ತಾಳಿಕೋಟೆ:ನ.೯: ಪಟ್ಟಣದ ಮಿಣಜಗಿ ಕ್ರಾಸ್‌ನಲ್ಲಿರುವ ಶ್ರೀ ಘನಮಠೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರದಂದು ಶ್ರೀ ಸಂತ ಕನಕದಾಸರ ಜಯಂತಿಯನ್ನು ಆಚರಣೆ ಮಾಡಲಾಯಿತು.
ಈ ಸಮಯದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಎಸ್.ಎಂ.ಸಜ್ಜನ ಅವರು ಕನಕದಾಸರ ಭಾವಚಿತ್ರಕ್ಕೆ ಪುಷ್ಪಹಾರ ಹಾಕಿ ಗೌರವಿಸಿ ಮಹಾ ಪೂಜೆ ಸಲ್ಲಿಸಿದರಲ್ಲದೇ ದಾಸ ಸಂತತಿಯ ಶ್ರೇಷ್ಠ ದಾಸರು ಕನಕದಾಸರ ಜೀವನ ಚರಿತ್ರೆ ತಿಮ್ಮಪ್ಪನಾಗಿ ಜನಿಸಿ ದಾಸ ಪರಂಪರೆಯ ಶ್ರೇಷ್ಠ ದಾಸ ಕನಕದಾಸರಾಗಿ ಬದಲಾದ ಒಂದು ಚರಿತೆಯನ್ನು, ಅವರ ಕೀರ್ತನೆಯ ಸಾರ ದಾಸ ಸಂತತಿಯ ಪರಂಪರೆ ಇದ್ಧ ಕಾಲದಲ್ಲಿಯೇ ಜಾತಿ ವ್ಯವಸ್ಥೆಯ ಬಗ್ಗೆ ವಿರೋಧಿಸಿದ ಒಬ್ಬ ಮಹಾನ್ ಸಂತರು “ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನ್ನಾದರೂ ನೀವು ಬಲ್ಲಿರಾ ಹುಚ್ಚಪ್ಪ ಗಳಿರ” ಅಂತ ಹೇಳಿರುವ ದಾಸರ ನುಡಿಗಳನ್ನು ಮಕ್ಕಳಿಗೆ ತಿಳಿಸುತ್ತಾ ಕನಕದಾಸರು ಎಷ್ಟು ಕಾಲಗಳು ಕಳೆದರೂ ಅವರು ನಮ್ಮೆಲ್ಲರಿಗೂ ಸ್ಪೂರ್ತಿಯಾಗಿ ನಿಲ್ಲುತ್ತಾರೆ ಎಂದು ತಿಳಿಸಿದರು. ಆದಕಾರಣ ಈ ೨೧ನೇ ಶತಮಾನದಲ್ಲಿ ನಾವೆಲ್ಲರೂ ಆವಾಗಲೇ ಕನಕದಾಸರು ವಿರೋಧಿಸಿದ ಜಾತಿ ವ್ಯವಸ್ಥೆಯನ್ನು ವರ್ಣವಸ್ಥೆಯನ್ನು ಈ ದಿನಮಾನಗಳಲ್ಲಿ ನಾವುಗಳು ಕೂಡ ಅದನ್ನು ವಿರೋಧಿಸಿ ನಾವೆಲ್ಲ ಒಂದೇAಬ ಭಾವನೆಯನ್ನು ದಾಸರ ನಡೆದು ಬಂದ ದಾರಿ ಅವರ ಆದರ್ಶಗಳನ್ನ ಮೈಗೂಡಿಸಿಕೊಂಡು ಸಾಗಬೇಕಾಗಿದೆ ಎಂದು ತಿಳಿಸಿದರು.
ಈ ಸಮಯದಲ್ಲಿ ಸಂಸ್ಥೆಯ ಕಾಯದರ್ಶಿ ವಿವೇಕಾನಂದ ಸಜ್ಜನ, ಮುಖ್ಯಗುರುಗಳಾದ ಬಿ.ಜಿ.ಸಜ್ಜನ, ಶ್ರೀಮತಿ ಆರ್.ಎಸ್.ದೇಸಾಯಿ, ದೈಹಿಕ ಶಿಕ್ಷಕ ಶಿವಾನಂದ ಸುಣಧೋಳಿ, ಪಿಯು ಕಾಲೇಜ್ ಪ್ರಾಚಾರ್ಯ ಬಿ.ಎಸ್ ಮಾಲಿಪಾಟೀಲ್ ಸಿಬಿಎಸ್‌ಇ ಪ್ರಾಚಾರ್ಯ ಜಯಚಂದ್ರ, ಬಿಎಡ್ ಕಾಲೇಜ್ ಪ್ರಾಚಾರ್ಯ ಶ್ರೀಮತಿ ಜಿ.ಎನ್.ಪಾಟೀಲ, ಆಯ್.ಟಿ.ಆಯ್. ಕಾಲೇಜಿನ ಪ್ರಾಶುಪಾಲರಾದ ರಾಜು ಹಜೇರಿ, ಹಾಗೂ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಲ್ಮೇಶಸರ್ ಕಾರ್ಯಕ್ರಮವನ್ನು ನಿರೂಪಿಸಿದರು.



























