ಕಲ್ಯಾಣ ಕರ್ನಾಟಕ ಉತ್ಸವ ಆಚರಣೆ

ಕಲಬುರಗಿ:ಸೆ.17: ನಗರದ ಸರದಾರ ವಲ್ಲಭಭಾಯಿ ಪಟೇಲ್ ಎಜ್ಯುಕೇಷನ್ ಟ್ರಸ್ಟ್ ಸಂಚಾಲಿತ ರಮಾಬಾಯಿ ಜಹಾಗೀರದಾರ (ಆರ್.ಜೆ) ಸ್ವತಂತ್ರ ಪದವಿ ಪೂರ್ವ ವಿಜ್ಞಾನ ಕಾಲೇಜಿನಲ್ಲಿ 77ನೇ ಕಲ್ಯಾಣ ಕರ್ನಾಟಕ ಉತ್ಸವ ಸಮಾರಂಭವನ್ನು ಆಚರಿಸಲಾಯಿತು. ಮಹತ್ಮಾ ಗಾಂಧೀಜಿ, ಸರದಾರ ವಲ್ಲಭಭಾಯಿ ಪಟೇಲ, ಡಾ|| ಬಿ. ಆರ್. ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿ, ಧ್ವಜಾರೋಹಣವನ್ನು ನೆರವೇರಿಸಿದ ಪ್ರಾಂಶುಪಾಲರಾದ ಡಾ. ಭುರ್ಲಿ ಪ್ರಹ್ಲಾದ ಈ ಭಾಗದ ಅನೇಕ ನಾಯಕರು ಸಮಾಜ ಸುಧಾರಕರು ಹೋರಾಟ ಮಾಡಿ 371ಜೆ ಕಲಂಅನ್ನು ಜಾರಿಗೆ ತರುವಲ್ಲಿ ಸಫಲರಾದರು. ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆಯಬೇಕು ಹಾಗೂ ವಿಶ್ವಕರ್ಮ ಜಯಂತಿಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಕಾಲೇಜಿನ ಉಪಪ್ರಾಚಾರ್ಯ ಕೇದಾರ ದೀಕ್ಷಿತ್, ಉಪನ್ಯಾಸಕರಾದ ಮಳೇಂದ್ರ ಹಿರೇಮಠ, ಪ್ರಕಾಶ ಕಾಂತೀಕಾರ, ಎ. ಪ್ರಸಾದ, ರಾಜು ಗುತ್ತೇದಾರ, ನವೀನ ಪಾಟೀಲ್. ದಿವ್ಯಾ ಪಟವಾರಿ, ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿಗಳಾದ ಪ್ರಕಾಶ ಚವ್ಹಾಣ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.