ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ

ಬೀದರ, ಸೆ.18: ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನದ ಫಲವಾಗಿ ಭಾರತದೇಶಕ್ಕೆ 1947 ಅಗಸ್ಟ್ 15ರಂದು ಸುಮಾರು 250 ಕ್ಕೂ ಹೆಚ್ಚು ವರ್ಷಗಳ ಕಾಲದಿಂದ ಬ್ರಿಟಿಷರ್ ದಾಸ್ಯದಲ್ಲಿದ್ದ ಭಾರತದೇಶಕ್ಕೆ ಸ್ವಾತಂತ್ರ್ಯ ಲಭಿಸಿದರೆ, ಹೈದರಾಬಾದ್ ಪ್ರಾಂತ್ಯಕ್ಕೆ ಸೇರಿದ ಬೀದರ್, ಕಲಬುರಗಿ (ಗುಲಬರ್ಗಾ), ಯಾದಗಿರ, ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ವಿಜಯ ನಗರ 7 ಜಿಲ್ಲೆಗಳನ್ನೊಳಗೊಂಡ ಆಗಿನ ಹೈದರಾಬಾದ್ ಕರ್ನಾಟಕ ಈಗಿನ ಕಲ್ಯಾಣ ಕರ್ನಾಟಕ ಮಾತ್ರ ಸ್ವತಂತ್ರವಾಗಿರಲಿಲ, ಒಂದು ವರ್ಷ ತಡವಾಗಿ, ಅಂದರೆ 1948 ಸೆಪ್ಟೆಂಬರ್ 17 ರಂದು ಪಟೇಲರ ರಾಜಕೀಯ ಮುತ್ಸದ್ದಿತನ ಮತ್ತುಚಾಣಾಕ್ಷತನದಿಂದ ಬಹು ಜನರ ಆಶಯದಂತೆ ಈ ಪ್ರಾಂತ್ಯವನ್ನು ಭಾರತದಲ್ಲಿ ವಿಲೀನಗೊಳಿಸಲು ಕಾರ್ಯತಂತ್ರ ರೂಪಿಸಿದ ಪ್ರಯುಕ್ತ ನಿಝಾಮನನ್ನು ಶರಣಾಗುವಂತೆ ಮಾಡಿ ಹೈದರಾಬಾದ್ ಪ್ರಾಂತ್ಯವನ್ನು ವಿಮೋಚನೆಯಾಗುವಂತೆ ಕಾರ್ಯತಂತ್ರವನ್ನು ರೂಪಿಸಿದರು ಎಂದು ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ.ಎಸ್.ವಿ.ಪಾಟೀಲ ಹೇಳಿದರು.
ಅವರು ಬುಧವಾರ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬಾಗಲಕೋಟೆಯಡಿಯಲ್ಲಿ ಬರುವತೋಟಗಾರಿಕೆ ಮಹಾವಿದ್ಯಾಲಯ ಬೀದರನಲ್ಲಿ 77 ನೇ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಲ್ಯಾಣಕರ್ನಾಟಕದ ಮೊದಲಿನ ಸ್ಥಿತಿಗತಿಯ ಬಗ್ಗೆ ಹಾಗೂ ಇನ್ನು ಹೆಚ್ಚು ಅಭಿವೃದ್ಧಿಹೊಂದಲು ಕೈಗೊಳ್ಳಬಹುದಾದ ಯೋಜನೆಗಳ ಬಗ್ಗೆ ವಿಸ್ತೃತವಾಗಿ ವಿವರಿಸಿ, ಎಲ್ಲ ಮಹನೀಯರು ಗಳಿಸಿಕೊಟ್ಟ ಸ್ವಾತಂತ್ರವನ್ನು ಉಳಿಸಿಕೊಂಡು ಹೋಗುವುದು ಪ್ರತಿಯೊಬ್ಬರಜವಾಬ್ದಾರಿಯಾಗಿರುತ್ತದೆ. ಸ್ವಾತಂತ್ರ ದಿನವೆಂಬುದು ಪ್ರತಿಯೊಬ್ಬ ಭಾರತೀಯರ ಹೃದಯಲ್ಲಿಚಿರಸ್ಥಾಯಿಯಾಗಿರಬೇಕೆಂದು, ನಮ್ಮದೇಶವು ಶ್ರೀಮಂತ ಸಂಸ್ಕøತಿ, ವೈವಿಧ್ಯತೆಯಲ್ಲಿಏಕತೆ ಮತ್ತುಎಲ್ಲಾಧರ್ಮದವರು ಸೌಹಾರ್ದತೆಯಿಂದಇದ್ದು, ಸಮಸ್ತ ನಾಡಿನ ಶ್ರೇಯೋಭಿವೃದ್ಧಿಗೆ ಪ್ರಾಮಾಣಿಕ ಮತ್ತು ನಿಸ್ವಾರ್ಥದಿಂದ ಕೈ ಜೋಡಿಸೋಣವೆಂದರು.
ಈ ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕ ಡಾ. ಮುಹಮ್ಮದ ಫಾರೂಖ, ಸಹಾಯಕ ಪ್ರಾಧ್ಯಾಪಕ ಡಾ. ವಿಜಯಮಹಾಂತೇಶ, ರಾಷ್ಟ್ರೀಯ ಸೇವಾ ಯೋಜನಾ ಅಧಿಕಾರಿ ಡಾ. ವಿರೇಂದ್ರ ಪ್ರತಾಪಸಿಂಹ, ಸಹಾಯಕ ಪ್ರಾಧ್ಯಾಪಕರು, ಮಹಾವಿದ್ಯಾಲಯದ ಇನ್ನಿತರ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗದವರು ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.