Home ಜಿಲ್ಲೆ ಕಲಬುರಗಿ ಕಾಳಗಿ : ಬಕ್ರೀದ್ ಹಬ್ಬ ಶಾಂತಿ ಸಭೆ

ಕಾಳಗಿ : ಬಕ್ರೀದ್ ಹಬ್ಬ ಶಾಂತಿ ಸಭೆ

ಕಾಳಗಿ :ಮೇ.26: ‘ಬಕ್ರೀದ್ ಹಬ್ಬವನ್ನು ಶಾಂತಿ ಮತ್ತು ಸೌಹಾರ್ದತೆಯಿಂದ ಆಚರಿಸುವ ಮೂಲಕ ಕಾನೂನು ಸುವ್ಯವಸ್ಥೆ ಕಾಪಾಡಬೇಕು’ ಎಂದು ಸಿ.ಪಿ.ಐ ಜಗದೇವಪ್ಪ ಪಾಳಾ ಸಾರ್ವಜನಿಕರಿಗೆ ಸೂಚಿಸಿದರು.

ಪಟ್ಟಣದ ಪೆÇಲೀಸ್ ಠಾಣೆ ಆವರಣದಲ್ಲಿ ಸೋಮವಾರ ಬಕ್ರೀದ್ ಹಬ್ಬದ ಅಂಗವಾಗಿ ನಡೆದ ಶಾಂತಿ ಪಾಲನಾ ಸಭೆಯಲ್ಲಿ ಮಾತನಾಡಿದರು.

‘ಯಾವುದೇ ಧರ್ಮದ ಸಾಮಾಜಿಕ ವ್ಯವಸ್ಥೆಗೆ ಧಕ್ಕೆ ಆಗಬಾರದು. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ಮಾಡಿಕೊಡದಂತೆ ಹಬ್ಬ ಆಚರಿಸಿ’ ಎಂದರು.

ಪಿ.ಎಸ್.ಐ ತಿಮ್ಮಯ್ಯ ಬಿ.ಕೆ, ತಾ.ಪಂ ಇಓ ಬಸಲಿಂಗಪ್ಪ ಡಿಗ್ಗಿ, ಉಪ ತಹಸೀಲ್ದಾರ್ ಮಾಣಿಕ್ ಘತ್ತರಗಿ, ದತ್ತು ಕಲಾಲ, ಪಟ್ಟಣ ಪಂಚಾಯತ ಸದಸ್ಯರಾದ ರಮೇಶ ಕಿಟ್ಟದ ಗುರುರಾಜ ಮದ್ದೂರ, ದತ್ತು ಗುತ್ತೇದಾರ, ಶರಣಪ್ಪ ಬೇಲೂರ, ಮುಖಂಡರಾದ ಮಹಮ್ಮದ್ ಗೂಡುಸಾಬ್, ಪರಮೇಶ್ವರ ಮಡಿವಾಳ, ಸುಂದರ ಸಾಗರ, ಮುನೀರ್ ಬಿಜಾಪುರ ಸೇರಿದಂತೆ
ಪೆÇಲೀಸ್ ಇಲಾಖೆ ಸಿಬ್ಬಂದಿ, ವಿವಿಧ ಸಮುದಾಯದ ಮುಖಂಡರು ಸೇರಿದಂತೆ ಸಾರ್ವಜನಿಕರಿದ್ದರು.