ಕಣಸೂರ,ತೆಂಗಳಿ ಸೇತುವೆ ಜಲಾವೃತ

ಕಾಳಗಿ: ಸೆ.23:ತಾಲೂಕಿನ ಬೆಣ್ಣೆತೋರಾ ಜಲಾಶಯ ಸಂಪೂರ್ಣ ಭರ್ತಿಯಾದ ಹಿನ್ನಲೆ ಜಲಾಶಯದ ಸುರಕ್ಷತೆಯ ದೃಷ್ಟಿಯಿಂದ ಭಾನುವಾರ ರಾತ್ರಿ 55 ಸಾವಿರ ಕ್ಯೂಸೆಕ್ ನೀರು ಹೊರಗಡೆ ಬಿಟ್ಟ ಪರಿಣಾಮವಾಗಿ ಕಣಸೂರ ಸೇತುವೆ, ತೆಂಗಳಿ ಸೇತುವೆ ಮುಳುಗಡೆಯಾಗಿವೆ.

ಗ್ರಾಮಗಳು ಜಲಾವೃತಗೊಂಡಿವೆ ಎಂಬ ಸುದ್ದಿ ತಿಳಿದು ಭಾನುವಾರ ರಾತ್ರಿಯೇ ಎಸ್ಪಿ ಅಡ್ಡರು ಶ್ರೀನಿವಾಸಲು ಜಿ.ಪಂ ಸಿಇಒ ಭಂವರಸಿಂಗ ಮೀನಾ, ಶಾಹಾಬಾದ ಡಿವಾಯ್ ಎಸಿ ಶಂಕರಗೌಡ ಪಾಟೀಲ್ ಅವರು ಪ್ರವಾಹಕೊಳ್ಳಗಾದ ಹಳೆ ಹೆಬ್ಬಾಳ, ಕಣಸೂರ, ಕಲಗುರ್ತಿ, ತೆಂಗಳಿ ಭೇಟಿ ನೀಡಿ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ತಹಸೀಲ್ದಾರ್ ಪೃಥ್ವಿರಾಜ ಪಾಟೀಲ್ ಹಾಗೂ ತಾಪಂ ಇಒ ಡಾ. ಬಸಲಿಂಗಪ್ಪ ಡಿಗ್ಗಿ ಸೇರಿ ಕಂದಾಯ ಇಲಾಖೆ, ಪಟ್ಟಣ ಪಂಚಾಯತ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಂದ ಕಣಸೂರ, ಹೆಬ್ಬಾಳ, ತೆಂಗಳಿ ಗ್ರಾಮಗಳಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದೆ. ಹೆಬ್ಬಾಳ ಕಾಳಜಿ ಕೇಂದ್ರದಲ್ಲಿ-82, ಕಣಸೂರ ಕಾಳಜಿ

ಕೇಂದ್ರದಲ್ಲಿ-192, ತೆಂಗಳಿ ಕಾಳಜಿ ಕೇಂದ್ರದಲ್ಲಿ-140 ಜನರಿಗೆ ರಾತ್ರಿ ಊಟ, ಬೆಳಿಗ್ಗೆ ಉಪಹಾರ ವ್ಯವಸ್ಥೆ ಮಾಡಿಸಲಾಯಿತು. ಪೆÇಲೀಸ ಇಲಾಖೆ ಸಿಬ್ಬಂದಿ

ಭೇಟಿ ನೀಡಿ ಪ್ರವಾಹದಿಂದ ಮುಳುಗಡೆಯಾದ ಮನೆಗಳಿಗೆ ಭೇಟಿ ನೀಡಿದರು. ಮತ್ತು ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು.

ಕಾಳಗಿ-ಕಲಬುರಗಿಗೆ ಸಂಪರ್ಕ ಕಲ್ಪಿಸುವ ರಾಜ್ಯಹೆದ್ದಾರಿಯ ಕಣಸೂರ ಸೇತುವೆ ಮುಳುಗಡೆಯಾಗಿದ್ದರಿಂದ ಸಂಚಾರ ಸ್ಥಗಿತ

ಪ್ರವಾಹ ಪೀಡಿತ ಕಣಸೂರ, ಹಳೆ ಹೆಬ್ಬಾಳ ಗ್ರಾಮಗಳಿಗೆ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಭೇಟಿ ನೀಡಿದರು.

ಸೇರಿ ಇತರೆ ಇಲಾಖೆ ಅಧಿಕಾರಿಗಳನ್ನು ಸ್ಥಳದಲ್ಲಿ ನಿಯೋಜನೆ ಮಾಡಲಾಗಿದೆ.

ಡಿಸಿ ಭೇಟಿ: ಜಿಲ್ಲಾಧಿಕಾರಿ ಪೌಜಿಯಾ ತರನ್ನುಮ. ಅವರು ಸೋಮವಾರ ಕಣಸೂರ ಗ್ರಾಮಕ್ಕೆ

ಕಾಳಜಿ ಕೇಂದ್ರದಲ್ಲಿರುವ ಜನರಿಗೆ ಅಗತ್ಯ ಸೌಲಭ್ಯ ಕಲಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ನದಿ ತೀರದ ಜನರಿಗೆ ಸುರಕ್ಷಿತವಾಗಿರಲು ಮುನ್ನಚ್ಚರಿಕೆ ವಹಿಸುವಂತೆ ತಿಳಿಸಿದರು.