ಕಮಲನಗರ: ವಿವಿಧೆಢೆ ಕನಕದಾಸ ಜಯಂತಿ ಸರಳ ಆಚರಣೆ,ಸಮಾಜಕ್ಕೆ ಕನಕದಾಸರ ಕೊಡುಗೆ ಅಪಾರ: ಎಂ.ಎಸ್.ಹಿರೇಮಠ

ಕಮಲನಗರ: ನ.೯:ಹರಿದಾಸ ಸಂತ, ತತ್ವಜ್ಞಾನಿ, ಕಿರ್ತನಕಾರ, ದಾಸ ಶ್ರೇಷ್ಠರೆಂದೇ ಕರೆಯಲಾಗುವ ಶ್ರೀಕೃಷ್ಣನ ಭಕ್ತ ಕನಕದಾಸರು ಸಮಾಜಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ ಎಂದು ಮುಖ್ಯಶಿಕ್ಷಕ ಮನೋಜಕುಮಾರ ಹಿರೇಮಠ ಹೇಳಿದರು.
ಪಟ್ಣಣದ ಭಾಗಿರಥಿ ಪಬ್ಲಿಕ್ ಶಾಲೆಯಲ್ಲಿ ದಾಸಶ್ರೇಷ್ಠ ಕನಕದಾಸ ಜಯಂತಿ ಪ್ರಯುಕ್ತ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅವರು ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಮಾತನಾಡಿದರು.
ಕನಕದಾಶರು ಕೇವಲ ಸಂತರಾಗಿ ಮಾತ್ರವಲ್ಲ, ಒಬ್ಬ ಉತ್ಕಟ ಸಮಾಜ ಸುಧಾಕರೂ ಆಗಿದ್ದರು. ಸಮಾಜದಲ್ಲಿ ಸಮತೋಲನವನ್ನು ತರುವುದಕ್ಕಾಗಿ ಪ್ರದಿಪಾದಿಸಿದರು. ಆ ಕಾಲದಲ್ಲಿ ಚಾಲ್ತಿಯಲ್ಲಿದ್ದ ಜಾತಿ ವ್ಯವಸ್ಥೆಯ ವಿರುದ್ಧ ನಿರಂತರವಾಗಿ ಹೋರಾಟ ಮಾಡಿದವರು ಎಂದರು.
ಶಿಕ್ಷಕಿ ದೀಪಮಾಲಾ, ಸಂಗೀತಾ ಕಾಂಬಳೆ, ರಾಜಶ್ರೀ ಸಿರಗಿರೆ, ಅಂಜಲಿ ಕಾಂಬಳೆ, ಅಂಬಿÀಕಾ, ಶೀತಲ, ಶ್ರೀದೇವಿ ಇದ್ದರು.

ತಹಶೀಲ್ದಾರ್ ಕಚೇರಿ:
ಪಟ್ಟಣದ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಭಕ್ತ ಕನಕದಾಸ ಜಯಂತಿ ಆಚರಿಸಿದರು.
ತಹಶೀಲ್ದಾರ್ ಅಮಿತಕುಮಾರ ಕುಲಕರ್ಣಿ ದಾಸರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದ ನಂತರ ಮಾತನಾಡಿ, ಕನಕದಾಸರ ಬೋಧನೆಗಳು ಮ್ತು ಕಾರ್ಯಗಳು ಸಾಮಾಜಿಕ ಅನ್ಯಾಯಗಳನ್ನು ಬಹಿರಂಗವಾಗಿ ಟೀಕಿಸಿದವು ಮತ್ತು ಅಳುವಿನ ಅಂಚಿನಲ್ಲಿರುವ ಸಮುದಾಯಗಳ ಹಕ್ಕುಗಳನ್ನು ಪ್ರತಿಪಾದಿಸಿದವು. ಇದು ಕರ್ನಾಟಕದಲ್ಲಿ ಭಕ್ತಿ ಚಳುವಳಿಯ ಮೇಲೆ ಪ್ರಭಾವ ಬೀರಿತು, ಭಕ್ತಿ ಮತತು ಒಳಗೊಳ್ಳುವಿಕೆಯನ್ನು ಉತೇಜಿಸಿತು ಎಂದರು.
ಗ್ರೇಡ್-೨ ತಹಶೀಲ್ದಾರ್ ರಮೇಶ ಪೆದ್ದೇ, ಉಪತಹಶೀಲ್ದಾರ್ ಗೋಪಾಲಕೃಷ್ಣ, ಪರಮೇಶ್ವರ ಮೇತ್ರೆ, ಜ್ಞಾನೇಶ್ವರ ಹಿಪ್ಪಳಗಾಂವೆ, ನರೇಶ, ಪ್ರಶಾಂತ, ಏಕನಾಥ, ಸಂಘಟನೆ ಪ್ರಮುಖರು ಹಾಗೂ ಸಿಬ್ಬಂದಿ ವರ್ಗ ಪಾಲ್ಗೊಂಡಿದ್ದರು.
