
ಕಲಬುರಗಿ:ಡಿ.30: ನಗರದ ಕನ್ನಡ ಭವನದ ಆವರಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) (ಕನ್ನಡ ಪರ ಸಂಘಟನೆಗಳ ಒಕ್ಕೂಟ) ಉತ್ತರ ಕರ್ನಾಟಕ ನೇತೃತ್ವದಲ್ಲಿ ಕನ್ನಡ ಅಭಿಮಾನ ಉತ್ಸವಗಳು 2025 ಹಾಗೂ 20ನೇ ವರ್ಷದ ಕಲ್ಯಾಣ ಕಲಬುರಗಿ ಉತ್ಸವ ಹಾಗೂ ಕಲ್ಯಾಣ ಕಲಬುರಗಿ ಸಿರಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಗಣ್ಯರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ ಸದಸ್ಯ ಶಶೀಲ ನಮೋಶಿ, ಹಿರಿಯ ಹೋರಾಟಗಾರ ಲಕ್ಷ್ಮಣ ದಸ್ತಿ, ಕಾಮಿಡಿ ಕಿಲಾಡಿಗಳಾದ ಸಂಜು ಬಸಯ್ಯ, ಪಲ್ಲವಿ ಮುರಗೋಡ, ಶ್ರೀಗುರು ಕಾಲೇಜಿನ ಮುಖ್ಯಸ್ಥ ನಿತೀನ ನಾಯಕ, ಕಾಂಗ್ರೆಸ್ ಮುಖಂಡ ನೀಲಕಂಠರಾವ ಮೂಲಗೆ, ಉತ್ತರ ಕರ್ನಾಟಕ ಅಧ್ಯಕ್ಷ ಡಾ. ಶರಣು ಬಿ. ಗದ್ದುಗೆ, ಕಲ್ಯಾಣ ಕರ್ನಾಟಕ ಅಧ್ಯಕ್ಷ ಅಭಿಷೇಕ ಬಾಲಾಜಿ, ಕ.ಕ ಪ್ರಧಾನ ಕಾರ್ಯದರ್ಶಿ ಗೋಪಾಲ ನಾಟೀಕಾರ, ಎಂ.ಎನ್.ದೇಸಾಯಿ ಪದವಿ ಮಹಾವಿದ್ಯಾಲಯದ ಅಧ್ಯಕ್ಷ ಸಂದೀಪ ದೇಸಾಯಿ, ಅ.ಭಾ.ವೀ.ಮ ಸಭಾದ ಮಹಿಳಾ ಜಿಲ್ಲಾಧ್ಯಕ್ಷೆ ಜ್ಯೋತಿ ಮರಗೋಳ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಮಾಜಿ ಸದಸ್ಯ ಸುರೇಶ ಬಡಿಗೇರ, ಕಾಂಗ್ರೆಸ್ ಮುಖಂಡ ಶರಣ ಅಲ್ಲಮಪ್ರಭು ಪಾಟೀಲ, ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಶಿವಾನಂದ ಹೊನಗುಂಟಿಕರ್, ಕ.ಕ ಸಂಚಾಲಕ ಮನೋಹರ ಜೀರನೂರ, ಜಿಲ್ಲಾ ಅಧ್ಯಕ್ಷ ವಿಶ್ವನಾಥ ಜಿ. ಪಾಟೀಲ, ಕ.ಕ. ವಾಣಿಜ್ಯ ಅಧ್ಯಕ್ಷ ನಾಗರಾಜ ದಮ್ಮೂರ, ಜಿಲ್ಲಾ ಗೌರವಾಧ್ಯಕ್ಷ ಮಂಜುನಾಥ ಕುಸನೂರ, ನಗರ ಅಧ್ಯಕ್ಷ ಶರಣು ದ್ಯಾಮಾ, ತಾಲ್ಲೂಕ ಅಧ್ಯಕ್ಷ ವಿಜಯಕುಮಾರ ಅಂಕಲಗಿ ಸೇರಿದಂತೆ ಕರವೇ ಪದಾಧಿಕಾರಿಗಳು ಇದ್ದರು.
























