
ಬೀದರ್ :ಫೆ.೧೯: ಟೋಕರೆ ಕೋಳಿ ಸಮಾಜವು ಇತಿಹಾಸ ಪ್ರಸಿದ್ಧ ಹಾಗೂ ಸಂಸ್ಕೃತಿ ಸಮೃದ್ಧ ಸಮಾಜವಾಗಿದೆ. ಈ ಸಮುದಾಯದಲ್ಲಿ ಅನೇಕ ಶರಣರು, ಸಂತರು ಹಾಗೂ ಮಹಾತ್ಮರು ಜನ್ಮತಾಳಿ ಸಮಾಜಕ್ಕೆ ದಾರಿದೀಪವಾಗಿದ್ದಾರೆ ಎಂದು ಬೀದರ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೆಂದ್ರ ಬೆಲ್ದಾಳೆ ಹೇಳಿದರು.ಅವರು ರವಿವಾರ ರಾತ್ರಿ ಬೀದರ ತಾಲೂಕಿನ ಕಮಠಾಣಾ ಗ್ರಾಮದಲ್ಲಿ ಟೋಕರೆ ಕೋಳಿ ಸಮಾಜದಿಂದ ನಡೆದ ಮಹಾಶಿವರಾತ್ರಿ ಪ್ರಯುಕ್ತ ನಿಜ ಶರಣ ಅಂಬಿಗರ ಚೌಡಯ್ಯನವರ ಜೀವನ ಚರಿತ್ರೆ ಕುರಿತು ಐದು ದಿನಗಳ ಪ್ರವಚನ ಸಮಾರೋಪ ಸಮಾರಂಭ ಕಾರ್ಯಕ್ರಮವು ಜ್ಯೋತಿ ಬೆಳೆಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.ಮುಂದಿನ ವರ್ಷ ಇದೇ ಪ್ರವಚನ ಕಾರ್ಯಕ್ರಮವನ್ನು ೧೧ ದಿನಗಳ ಕಾಲ ವೈಭವದಿಂದ ಆಯೋಜಿಸಿ, ಪರಮಪೂಜ್ಯ ಶ್ರೀ ರಾಜಶೇಖರ್ ಗುರೂಜಿಯವರ ಉಪದೇಶ ಮತ್ತು ಸಂದೇಶವನ್ನು ಕಮಠಾಣಾ ಗ್ರಾಮದ ಪ್ರತಿಯೊಂದು ಮನೆಮನೆಗೂ ತಲುಪಿಸುವ ಸಂಕಲ್ಪ ವ್ಯಕ್ತಪಡಿಸಿದರು. ಈ ಮಹಾದೇವ ಮಂದಿರ ದುರಸ್ತಿಗೆ ನನ್ನ ಅನುದಾನದಿಂದ ಹತ್ತು ಲಕ್ಷ ನೀಡುವುದಾಗಿ ಘೋಷಿಸಿದರು. ಯಾವಾಗಲೂ ಟೋಕರೆ ಕೋಳಿ ಸಮಾಜದ ಅಭಿವೃದ್ಧಿಗೆ ತಾನು ಸದಾ ತನು ಮನ ಧನಗಳಿಂದ ಸಹಾಯ ಸಹಕಾರ ನೀಡಲು ಸಿದ್ಧನಿದ್ದೇನೆ ಎಂದರು.ಹುಡಗಿ ಗ್ರಾಮದ ಅಂಬಿಗರ ಚೌಡಯ್ಯ ಧರ್ಮಪೀಠದ ಪರಮ ಪೂಜ್ಯ ಶ್ರೀ ರಾಜಶೇಖರ್ ಗುರೂಜಿ ಅವರ ದಿವ್ಯ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡುತ್ತ ಮಾತನಾಡಿ, ಇಂದಿನ ಯುವ ಪೀಳಿಗೆ ದುಶ್ಚಟಗಳಿಗೆ ಬಲಿಯಾಗದೆ ಶಿಕ್ಷಣ, ಸಂಸ್ಕಾರ ಮತ್ತು ಶಿಸ್ತಿನ ಮಾರ್ಗದಲ್ಲಿ ನಡೆಯಬೇಕು ಎಂದರು.ಮಕ್ಕಳು ತಮ್ಮ ಜೀವನವನ್ನು ಸದುದ್ದೇಶಗಳೊಂದಿಗೆ ರೂಪಿಸಿಕೊಂಡು, ಪೋಷಕರಿಗೆ ಹೆಮ್ಮೆ ತರುವಂತೆ ಹಾಗೂ ಸಮಾಜಕ್ಕೆ ಆದರ್ಶವಾಗುವಂತೆ ಬದುಕಬೇಕು ಎಂದು ಕರೆ ನೀಡಿದರು.ಮಹರ್ಷಿ ವಾಲ್ಮೀಕಿ ಆಶ್ರಮ ಹಳ್ಳಿಖೇಡ(ಕೆ) ವಾಡಿಯ ಪರಮ ಪೂಜ್ಯ ದತ್ತಾತ್ರೇಯ ಗುರೂಜಿ ಆಶಿರ್ವಚನ ನೀಡಿದರು.
ಸಮಾಜದ ಹಿರಿಯ ಮುಖಂಡರಾದ ನಾರಾಯಣ ಭಂಗಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಕುಶಾಲರಾವ್ ಪಾಟೀಲ್ ಯಾಬಾ, ಅಂಬಿಗರ ಚೌಡಯ್ಯ ಯುವ ಸೇನೆಯ ಸಂಸ್ಥಾಪಕ ಅಧ್ಯಕ್ಷ ಸುನೀಲ ಭಾವಿಕಟ್ಟಿ, ವಿದ್ಯಾವತಿ ಹಿರೇಮಠ್, ಟೋಕರೆ ಕೋಳಿ ಸಮಾಜ ಸಂಘದ ಬೀದರ ದಕ್ಷಿಣ ಅಧ್ಯಕ್ಷ ಷಣ್ಮುಖಪ್ಪ ಶೇಖಾಪುರ್ ಸೇರಿದಂತೆ ಇತರರು ಮಾತನಾಡಿದರು.