ಶಾAತಿವರ್ಧಕ ಪಿಯು ಕಾಲೇಜು:
ಪಟ್ಟಣದ ಶಾಂತಿ ವಧಕ ಪದವಿ ಪೂರ್ವ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಶನಿವಾರ ಸಮಾನತೆ ಹರಿಕಾರ ಭಕ್ತ ಕ£ಕದಾಸರ ಜಯಂತಿ ಆಚರಿಸಿದರು.
ಪ್ರಾಂಶುಪಾಲ ಶಿವಾಜಿ.ಆರ್.ಹೆಚ್ ಕನಕದಾಸರ ಭಾವಚಿತ್ರಕ್ಕೆ ಗೌರವ ಸಲ್ಲಿಸಿ ನಂತರ ಮಾತನಾಡಿ, ಕನಕದಾಸರೆಂದಾಕ್ಷಣ ಮೊದಲು ನಮಗೆ ನೆನಪಿಗೆ ಬರೋದು ಅವರಿಗೆ ಶ್ರೀಕೃಷ್ಣನ ಬಗ್ಗೆ ಇದ್ದ ಭಕ್ತಿ ಮತ್ತು ಪ್ರೀತಿ. ಅವರು ಕೃಷ್ಣನನ್ನು ತಮ್ಮ ಗುರು ಮತ್ತು ದೈವಿಕ ಪ್ರೀತಿಯ ಸಾರಾಂಶವಾಗಿ ನೋಡಿzವÀರು ಎಂದರು.
ಸAಜೀವಕುಮಾರ.ಎಸ್.ಚನ್ನಾಳೆ, ಮುಖ್ಯಶಿಕ್ಷಕ ರಾಮೇಶ್ವರ ಬಿರಾದಾರ್, ಜ್ಞಾನೇಶ್ವರ ಚಂಡೆಶ್ವೇರೆ, ಓಕೆ ಸೂರ್ಯವಂಶಿ, ಚಂದ್ರಕಾAತ ಭೈರೆ, ಪ್ರಣಾಲಿ ದೇಶಪಾಂಡೆ, ಸತೀಷ ಭೂರೆ, ಸತೀಷ ಮಟಕೆ, ನಾಗನಾಥ ಕೊಲ್ಲಾ, ಸಿದ್ದಪ್ಪ ಯರ್ನಳೆ, ಬುಜಂಗ ಕದಂ, ಸವಿತಾ ರಾಂಪುರೆ, ಸಿದ್ದಮ್ಮಾ ದಾನಾ, ಅಂಬಿಕಾ ಹಾಗೂ ಮಕ್ಕಳು ಇದ್ದರು.
ಮದನೂರು ಸರ್ಕಾರಿ ಶಾಲೆ:
ತಾಲ್ಲೂಕಿನ ಮದನೂರು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ದಾಸ ಶ್ರೇಷ್ಠ, ಸಮಾನತೆಯ ಹರಿಕಾರ, ಭಕ್ತ ಕನಕದಾಸ ಜಯಂತಿ ಪ್ರಯುಕ್ತ ಶನಿವಾರ ಮುಖ್ಯಶಿಕ್ಷಕ ಪ್ರಕಾಶ ಬೆಂಬುಳಗೆ ಅವರು ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಮಸ್ಕರಿಸಿದರು.
ಕಸಾಪ ಕಮಲನಗರ ತಾಲ್ಲೂಕು ಘಟಕ ಅಧ್ಯಕ್ಷ ಪ್ರಶಾಂತ ಮಠಪತಿ ಮಾತನಾಡಿ, ಭಕ್ತಿ ಪಂಥವನ್ನು ತಗೆದುಕೊಂಡಾಗ ನಮಗೆ ಅಲ್ಲಿ ಸಾಕಷ್ಟು ಕೀರ್ತನಾಕಾರರು ಸಿಗುತ್ತಾರೆ. ಅವರಲ್ಲಿ ಕನಕದಾಸರಿಗೆ ಅಗ್ರಸ್ಥಾನ. ಯಾಕೆಂದರೆ ವಿಡಂಬನಾತ್ಮಕ ದೃಷ್ಟಿಕೋನ ಮತ್ತು ಹಾಸ್ಯ ಪ್ರಜ್ಷೆಯೂ ಅಸದಳವಾದುದಾತ್ತು. ಕನಕದಾಸರ ಭಕ್ತಿಗೆ ಮೆಚ್ಚಿ ಉಡುಪಿಯಲ್ಲಿ ನೆಲೆನಿಂತ ಸಾಕ್ಷಾತ್ ಶ್ರೀಕೃಷ್ಣನೇ ತಿರುಗಿ ಕಿಂಡಿಯ ಮೂಲಕ ದರ್ಶನವನ್ನು ನೀಡಿದ್ದಾನೆ ಎಂದು ತಿಳಿಸಿದರು.ಶಿಕ್ಷಕಿ ಗೀತಾ ಸಜ್ಜನ, ಶ್ರೀಪಾದ ಕುಲಕರ್ಣಿ ಹಾಗೂ ಮಕ್ಕಳು ಪಾಲ್ಗೊಂಡಿದ್ದರು.