ಹುಮನಾಬಾದ್: ಸೆ.18:ಕಲ್ಯಾಣ ಕರ್ನಾಟಕ ಉತ್ಸವ
ಕಾರ್ಯಕ್ರಮವನ್ನು 2026ರಲ್ಲಿ ನಗರದಲ್ಲಿ ತಾಲ್ಲೂಕು ಆಡಳಿತದಿಂದ ಮಿನಿವಿಧಾನ ಸೌಧ ಪ್ರಾಂಗಣದಲ್ಲಿ ನಡೆಸುವ ಬದಲಿಗೆ ವಲ್ಲಭಭಾಯಿ ಪಟೇಲ ವೃತ್ತದಲ್ಲಿಯೇ ಕಾರ್ಯಕ್ರಮ ಯೋಜನೆ ರೂಪಿಸುವಂತೆ ಶಾಸಕ ಡಾ.ಸಿದ್ದು ಪಾಟೀಲ ತಹಶೀಲ್ದಾರ್ ಅವರಿಗೆ ಸಲಹೆ ನೀಡಿದರು.
ಕಲ್ಯಾಣ ಕರ್ನಾಟಕ ದಿನಾಚರಣೆ ಅಂಗವಾಗಿ ಪಟೇಲ ವೃತ್ತದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಇಡೀ ದೇಶ ಸ್ವಾತಂತ್ಯವಾದರೂ ಕ.ಕ ಭಾಗದ ಜಿಲ್ಲೆಗಳು ಮಾತ್ರ ಹೈದರಾಬಾದ್ ನಿಜಾಮನ ವಶದಲ್ಲಿದ್ದವು.ಈ ಭಾಗದ ರಾಮಚಂದ್ರ ವೀರಪ್ಪ ಸೇರಿದಂತೆ ಅಸಂಖ್ಯಾತ ರಾಷ್ಟ್ರ ಪ್ರೇಮಿಗಳು ಹೋರಾಡಿದ್ದಾರೆ ಎಂದರು.
ವಿಧಾನ ಪರಿಷತ್ ಸದಸ್ಯ ಭೀಮರಾವ ಪಾಟೀಲ ಮಾತನಾಡಿ, ಮುಂದಿನ ವರ್ಷ ಸರ್ದಾರ ಪಟೇಲ ವೃತ್ತದಲ್ಲಿ ಕಾರ್ಯಕ್ರಮವನ್ನು ಆಯೋಜಿಸಬೇಕೆಂಬ ಶಾಸಕರ ಸಲಹೆಗೆ ನನ್ನ ಸಹಮತವಿದೆ. ಅದೊಂದು ವಿಶಿಷ್ಟ ಹಾಗೂ ಇಡೀ ಜಿಲ್ಲೆಗೆ ಮಾದರಿ ಆಗಬೇಕು ಎಂದರು.
ಅಂಬೇಡ್ಕರ್‍ನಿಗಮ ಮಾಜಿ ಸದಸ್ಯ ಬಸವರಾಜ ಆರ್ಯ ಮಾತನಾಡಿದರು. ತಹಸೀಲ್ದಾರ್‍ಅಂಜುಮ್‍ತಬಸುಮ್, ಪುರಸಭೆಅಧ್ಯಕ್ಷೆಪಾರ್ವತಿಮಡಿವಾಳಪ್ಪಾ,ಉಪಾ ಧ್ಯಕ್ಷಮುಕರಂಜಾ, ತಾಲೂಕು ಅಧಿಕಾರಿದೀಪಿಕಾನಾಯಕರ್, ಪುರಸಭೆಮುಖ್ಯಾಧಿಕಾರಿ ವನೀತಾಬಾಯಿ, ಸದಸ್ಯ ಅಪ್ಪರಮಿಯ್ಯ, ಧನಲಕ್ಷ್ಮೀ ಗೂಡಕೆ, ಓಂಪ್ರಕಾಶ ಅಗಡಿ, ಶಿವಲಿಂಗಯ್ಯ ಅಂದೆನಮಠ, ಶಿವಕುಮಾರಭೂರಿ, ಅಶೋಕ್ , ಸಂತೋಷಮುಹಳೆ, ಗೋಪಾಲಕೃಷ್ಣ, ಡಾ.ಗೋವಿಂದ, ಅಧಿಕಾರಿನಿಂಗರಾಜ, ಸೇರಿದಂತೆ ಅನೇಕರು ಇದ್ದರು.





















