಿಧ ನಿಕಾಯಗಳ ಡೀನರು, ಮುಖ್ಯಸ್ಥರು, ಪ್ರಾಧ್ಯಾಪಕರು, ಹಿರಿಯ ಪತ್ರಕರ್ತರು, ಅತಿಥಿ ಉಪನ್ಯಾಸಕರು, ನಗರದ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಂಗೀತ ವಿಭಾಗದ ಉಪನ್ಯಾಸಕಿ ಡಾ. ಜಯಮ್ಮ ನಾಡಗೀತೆ ಹಾಡಿದರು. ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಸಂಚಾಲಕ ಬಿ. ಎಸ್. ನೀರಗುಡಿ ಅತಿಥಿ ಗಣ್ಯರನ್ನು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
ರಾಜ್ಯದಲ್ಲಿ ಶಾಲಾ ಕಾಲೇಜುಗಳು ದುಸ್ಥಿತಿಯಲ್ಲಿವೆ. ಸರ್ಕಾರ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳ ಬಗ್ಗೆ ಹೊಣೆಗಾರಿಕೆಯಿಂದ ನಡೆಯಬೇಕಿದೆ. ಸರ್ಕಾರದ ಆಡಳಿತ ಮತ್ತು ಸಾಹಿತ್ಯ ಕ್ಷೇತ್ರದಲ್ಲಿಯೂ ಸಾಮಾಜಿಕ ನ್ಯಾಯ ಮತ್ತು ಪ್ರಾದೇಶಿಕ ಪ್ರಾತಿನಿಧ್ಯವನ್ನು ಕಾಪಾಡಬೇಕು. ಹೃದಯವಂತಿಕೆ ಮತ್ತು ಅಂತಃಕರಣದಿಂದ ನ್ಯಾಯ ಒದಗಿಸುವುದು ಸರ್ಕಾರದ ಜವಾಬ್ದಾರಿ.
- ಪೆÇ್ರ. ಜಿ. ಸಿದ್ದರಾಮಯ್ಯ
ಹಿರಿಯ ಸಾಹಿತಿಗಳು
ಪೆÇ್ರ. ಚಂದ್ರಶೇಖರ ಪಾಟೀಲ ಸಮಗ್ರ ಸಾಹಿತ್ಯ ಸಂಪುಟಗಳ ಸಂಪಾದಕರು.
ಕಲ್ಯಾಣ ಕರ್ನಾಟಕ ಭಾಗದ ಸುಮಾರು 18 ಪುರಾಣ ಮಹಾಕಾವ್ಯಗಳನ್ನು ಸಾಹಿತ್ಯ ಲೋಕಕ್ಕೆ ನೀಡಿದೆ. ಶೋಧನೆ ಮಾಡಿದರೆ ಮತ್ತಷ್ಟು ಸಿಗುತ್ತವೆ. ವಚನ ಸಾಹಿತ್ಯ, ಸೂಫಿ ಸಾಹಿತ್ಯ, ದಾಸ ಸಾಹಿತ್ಯ, ಕೀರ್ತನೆ, ಗಜಲ್ ಮತ್ತು ಬೌದ್ಧ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆಯಿದೆ. ಇವೆಲ್ಲವುಗಳು ಈ ಭಾಗದ ಆಸ್ತಿಗಳು. ಆದರೆ, ಬಹಳ ದಿನಗಳಿಂದ ನಮ್ಮದೊಂದು ಒತ್ತಾಯವಿದೆ. ಈ ಭಾಗದ ಸಾಹಿತ್ಯ ಬೆಳವಣಿಗೆಗೆ ದುಡಿದ ಸಾಹಿತಿಗಳಾದ ಚನ್ನಣ್ಣ ವಾಲೀಕಠಾರ್, ಗೀತಾ ನಾಗಭೂಷಣ್, ಶಾಂತರಸರು, ಬಿ. ಶ್ಯಾಂಸುಂದರ್ ಅವರ ಪ್ರತಿμÁ್ಠನಗಳನ್ನು ಸರ್ಕಾರವೇ ಮುಂದೆ ಬಂದು ಸ್ಥಾಪಿಸಬೇಕು. ಸಾಹಿತ್ಯ, ಲೇಖಕರ, ಬರಹಗಾರರ ಬಹುಕಾಲದ ಒತ್ತಾಯ. ಮನವಿಗೆ ಸಕಾರಾತ್ಮಕವಾಗಿ ಸರ್ಕಾರ ಸ್ಪಂದಿಸುತ್ತಿಲ್ಲ.
• ಪೆÇ್ರ. ಬಸವರಾಜ ಸಬರದ, ಹಿರಿಯ ಸಾಹಿತಿಗಳು






















