
ಕಲಬುರಗಿ,ಜ.18-ಜಿಲ್ಲೆಯ ಕಮಲಾಪುರ ತಹಶೀಲ್ದಾರ ಕಚೇರಿಯ ಎಫ್‍ಡಿಎ ಶಶಿಕಾಂತ ಜಂಜೀರ್ ಅವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ತಹಶೀಲ್ದಾರರು ನಡೆಸಿದ ಸಿವಿಲ್ ವ್ಯಾಜ್ಯದ ಆದೇಶ ಪ್ರತಿಯನ್ನು ನೀಡಲು 10 ಸಾವಿರ ರೂ.ಲಂಚ ಪಡೆಯುತ್ತಿದ್ದಾಗ ರೆಡ್‍ಹ್ಯಾಂಡಾಗಿ ಲೋಕಾಯುಕ್ತರ ಬೆಲೆಗೆ ಬಿದ್ದಿದ್ದಾರೆ.
ಕವನಳ್ಳಿ ತಾಂಡಾದ ಕಿಶನ್ ರಥೋಡ್ ಎಂಬುವವರು ಸಲ್ಲಿಸಿದ ದೂರಿನ ಹಿನ್ನೆಲೆಯಲ್ಲಿ ಎಸ್‍ಪಿ ಸಿದ್ದರಾಜು ಸಿ.ಮಾರ್ಗದರ್ಶನದಲ್ಲಿ ಲೋಕಾಯುಕ್ತ ತನಿಖಾಧಿಕಾರಿ ಪೊಲೀಸ್ ಇನ್ಸಪೆಕ್ಟರ್ ಅರುಣಕುಮಾರ ಮುರಗುಂಡಿ ಮತ್ತು ಸಿಬ್ಬಂದಿ ದಾಳಿ ನಡೆಸಿದ್ದಾರೆ. ತನಿಖೆ ನಂತರ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುವುದು ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.






















