ವಿಜಯಪುರ, ನ.3:ಬದುಕನ್ನು ಕಟ್ಟಿಕೊಡುವ ಭಾμÉ ಕನ್ನಡ, ಕನ್ನಡ ಜ್ಞಾನದ ಭಾμÉಯಾಗಿದೆ. ಕನ್ನಡದ ಭಾμÉಯನ್ನು ಕಲಿತವರು ಉನ್ನತ ಹುದ್ದೆಯನ್ನು ಏರಿ ಸುಂದರ ಬದುಕನ್ನ ಕಟ್ಟಿಕೊಂಡಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಹೇಶ ಪೆÇದ್ದಾರ ಅಭಿಪ್ರಾಯ ಪಟ್ಟರು.
ಚೇತನಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಮತೆ, ಪ್ರೀತಿ, ಮಾನವೀಯತೆಯನ್ನು ಕಲಿಸಿದ ಶ್ರೇಷ್ಠ ಭಾμÉ ಕನ್ನಡ ಎಂದು ಹೇಳಿದರು.
ಮುಖ್ಯೋಪಾಧ್ಯಾಯ ಸಾಹಿತಿ, ಪೆÇ್ರ ಎ ಎಚ್ ಕೊಳಮಲಿ ಮಾತನಾಡಿ, ಕವಿ ಪುಂಗರು, ಶರಣರು, ಸಂತರು, ದಾಸರು ಕನ್ನಡ ನಾಡನ್ನು ಶ್ರೀಮಂತಗೊಳಿಸಿದ್ದಾರೆ. ಕನ್ನಡ ಜ್ಞಾನ ಹಾಗೂ ಹೃದಯ ಶ್ರೀಮಂತಿಕೆಯ ಭಾμÉಯಾಗಿದೆ ಎಂದು ಹೇಳಿದರು.
ಸಂಸ್ಥೆಯ ಅಧ್ಯಕ್ಷೆ ರಾಜಶ್ರೀ ಜುಗತಿ ಮಾತನಾಡಿ, ಕನ್ನಡ ಎಂಬುದು ಅದು ಬರೆ ಭಾμÉಯಲ್ಲ, ಅದೊಂದು ಅದ್ಭುತವಾದ ಶಕ್ತಿ, ಕುವೆಂಪು ಅವರ ವಾಣಿಯಂತೆ ನಾವು ಎಲ್ಲೇ ಇದ್ದರೂ ಕನ್ನಡಿಗರಾಗ ಬೇಕು ಹೆತ್ತ ತಾಯಿ ಹೊತ್ತ ನಾಡು ಸ್ವರ್ಗಕ್ಕಿಂತಲೂ ಮಿಗಿಲು ಎಂದು ಹೇಳಿದರು.
ಸಂಸ್ಥೆ ಉಪಾಧ್ಯಕ್ಷ ರೋಹಿತ ಜುಗತಿ, ನಿರ್ದೇಶಕ ಡಾ, ನಾಗರಾಜ ಹೇರಲಗಿ, ಸಹಾಯಕ ಆಡಳಿತ ಅಧಿಕಾರಿ ಪ್ರಮೋದ ಕುಲಕರ್ಣಿ, ಸಂಯೋಜಕ ಸಾಗರ ಕುಲಕರ್ಣಿ, ಹಾಗೂ ಶಾಲಾ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.