ಚಂದ್ರಪ್ಪ ಬೇಮಳಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರೇಖಾ ಹೊಸಮನಿ, ಎಂ.ಡಿ. ಗೌಸುದ್ದೀನ್, ಸರಸ್ವತಿ ಜಮಾದಾರ, ಶರಣಪ್ಪ ಖಾಶೆಂಪುರ, ಅರುಣಕುಮಾರ್ ಬಾವಗೆ, ಅಶೋಕ ಭಂಡೆ, ರಾಜಕುಮಾರ್ ಜಮಾದಾರ್, ಸಂಜೀವಕುಮಾರ್ ಸಿರ್ಸೆ ಪಂಡರಿ ನೇಳಗಿ, ಗೋವಿಂದ ಜಾಲಿ, ಮಹಾನಂದಾ, ನೇಳಗಿ, ಚಂದ್ರಕಾAತ ಹಳ್ಳಿಖೇಡಕರ್, ಸೇರಿದಂತೆ ಹಲವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಸಂತೋಷ್ ಕೋಹಿರ ಸ್ವಾಗತಿಸಿ, ಸಂಜೀವಕುಮಾರ ಗುಮಾಸ್ತಿ ನಿರೂಪಿಸಿದರು. ದತ್ತು ಕೋಲಿ ವಂದಿಸಿದರು.
ಈ ಕಾರ್ಯಕ್ರಮದಲ್ಲಿ ಅನೀಲ ಭಂಡೆ, ಜಗನಾಥ, ಕಿರಣ ಆಲೂರೆ, ನರಸಪ್ಪ ಚೀನಗಿಪಳ್ಳಿ, ಬಸವರಾಜ ಭೂತಾಳಿ, ಸಂಜುಕುಮಾರ್ ಚೀನಗಿಪಳ್ಳಿ, ಬಾಬುರಾವ ಭೂತಾಳಿ, ರಮೇಶ ಲಾಡಗೇರಿ, ಶಿವಕುಮಾರ ಭೂತಾಳಿ, ಅಶೋಕ ಮುತ್ತಂಗಿ, ಶಿವಪ್ಪ ಚೀನಗಿಪಳ್ಳಿ, ವಿಜಯಕುಮಾರ ಔಟಿ, ಶಂಕರ ಬೇಮಳಖೇಡ, ನಾಗೇಶ ಚೀನಗಿಪಳ್ಳಿ, ದತ್ತು, ರೋಹಿತ ಔಟಿ, ಅಭಯ ಕಂದಗೂಳ ಸೇರಿದಂತೆ ಸಮಾಜದ ಮುಖಂಡರು, ಹಿರಿಯರು, ಮಹಿಳೆಯರು, ಯುವಕರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಮಹಾಶಿವರಾತ್ರಿ ಅಂಗವಾಗಿ ನಡೆದ ಈ ಐದು ದಿನಗಳ ಪ್ರವಚನ ಸಮಾರೋಪ ಸಮಾರಂಭ ಭಕ್ತಿಭಾವ ಹಾಗೂ ಸಾಮಾಜಿಕ ಜಾಗೃತಿ ಸಂದೇಶಗಳೊAದಿಗೆ ಯಶಸ್ವಿಯಾಗಿ ನೆರವೇರಿತು.
ಸಮಾಜದ ನಾಯಕತ್ವ ವಹಿಸುವವರು ಮೊದಲು ತಮ್ಮ ನಡೆ ನುಡಿಗಳನ್ನು ಶ್ರೇಷ್ಠವಾಗಿಟ್ಟುಕೊಳ್ಳಬೇಕು. ನಾಯಕರು ಸರಿಯಾದ ದಾರಿಯಲ್ಲಿ ನಡೆದರೆ ಯುವ ಪೀಳಿಗೆ ಸಹ ಅದನ್ನೇ ಅನುಸರಿಸುತ್ತದೆ ಎಂದು ಹೇಳಿದರು.
ಯಾವುದೇ ಆರ್ಥಿಕ ಅಥವಾ ವೈಯಕ್ತಿಕ ಕಷ್ಟಗಳು ಬಂದರೂ ಮಕ್ಕಳ ಶಿಕ್ಷಣವನ್ನು ಯಾವ ಕಾರಣಕ್ಕೂ ನಿಲ್ಲಿಸಬಾರದು. ಶಿಕ್ಷಣವೇ ಸಮಾಜದ ಅಭಿವೃದ್ಧಿಗೆ ಮೂಲಸ್ತಂಭವಾಗಿದ್ದು, ಮಕ್ಕಳಿಗೆ ಉನ್ನತ ಶಿಕ್ಷಣ ಕಲಿಸಿ ದೊಡ್ಡ ಅಧಿಕಾರಿಗಳನ್ನಾಗಿಸುವ ಕನಸು ಪ್ರತಿಯೊಬ್ಬ ಪೋಷಕರೂ ಕಟ್ಟಿಕೊಳ್ಳಬೇಕು. ಆಗ ಮಾತ್ರ ಸಮಾಜದ ಸಮಗ್ರ ಪ್ರಗತಿ ಸಾಧ್ಯವಾಗುತ್ತದೆ.
ಮಾಣಿಕ ನೇಳಗಿ
ಹಿರಿಯ ಸಾಹಿತಿಗಳು, ಬೀದರ್






















