
ಸೇಡಂ , ಜ ,10: ನಮ್ಮ ಸೇಡಂ ತಾಲೂಕಿನ ವ್ಯಾಪ್ತಿಯಲ್ಲಿ ಜನಸಂಖ್ಯೆ ಹೆಚ್ಚಳವಾದಂತೆ ನಗರವು ಬೆಳೆಯುತ್ತಿದ್ದು ಹಾಗೂ ಎಲ್ಲ ರೀತಿಯ ಅಭಿವೃದ್ಧಿ ಹೊಂದಿರುತ್ತದೆ. ಕುಂದು ಕೊರತೆಗಳ ಅನುಕೂಲ ಪಡೆಯಲು ಕಲಬುರಗಿಗೆ ಹೋಗಿ ಬರುವ ಸಂದರ್ಭ ಒದಗಿ ಬರುತ್ತಿದ್ದು ಆದ್ದರಿಂದ ಸೇಡಂ ತಾಲೂಕುವನ್ನು ಜಿಲ್ಲಾ ಕೇಂದ್ರವಾಗಿ ಘೋಷಿಸುವಂತೆ ಕನ್ನಡ ರಕ್ಷಣಾ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಶ್ರೀಶೈಲ ಎಂಜಿ ಅವರು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಶರಣಪ್ರಕಾಶ ಪಾಟೀಲ್ ಅವರಿಗೆ ಮನವಿ ಪತ್ರ ಸಲ್ಲಿಸಿ ಮುಖ್ಯಮಂತ್ರಿಗಳಿಗೆ ಗಮನಕ್ಕೆ ತಂದು ತಕ್ಷಣ ಸೇಡಂ ಜಿಲ್ಲಾ ಕೇಂದ್ರ ಮಾಡುವಲ್ಲಿ ಮುಂದಾಗಬೇಕೆಂದು ಒತ್ತಾಯಿಸಿದ್ದಾರೆ.























