
ಕಲಬುರಗಿ,ಮೃ 9: ಸ್ಥಳೀಯವಾಗಿ ಸ್ವಸಹಾಯ ಸಂಘಗಳ ಮೂಲರಕ ತಯಾರಿಸುವ ಕಲಬುರಗಿ ರೊಟ್ಟಿ ಇದೀಗ ವಿದೇಶದಲ್ಲಿ ಲಭ್ಯವಾಗುತ್ತಿದೆ. ಒಂದುವರೆ ವರ್ಷದಲ್ಲೇ ಕಲಬುರಗಿ ರೊಟ್ಟಿ ವಿದೇಶಿ ಮಾರುಕಟ್ಟೆಯಲ್ಲಿ ಸಿಗುವಂತೆ ಕ್ರಮವಹಿಸಲಾಗಿದ್ದು ಇದು ಹೆಮ್ಮೆಯ ವಿಷಯವಾಗಿದೆ ಎಂದುಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ನಗರದ ಅರಿವಿನ ಮನೆ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಆಸ್ಟ್ರೇಲಿಯಾ, ಅಮೇರಿಕಾ ಹಾಗೂ ಕೆನಡ ದೇಶಗಳಿಗೆ ರಫ್ತು ಮಾಡಲು ತಯಾರಿಸಿದ ಬಾಕ್ಸ್ ಗಳಿಗೆ ಹಸಿರುನಿಶಾನೆ ತೋರಿಸಿ, ಅಂಚೆ ಮೂಲಕ ವಿದೇಶಕ್ಕೆ ಅಂಚೆ ಮೂಲಕ ರಫ್ತು ಮಾಡಲು ಅಂಚೆ ಸಿಬ್ಬಂದಿಗೆ ಹಸ್ತಾಂತರ ಮಾಡಿ ಅವರು ಮಾತಮಾಡುತ್ತಿದ್ದರು.
ಕಳೆದ ಒಂದುವರೆ ವರ್ಷದ ಹಿಂದೆ “ಕಲಬುರಗಿ ರೊಟ್ಟಿ ” ಹೆಸರಿನಲ್ಲಿ ಬ್ರ್ಯಾಂಡ್ 100 ರೊಟ್ಟಿ ಸ್ವಸಹಾಯ ಸಂಘಗಳ ಮೂಲಕ ಒಟ್ಟು 1000 ಮಹಿಳೆಯರು ರೊಟ್ಟಿ ತಯಾರಿಸುತ್ತಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಕಲಬುರಗಿ ರೊಟ್ಟಿ ಪುಣೆ ಮೂಲದ ರಫ್ತು ಕಂಪನಿಯ ಮೂಲಕ ಅಮೇರಿಕಾ, ಕೆನಡಾ ಹಾಗೂ ಆಸ್ಟ್ರೇಲಿಯಾ ಗಳಿಗೆ ರಫ್ತು ಮಾಡಲು ಕ್ರಮವಹಿಸಲಾಗಿದೆ. ಇದು ನಮ್ಮ ಕಲಬುರಗಿ ಯ ಹೆಮ್ಮೆಯ ವಿಷಯವಾಗಿದೆ ಎಂದರು.ಪ್ರತಿ ತಿಂಗಳು ಅಮೇರಿಕಾ ಹಾಗೂ ಆಸ್ಟ್ರೇಲಿಯಾ ಗೆ ತಲಾ 10,000 ಹಾಗೂ ಕೆನಡಾ ದೇಶಕ್ಕೆ 5000 ಕಲಬುರಗಿ ಜೋಳದ ರೊಟ್ಟಿ ರಫ್ತು ಮಾಡಲು ಕ್ರಮವಹಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಹೆಚ್ಚಾಗಲಿದೆ.
ವೇದಿಕೆಯ ಮೇಲೆ ಶಾಸಕರಾದ ಅಲ್ಲಮಪ್ರಭು ಪಾಟೀಲ್ ,ಎಂ ಎಲ್ ಸಿಗಳಾದ ಜಗದೇವ ಗುತ್ತೇದಾರ, ತಿಪ್ಪಣ್ಣಪ್ಪ ಕಮಕನೂರು, ಜೆಸ್ಕಾಂ ಚೇರ್ ಮನ್ ಪ್ರವೀಣ್ ಹರವಾಳ, ಕುಡಾ ಅಧ್ಯಕ್ಷ ಮಹಜರ್ ಖಾನ್, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಸಿಇಓ ಭಂವರ್ ಸಿಂಗ್ ಮೀನಾ, ಮಹಾನಗರ ಪಾಲಿಕೆ ಕಮೀಷನರ್ ಅವಿನಾಶ ಶಿಂಧೆ, ಸುಮಿತ್ ಪಾಟೀಲ್ ಸೇತರಿದಂತೆ ಹಲವರಿದ್ದರು.
ಕಲಬುರಗಿ ರೊಟ್ಟಿ
ಕಲಬುರಗಿ ರೊಟ್ಟಿಯನ್ನು “ಕಲಬುರಗಿ ರೊಟ್ಟಿ” ಬ್ರಾಂಡ್ ಮೂಲಕ ಅಮೇಜಾನ್, ಕಲಬುರಗಿ ರೊಟ್ಟಿ ವೆಬ್ ಸೈಟ್, ಪ್ರಾಂಚೈಸಿ ಹಾಗೂ ಲೋಕಲ್ ಮಾರ್ಕೆಟ್ ಮೂಲಕ ಮಾರಾಟ ಮಾಡಲಾಗುತ್ತಿದೆ.ಕಲಬುರಗಿ ರೊಟ್ಟಿ ಬ್ರ್ಯಾಂಡ್ ನಲ್ಲಿ 100 ಕ್ಕಿಂತ ಹೆಚ್ಚು ಸ್ವಸಹಾಯ ಸಂಘಗಳು ಹಾಗೂ 1000 ಕ್ಕಿಂತ ಹೆಚ್ಚು ಮಹಿಳೆಯರು ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ.ಕಲಬುರಗಿ ರೊಟ್ಟಿ ಉತ್ಪಾದನೆ ಮಾಡುವ ಮಹಿಳೆಯರು ಪ್ರತಿ ತಿಂಗಳು 15 ರಿಂದ 20 ಸಾವಿರ ರೂಪಾಯಿವರೆಗು ಆದಾಯ ಗಳಿಸುತ್ತಿದ್ದು, ಮದುವೆ ಹಾಗೂ ಇತರೆ ಸಮಾರಂಭಗಳಿಂದ ಹೆಚ್ಚು ಆಧಾಯಗಳಿಸುತ್ತಿದ್ದಾರೆ.


























