ಕಂದಗಲ್ ಹನುಮಂತರಾಯ ಕರ್ನಾಟಕದ ಸೆಕ್ಸಪೀಯರ: ಹಾಸಿಂಪೀರ ವಾಲಿಕಾರ

ವಿಜಯಪುರ, ಜ. 29: ಕಂದಗಲ್ ಹನುಮಂತರಾಯ ಕರ್ನಾಟಕದ ಸೆಕ್ಸಪೀಯರ ಆಗಿದ್ದರು. ಅವರು ಐತಿಹಾಸಿಕ ಹಾಗೂ ಸಾಮಾಜಿಕ ನಾಟಕಗಳನ್ನು ಬರೆದು ಅಭಿನಯಿಸಿದ್ದಾರೆ. ಅನೇಕ ನಾಟಕಗಳನ್ನು ನಿರ್ದೇಶಿಸಿದ್ದಾರೆ. ರಂಗಾಯಣ. ನೀನಾಸಂ. ಜಮುರಾ. ಸಾಣೆಹಳ್ಳಿ. ಹಾಗು ಎಲ್ ಬಿ ಶೇಖ ಮಾಸ್ತರ ಅವರ ನಾಟಕಗಳನ್ನು ಜನರು ಇಂದಿಗೂ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಾರೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಅಭಿಪ್ರಾಯ ವ್ಯಕ್ತಪಡಿಸಿದರು
ಬುಧವಾರ ವಿಜಯಪುರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ರಂಗಾಯಣ ಧಾರವಾಡ. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ವಿಜಯಪುರ ಇವರ ಸಂಯುಕ್ತ ಆಶ್ರಯದಲ್ಲಿ ಜರುಗಿದ ” ಕಂದಗಲ್ಲರಿಗೆ ನಮಸ್ಕಾರ” ಅರ್ಥಾತ “ಕಂದಗಲ್ ಭಾರತ ” ನಾಟಕ ಉದ್ಘಾಟಿಸಿ ಮಾತನಾಡಿದರು.
ಕುಟುಂಬ ಸಮೇತ ನೋಡುವ ನಾಟಕಗಳ ಅವಶ್ಯಕತೆಯಿದೆ. ಅಶ್ಲೀಲ ಮಾತುಗಳ ನಾಟಕಗಳು ಸಾಮಾಜಿಕ ವ್ಯವಸ್ಥೆಗೆ ಕಂಟಕವಾಗಿವೆ ಎಂದರು
ಅಧ್ಯಕ್ಷತೆ ವಹಿಸಿದ್ದ ರಾಜ್ಯ ಕಾಂಗ್ರೆಸ್ ಮುಖಂಡೆ ಶ್ರೀದೇವಿ ಉತ್ಲಾಸರ ಮಾತನಾಡಿ, ಕಂದಗಲ್ ಹನುಮಂತರಾಯರ ರಕ್ತರಾತ್ರಿ ಐತಿಹಾಸಿಕ ನಾಟಕ ಅತ್ಯಂತ ಪ್ರಸಿದ್ಧವಾಗಿತ್ತು. ಬಾಲ್ಯದಿಂದಲೆ ನಾಟಕದ ಹವ್ಯಾಸ ಬೆಳೆಸಿಕೊಂಡರು. ರಂಗಭೂಮಿ ಶ್ರೇಷ್ಠ ಕಲಾವಿದರಾಗಿ ಕನ್ನಡ ಸಾಹಿತ್ಯಕ್ಕೆ ಅಪಾರವಾದ ಕೊಡುಗೆ ನೀಡಿದರು. ಇಂದಿನ ಸಮಾಜದ ವಾಸ್ತವಿಕ ಪ್ರಜ್ಞೆಯನ್ನು ಮೂಡಿಸುವ ನಾಟಕಗಳು ಅತ್ಯವಶ್ಯಕ ಎಂದರು.
ನಾಟಕ ಅಕಾಡೆಮಿಯ ಮಾಜಿ ಅಧ್ಯಕ್ಷ ಎಲ್.ಬಿ. ಶೇಖ ಮಾಸ್ತರ ಮುಖ್ಯ ಅತಿಥಿಗಳಾಗಿ ಮಾತನಾಡಿ, ಕಿತ್ತೂರ ರಾಣಿ ಚೆನ್ನಮ್ಮ ನಾಟಕ ಬರೆದು ಪ್ರದರ್ಶನ ನೀಡಿದ ಕೀರ್ತಿ ಕಂದಗಲ್ ಹನುಮಂತರಾಯ ಇವರಿಗೆ ಸಲ್ಲುತ್ತದೆ.
ಅದ್ಭುತ ಕಲಾವಿದರಾಗಿ ಕನ್ನಡ ನಾಡಿನ ರಂಗಭೂಮಿಗೆ ಗೌರವ ತಂದವರು.
ಐತಿಹಾಸಿಕ ಪಾತ್ರ ಮಾಡುವಲ್ಲಿ ಮುಂಚೂಣಿಯಲ್ಲಿದ್ದರು. ಇಂದು ಧಾರವಾಡ ರಂಗಾಯಣ ಅವರ ಜೀವನ ಆಧಾರಿತ ನಾಟಕ ಪ್ರದರ್ಶನ ಮಾಡುತ್ತಿರುವದು ಹೆಮ್ಮೆಯ ವಿಷಯ ಎಂದರು.
ರಂಗಾಯಣ ನಿರ್ದೇಶಕಿ ಶಶಿಕಲಾ ಹುಡೇದ, ಶರಣ ಚಿಂತಕಿ ಶಶಿಕಲಾ ಇಜೇರಿ, ಲಲಿತಕಲಾ ಅಕಾಡೆಮಿಯ ಸದಸ್ಯೆ ರಾಜಶ್ರೀ ಮೋಪಗಾರ,
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯೆ ದಾಕ್ಷಾಯಿಣಿ ಹುಡೇದ, ವಿಶ್ರಾಂತ ಅಧಿಕಾರಿ ಭಾಗೀರಥಿ ಸಿಂಧೆ, ಹಿರಿಯ ಪತ್ರಕರ್ತ ಅಲ್ಲಮಪ್ರಭು ಮಲ್ಲಿಕಾರ್ಜುನಮಠ ವೇದಿಕೆಯ ಮೇಲಿದ್ದರು.
ಶಶಿಕಲಾ ನಾಯ್ಕೊಡಿ ಪ್ರಾಥಿ9ಸಿದರು. ಮಮತಾ ಮುಳಸಾವಳಗಿ ಸ್ವಾಗತಿಸಿದರು. ಎಂ.ಬಿ. ಕಟ್ಟಿಮನಿ ನಿರೂಪಿಸಿದರು. ಡಾ ಶೈಲಾ ಬಳಗಾನೂರ ವಂದಿಸಿದರು. ರಶ್ಮಿ ಬದ್ನೂರ ಹಾಗೂ ಮಂಜುಳಾ ಕಾಳಗಿ ನಿವ9ಹಿಸಿದರು. ಅಸಂಖ್ಯಾತ ಪ್ರೇಕ್ಷಕರು ನಾಟಕವನ್ನು ವೀಕ್ಷಿಸಿದರು.