ಕನ್ನಡ ಪರಂಪರೆ ಶ್ರೇಷ್ಠವಾದದ್ದು


ಚನ್ನಮ್ಮನ ಕಿತ್ತೂರು,ಜ.೭: ಕನ್ನಡ ಪರಂಪರೆ ಬಹು ಶ್ರೇಷ್ಠವಾದದ್ದು. ಕನ್ನಡ ಭಾಷೆಗೆ ಸಾವಿರಾರು ವರ್ಷದ ಇತಿಹಾಸವಿದೆ. ಅನ್ಯ ಭಾಷೆ ಗೌರವಿಸಿ ಆದರೆ ಮೊದಲು ಮಾತೃ ಭಾಷೆಗೆ ಪ್ರಾಶಸ್ತö್ಯವಿರಲಿ ಎಂದು ಸಾಹಿತಿ ಪ್ರೋ. ಕೆ.ಎಸ್.ಕೌಜಲಗಿ ಹೇಳಿದರು.


ಸಮೀಪದ ಬೈಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮದ ಸರ್ಕಾರಿ ಕನ್ನಡ ಶಾಲೆ ಅಂಗಳದಲ್ಲಿ ೮ನೇ ಕನ್ನಡ ಸಾಹಿತ್ಯ ಪರಿಷತ್ತ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಮಾತನಾಡಿ ಈ ನಾಡಿನಲ್ಲಿ ಹುಟ್ಟಿದ ನಾವೆಲ್ಲ ಧನ್ಯರು ಈ ನೆಲ,ಜಲ. ಬಹಳ ಪವಿತ್ರವಾದದ್ದು. ಇದನ್ನು ರಕ್ಷಿಸುವ ನಮ್ಮೇಲ್ಲರ ದೊಡ್ಡ ಜವಾಬ್ದಾರಿಯಾಗಿದ್ದು ಮಕ್ಕಳಲ್ಲಿ ಸಾಹಿತ್ಯ ಮತ್ತು ಕನ್ನಡದ ಅಭಿರುಚಿ ಮೂಡಿಸಬೇಕು. ಎಂದರು.
ಸ್ವಾಗತ ಸಮಿತಿ ಅಧ್ಯಕ್ಷಣಿ ಕೆಪಿಸಿಸಿ ಸದಸ್ಯೆ ರೋಹಿನಿ ಪಾಟೀಲ ರಾಷ್ಟç ಧ್ವಜಾರೋಹಣ ನೇರವೇರಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.


ಕಸಾಪ ಅಧ್ಯಕ್ಷ ನಿಂಗಪ್ಪ ಠಕ್ಕಾಯಿ ನಾಡಧ್ವಜಾರೋಹಣ ನೇರವೇರಿಸಿ ಸ್ವಾಗತಿಸಿದರು.
ವಿಚಾರಗೋಷ್ಠಿ, ಕವಿಗೋಷ್ಠಿ, ಸಾಧಕರಿಗೆ ಸನ್ಮಾನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ಇದಕ್ಕೂ ಪೂರ್ವ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿವಿಧ ವಾದ್ಯಮೇಳದೊಂದಿಗೆ ಭುವನೇಶ್ವರಿ ಭಾವಚಿತ್ರ ಮೆರವಣಿಗೆ ನಡೆಯಿತು.


ಈ ಸಭೆಯಲ್ಲಿ ನೇಗಿನಹಾಳ ಮೂರುಸಾವಿರ ಮಠ ಪ್ರಭು ನೀಲಕಂಠ ಸ್ವಾಮಿಜೀ, ಹಾಗೂ ನೇಗಿನಹಾಳ ಸಿದ್ದಾರೂಢ ಮಠದ ಅದ್ವೆöÊತಾನಂದ ಸ್ವಾಮಿಜೀ ಸಾನಿಧ್ಯವಹಿಸಿದ್ದರು., ತಹಶೀಲ್ದಾರ ಹನಮಂತ ಶಿರಹಟ್ಟಿ, ಬಿಇಓ ಸಿ.ವೈ. ತುಬಾಕದ, ಎಸ್.ಎಸ್.ಕೂಡೊಕ್ಕಲಿಗ, ಪಿಡಿಓ ಬಸವಣ್ಣೆಪ್ಪ ಬಳಿಗಾರ, ಕಿತ್ತೂರು ಕಸಾಪ ಅಧ್ಯಕ್ಷ ಡಾ. ಎಸ್.ಬಿ. ದಳವಾಯಿ, ದಂತ ವೈದ್ಯೆ ಜಗದೀಶ ಹಾರೂಗೊಪ್ಪ, ಶಾಂತಿನಾಥ ದಿಬ್ಬದ, ಸಿ.ಕೆ. ಮೆಕ್ಕೇದ, ಮಹಾಂತೇಶ ತುರಮರಿ, ಮೋಹನ ಪಾಟೀಲ, ಎಸ್.ಡಿ.ಗಂಗಣ್ಣವರ, ಮಾರುದ್ರಪ್ಪ ನಂದೆನ್ನವರ, ಗ್ರಾಪಂ ಅಧ್ಯಕ್ಷೆ ಮಹಾದೇವಿ ಕೊಟಗಿ, ಮಡಿವಾಳಪ್ಪ ಕಲ್ಲೋಳ್ಳಿ, ಅನ್ವರ್ ಸೇರಿದಂತೆ ಗ್ರಾಪಂ ಸರ್ವಸದಸ್ಯರು, ಪರಿಷತ್ತಿನ ಪದಾಧಿಕಾರಿಗಳು, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.