
ಕಮಲನಗರ:ಏ.7:ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಡಾ| ಬಾಬಾ ಸಾಹೇಬ್ ಅಂಬೇಡ್ಕರರ 135ನೇ ಜಯಂತಿ ಪೂರ್ವಭಾವಿ ಸಭೆ ಸೋಮವಾರ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ ತಹಶೀಲ್ದಾರ್ ಅಮಿತಕುಮಾರ ಕುಲಕರ್ಣಿ ಮಾತನಾಡಿ, ಸಂವಿಧಾನ ಶಿಲ್ಪಿ ಡಾ| ಬಾಬಾ ಸಾಹೇಬ್ ಭೀಮರಾವ ಅಂಬೇಡ್ಕರ್ ಅವರ 135ನೇ ಜಯಂತಿಯನ್ನು ಸಡಗರ ಮತ್ತು ಸಂಭ್ರಮದಿಂದ ಆಚರಿಸೋಣ ಎಂದು ಹೇಳಿದರು.
ತಹಶೀಲ್ದಾರ್ ಕಚೇರಿಯ ಆವರಣದಲ್ಲಿ ಬೆಳಗ್ಗೆ 9 ಗಂಟೆಗೆ ಡಾ| ಬಿ. ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಮತ್ತು ಮಾಲಾರ್ಪಣೆ ಸಲ್ಲಿಸಲಾಗವುದು ಎಂದು ಹೇಳಿದರು.
ನಂತರ ಎಂಪಿಎಸ್ ಆವರಣದಲ್ಲಿ ಮೆರವಣಿಗೆ ನಂತರ ವೇದಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು.
ಶಾಂತಿವರ್ಧಕ ಪಿಯು ಕಾಲೇಜು ಪ್ರಾಂಶುಪಾಲ ಶಿವಾಜಿ.ಆರ್.ಹೆಚ್ ಅವರು ಡಾ. ಬಿ.ಆರ್ ಅಂಬೇಡ್ಕರ ಕುರಿತು ವಿಶೇಷ ಉಪನ್ಯಾಸ ಮಡಿಸುವರು ಎಂದು ತಿಳಿಸಿದರು. ಅಂಬೇಡ್ಕರ್ ಅವರ ಜಯಂತಿ ನಿಮಿತ್ಯ ಸಾಮಾಜಿಕ ಕಾರ್ಯಕರ್ತರಿಗೆ ಮತ್ತು ವಿವಿಧ ಸಂಘಟನೆ ಅಧ್ಯಕ್ಷರಿಗೆ ಮತ್ತು ಪದಾಧಿಕಾರಿಗಳು ಹಾಗೂ ಗಣ್ಯರಿಗೆ ಆಮಂತ್ರಣ ಪತ್ರ ನೀಡಲಾಗವುದು ಎಂದರು.
ಈ ಸಂದರ್ಭದಲ್ಲಿ ಇಓ ಹಣಮಂತರಾವ ಕೌಟಗೆ, ಸಮಾಜ ಕಲ್ಯಾಣ ಅಧಿಕಾರಿ ಡಾ. ಉತ್ತಮ ನಾಯಕ, ಆರೋಗ್ಯ ವೈದ್ಯಾಧಿಕಾರಿ ಶ್ರೀಮಂತ ಮಡಿವಾಳ, ಆಹಾರ ನಿರೀಕ್ಷರು ಶಿವಾನಂದ ಪಾಟೀಲ್, ಡಾ. ಅಂಬೇಡ್ಕರ್ ವಸತಿ ಶಾಲೆಯ ಪ್ರಾಚಾರ್ಯ ರಾಜೇಂದ್ರ ನಿಟ್ಟೂರೆ, ಪಿಡಿಓ ದಿಲಿಪ, ದೇವರಾಜ, ಶಾಮರಾವ ಸೂಮವಂಶಿ, ಮನೋಹರ ಗಾಯಕವಾಡ, ದಲಿತ ಪ್ಯಾಂಥರ ಕಮಲನಗರ ತಾಲೂಕು ಘಟಕ ಅಧ್ಯಕ್ಷ ಜ್ಞಾನೋಬಾ ಕಾಂಬಳೆ, ದಿಲೀಪ ಸೂಮವಂಶಿ, ಸಂಜೀವಕುಮಾರ ಡೋಂಗರೆ, ದೇವಿದಾಸ ಶಿಂಧೆ, ಬಾಲಾಜಿ ಕಾಲೆಕರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಹಾಗೂ ಪ್ರಮುಖರು ಪಾಲ್ಗೊಂಡಿದ್ದರು.




















